ಮಂಗಳೂರು : ಸೌದಿ ಅರೇಬಿಯಾದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಮಂಗಳೂರಿನ ಒಂದೇ ಕುಟುಂಬದ ನಾಲ್ವರು ಮೃತ್ಯು ಘಟನೆ ವರದಿಯಾಗಿದೆ.ಕತಾರ್ ನಿಂದ ಮದೀನಾಕ್ಕೆ ಉಮ್ರಾ ನಿರ್ವಹಿಸಲು ತೆರಳುತ್ತಿದ್ದ ವೇಳೆ ಕಾರು ಅಪಘಾತಕ್ಕೀಡಾಗಿ 3 ತಿಂಗಳ ಹಸುಗೂಸು ಸೇರಿ ಒಂದೇ ಮನೆಯ ನಾಲ್ಕು ಮಂದಿ ಮೃತಪಟ್ಟಿದ್ದಾರೆ.
ಮೃತರನ್ನು ಹಳೆಯಂಗಡಿ ತೋಕೂರು ನಿವಾಸಿ ಶಮೀಮ್ ಮತ್ತು ಝರೀನಾ ದಂಪತಿಯ ಪುತ್ರಿ ಹಿಬಾ ( 29) ಆಕೆಯ ಪತಿ ಮುಹಮ್ಮದ್ ರಮೀಝ್ (34) ಮಕ್ಕಳಾದ ಆರೂಶ್ (3) ಮತ್ತು ರಾಹ ( 3 ತಿಂಗಳು) ಎಂದು ತಿಳಿದುಬಂದಿದೆ.ಗಂಭೀಯ ಗಾಯಗೊಂಡಿದ್ದ ಹಿಬಾ ಅವರ ಸಹೋದರಿ ಶಬ್ನಮ್ ಎಂಬವರ ಮಗಳು ಫಾತಿಮಾ (19) ಆಕೆಯನ್ನು ರಿಯಾದ್ ನ ಆಸ್ಪತ್ರೆಯಲ್ಲಿ ಚಿಕಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ.
ರಮೀಝ್ ಅವರು ಚಲಾಯಿಸುತ್ತಿದ್ದ ಕಾರು ರಿಯಾದ್ ನಿಂದ ಹೋಗುವ ಮಾರ್ಗ ಮಧ್ಯದ ಸುಮಾರು 250 ಕಿ.ಮೀ. ದೂರದದಲ್ಲಿರುವ ಝುಲ್ಫಾ ಎಂಬಲ್ಲಿ ರಸ್ತೆ ವಿಭಾಜಕಕ್ಕೆ ಡಿಕ್ಕಿ ಹೊಡೆದಿದ್ದು ಅಪಘಾತದ ವೇಗಕ್ಕೆ ರಸ್ತೆಯಿಂದ ಹಲವು ಮೀಟರ್ ಗಳಷ್ಟು ದೂರಕ್ಕೆ ಎಸೆದು ಪಲ್ಟಿಯಾಗಿದೆ ಎಂದು ತಿಳಿದು ಬಂದಿದೆ.


