Wednesday, September 17, 2025
Flats for sale
Homeಕ್ರೈಂಮಂಗಳೂರು : ಕ್ರಿಮಿನಲ್ ಪ್ರಕರಣಗಳಲ್ಲಿ ಜಾಮೀನು ಪಡೆಯಲು ಆರೋಪಿಗಳಿಗೆ ನಕಲಿ ದಾಖಲೆ ಪತ್ರಗಳನ್ನು ತೋರಿಸಿ ಜಾಮೀನುದಾರರಾಗಿ...

ಮಂಗಳೂರು : ಕ್ರಿಮಿನಲ್ ಪ್ರಕರಣಗಳಲ್ಲಿ ಜಾಮೀನು ಪಡೆಯಲು ಆರೋಪಿಗಳಿಗೆ ನಕಲಿ ದಾಖಲೆ ಪತ್ರಗಳನ್ನು ತೋರಿಸಿ ಜಾಮೀನುದಾರರಾಗಿ ನ್ಯಾಯಾಲಯದ ಮುಂದೆ ಹಾಜರಾಗುತ್ತಿದ್ದ ಆರೋಪಿಗಳ ಬಂಧನ…!

ಮಂಗಳೂರು : ಮಂಗಳೂರು ನಗರದಲ್ಲಿ ಕೆಲವು ವ್ಯಕ್ತಿಗಳು ನಕಲಿ ಅಧಾರ್ ಕಾರ್ಡ್ ಮತ್ತು ಪಹಣಿ ಪತ್ರಗಳನ್ನು ತಯಾರಿಸಿ ಅವುಗಳನ್ನು ನೈಜ ದಾಖಲಾತಿಗಳೆಂದು ನಂಬಿಸಿ ವಿವಿಧ ಇಲಾಖೆಗಳಿಗೆ ಮತ್ತು ನ್ಯಾಯಾಲಯಕ್ಕೆ ನೀಡಿ ಕ್ರಿಮಿನಲ್ ಪ್ರಕರಣಗಳಲ್ಲಿ ಬಂಧಿತರಾಗಿರುವ ಆರೋಪಿಗಳಿಗೆ ಜಾಮೀನು ನೀಡಲು ಬಳಕೆ ಮಾಡುತ್ತಿರುವ ಬಗ್ಗೆ ಮಾಹಿತಿ ಬಂದ ಹಿನ್ನೆಲೆ ಉರ್ವ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಬ್ದುಲ್ ರೆಹಮಾನ್ ಎಂಬ ವ್ಯಕ್ತಿಯನ್ನು ವಶಕ್ಕೆ ಪಡೆದು ವಿಚಾರಣೆ ಮಾಡಲಾಗಿದ್ದು ಆತನು ನಕಲಿ ದಾಖಲಾತಿಗಳನ್ನು ಬಳಸಿ ಆರೋಪಿಗಳಿಗೆ ನ್ಯಾಯಾಲಯದಿಂದ ಜಾಮೀನು ಮಂಜೂರು ಮಾಡಲು ಸಹಾಯ ಮಾಡಿದ ಮಾಹಿತಿ ಬಗ್ಗೆ ಖಚಿತಗೊಂಡ ನಂತರ ಸಿಸಿಬಿ ಪೊಲೀಸರ ದೂರಿನ ಮೇರೆಗೆ ಈತನ ವಿರುದ್ಧ ಉರ್ವ ಪೊಲೀಸ್ ಠಾಣೆಯಲ್ಲಿ ಮೊ.ನಂಬ್ರ 81/2025 00 336[2]. 336[3], 340[2], 342[2], 318[4]. 3[5] 2.2.2 ದಾಖಲಾಗಿದೆ.

ಈ ಆರೋಪಿತಯನ್ನು ಬಂಧಿಸಿ ನ್ಯಾಲಯದ ಮುಂದೆ ಹಾಜರುಪಡಿಸಿ ಪೊಲೀಸ್ ವಶಕ್ಕೆ ಪಡೆದ ನಂತರ ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ ಈತನು ತನಗೆ ನಕಲಿ ದಾಖಲಾತಿಗಳನ್ನು ತಯಾರಿಸಲು ಸಹಕರಿಸುತ್ತಿದ್ದ ಕೊಡಿಯಾಲ್ ಬೈಲ್ ನ ಕಂಪ್ಯೂಟರ್ ಸೆಂಟರೊಂದರಲ್ಲಿ ಕೆಲಸಕ್ಕಿದ್ದ ಮತ್ತೊಬ್ಬ ಆರೋಪಿ ನಿಶಾಂತ್ ಕುಮಾರ್ ಎಂಬಾತನ ಬಗ್ಗೆ ಮಾಹಿತಿ ನೀಡಿದ್ದು, ಆತನನ್ನು ಸಹ ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಿ ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ.

ಈ ಇಬ್ಬರೂ ಆರೋಪಿಗಳನ್ನೂ ಹೆಚ್ಚಿನ ತನಿಖೆಗೆ ಒಳಪಡಿಸಿದಾಗ ನ್ಯಾಯಾಲಯಗಳಲ್ಲಿ ಆರೋಪಿಗಳಿಗೆ ಜಾಮೀನು ನೀಡುವ ಸಮಯ ನಕಲಿ ಆಧಾರ್ ಕಾರ್ಡ್ ಗಳಲ್ಲಿ ತಮ್ಮ ಫೋಟೋಗಳನ್ನು ಹಾಕಿಸಿಕೊಂಡು ಅಸಲಿ ವ್ಯಕ್ತಿಗಳಂತೆ ಮಾನ್ಯ ನ್ಯಾಯಾಲಯದ ಮುಂದೆ ಹಾಜರಾಗಿ ಆರೋಪಿಗಳಿಗೆ ಜಾಮೀನು ನೀಡಿ ನ್ಯಾಯಾಲಯಕ್ಕೆ ವಂಚಿಸಿ ಎರಡು ಪ್ರಕರಣಗಳಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿಗಳಿಗೆ ಜಾಮೀನು ಕೊಡಿಸಿರುವ ವ್ಯಕ್ತಿಗಳ ಬಗ್ಗೆ ಮಾಹಿತಿ ನೀಡಿದ್ದು, ಈ ಬಗ್ಗೆ ಮಂಗಳೂರು ನಗರದ ಉತ್ತರ ಪೊಲೀಸ್ ಠಾಣೆಯಲ್ಲಿ 2 ಪ್ರಕರಣ ದಾಖಲು ಮಾಡಲಾಗಿದೆ.

ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ದಾಖಲಾದ 2 ಪ್ರಕರಣಗಳ ತನಿಖೆಯನ್ನು ಕೈಗೊಂಡಾಗ ಮಂಗಳೂರು ದಕ್ಷಿಣ ಪೊಲೀಸ್ ಠಾಣಾ ಮೊ.ನಂ. 24/22 ರಲ್ಲಿನ ಆರೋಪಿಗೆ ನಿತಿನ ಕುಮಾರ್. ಎಂಬಾತನು ಗಣೇಶ್ ಕೆ. ಸಾಲ್ಯಾನ್ ಎಂಬ ನಕಲಿ ಹೆಸರಿನಲ್ಲಿ ಜಾಮೀನು ಕೊಡಿಸಿ ಮಾನ್ಯ ನ್ಯಾಯಾಲಯಕ್ಕೆ ವಂಚಿಸಿರುವುದು ಕಂಡು ಬಂದಿದ್ದು, ಆತನನ್ನು ಬಂಧಿಸಲಾಗಿದೆ ಎಂದು ತಿಳಿದುಬಂದಿದೆ.

ಅದೇ ರೀತಿ ದಕ್ಷಿಣ ಪೊಲೀಸ್ ಠಾಣಾ ಮೊ.ಸಂ. 46/22 ರಲ್ಲಿನ ಅರೋಪಿಗೆ ಹಸನ್ ರಿಯಾಜ್ ಎಂಬಾತನು ಎ.ಎಂ. ಹಮೀದ್ ಎಂಬ ನಕಲಿ ಹೆಸರಿನಲ್ಲಿ ಜಾಮೀನು ಕೊಡಿಸಿ ಮಾನ್ಯ ನ್ಯಾಯಾಲಯಕ್ಕೆ ವಂಚಿಸಿರುವುದು ಕಂಡು ಬಂದಿದ್ದು, ಆತನನ್ನು ಕೂಡ ಬಂಧಿಸಲಾಗಿದೆ. ನ್ಯಾಯಾಲಯಕ್ಕೆ ನಕಲಿ ದಾಖಲಾತಿಗಳನ್ನು ನೀಡಿ ಆರೋಪಿಗಳಿಗೆ ಜಾಮೀನು ಕೊಡಿಸಲು ಸಹಕರಿಸುತ್ತಿದ್ದ ಬ್ರೋಕ್ರ್ ಹನೀಫ್ ಎಂಬಾತನ್ನುಬಂಧಿಸಿದ್ದಾರೆ.

ಬಂಧಿತರನ್ನು ಬಪ್ಪನಾಡು ಗ್ರಾಮ ಮುಲ್ಕಿ ನಿವಾಸಿ ಅಬ್ದುಲ್ ರೆಹಮಾನ್ (46 ) ತೊಕ್ಕೊಟ್ಟು ನಿವಾಸಿ ನಿಶಾಂತ್ ಕುಮಾರ್ (28) ಬಂಟ್ವಾಳ ನಿವಾಸಿ ನಿತೀನ್ ಕುಮಾರ್ (31) ಸಜೀಪ ಮುನ್ನೂರು ನಿವಾಸಿ ಹಸನ್ ರಿಯಾಜ್ (46) ಕಾವೂರು ನಿವಾಸಿ ಮಹಮ್ಮದ್ ಹನಿಫ್ ಎಂದು ತಿಳಿದಿದೆ.

ಈ ವಂಚನೆ ಜಾಲದಲ್ಲಿ ಇನ್ನೂ ಹಲವಾರು ಅರೋಪಿಗಳು ಭಾಗಿಯಾಗಿರುವ ಬಗ್ಗೆ ಮಾಹಿತಿ ಇದ್ದು, ತನಿಖೆ ಮುಂದುವರೆದಿದೆ.ಈ ಕಾರ್ಯಾಚರಣೆಯು ಪೊಲೀಸ್ ಆಯುಕ್ತರಾದ ಸುಧೀರ್ ಕುಮಾರ್ ರೆಡ್ಡಿ. ಐಪಿಎಸ್ ರವರ ಮಾರ್ಗದರ್ಶನದಲ್ಲಿ ಉಪ ಪೊಲೀಸ್ ಆಯುಕ್ತರು (ಕಾನೂನು & ಸುವ್ಯವಸ್ಥೆ ವಿಭಾಗ) ರವರಾದ ಮಿಥುನ್ ಹೆಚ್.ಎನ್. IPS ಮತ್ತು ಉಪ ಪೊಲೀಸ್ ಆಯುಕ್ತರು (ಅಪರಾಧ ಮತ್ತು ಸಂಚಾರ ವಿಭಾಗ) ರವರಾದ ಕೆ.ರವಿಶಂಕರ್, KSPS ರವರ ನಿರ್ದೇಶನದಲ್ಲಿ ಮಂಗಳೂರು ನಗರದ ಪೊಲೀಸರು ನಡೆಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular