Thursday, July 23, 2026
Homeಜಿಲ್ಲೆಮಂಗಳೂರು ; 'ಹೋಳಿಯ ಹೆಸರಿನಲ್ಲಿ ಅನೈತಿಕ ಚಟುವಟಿಕೆ ನಡೆದರೆ ಪರಿಣಾಮ ನೆಟ್ಟಗಿರಲ್ಲ': ಪುನೀತ್ ಅತ್ತಾವರ.

ಮಂಗಳೂರು ; ‘ಹೋಳಿಯ ಹೆಸರಿನಲ್ಲಿ ಅನೈತಿಕ ಚಟುವಟಿಕೆ ನಡೆದರೆ ಪರಿಣಾಮ ನೆಟ್ಟಗಿರಲ್ಲ’: ಪುನೀತ್ ಅತ್ತಾವರ.

ಮಂಗಳೂರು : ಹೋಳಿ ಹಬ್ಬದ ಹೆಸರಿನಲ್ಲಿ ಅನೈತಿಕ ಚಟುವಟಿಕೆ ನಡೆದರೆ ಪರಿಣಾಮ ನೆಟ್ಟಗಿರಲಾರದು ಎಂದು ಬಜರಂಗದಳ ವಿಭಾಗ ಸಂಯೋಜಕ ಪುನೀತ್ ಅತ್ತಾವರ ಎಚ್ಚರಿಕೆ ನೀಡಿದ್ದಾರೆ.

‘ಹೋಳಿ ಎನ್ನುವುದು ಮಹತ್ವಪೂರ್ಣ ಆಚರಣೆ’ ‘ಅದಕ್ಕೆ ಅದರದ್ದೇ ಆದ ಧಾರ್ಮಿಕ ಹಿನ್ನೆಲೆ ಇದೆ’ ‘ಆದ್ರೆ ಇತ್ತೀಚಿನ ದಿನಗಳಲ್ಲಿ ಹೋಳಿ ಹಬ್ಬದ ಹೆಸರಿನಲ್ಲಿ ಗಾಂಜಾ, ಡ್ರಗ್ಸ್,‌ಅಫೀಮು ಸೇವಿಸಿ ಅನೈತಿಕ ಚಟುವಟಿಕೆ’ ನಡೆಯುತ್ತಿರುವ ಜಾಲ ಕರಾವಳಿ ಭಾಗದಲ್ಲಿ ಇದೆ ಎಂದು ಹೇಳಿದ್ದಾರೆ.

ಕಳೆದ ಬಾರಿ ಮರೋಳಿಯಲ್ಲಿ ಹೋಳಿ ಕಾರ್ಯಕ್ರಮ ಆಯೋಜಿಸಿದ್ದರ ಪರಿಣಾಮ ಏನಾಗಿತ್ತು ಅನ್ನೋದನ್ನ ಮನವರಿಕೆ ಮಾಡಿಕೊಳ್ಳಿ ಎಂದು ನೆನಪಿಸಿದ್ದು,ಯುವ ಸಮುದಾಯವನ್ನ ತಪ್ಪು ಹಾದಿಗೆಳೆಯುವ ಕೃತ್ಯ ಎಸಗಲಾಗುತ್ತಿದೆ. ಇಂತಹ ಕಾರ್ಯಕ್ರಮಗಳಿಗೆ ಅನುಮತಿ ನೀಡಬಾರದು.ಈ ಬಗ್ಗೆ ಈಗಾಗ್ಲೇ ಪೊಲೀಸ್ ಇಲಾಖೆಗೆ ಬಜರಂಗದಳ ಮನವಿ ಮಾಡಿದ್ದು ಅದನ್ನೂ ಮೀರಿ ಕಾರ್ಯಕ್ರಮ ಆಯೋಜಿಸಿದರೆ ನೇರ ಪರಿಣಾಮವನ್ನ ಸಂಘಟಕರೇ ಅನುಭವಿಸಬೇಕು ಎಂದು ಎಚ್ಚರಿಕೆ ನೀಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular