ಮಂಗಳೂರು : ಮುಮ್ತಾಜ್ ಆಲಿ ಅವರ ಆತ್ಮಹತ್ಯೆ ಒಂದೇ ದಿನದ ನಿರ್ಧಾರ ಆಗಿರಲಿಲ್ಲ ಅನ್ನೋದು ಇದೀಗ ಬೆಳಕಿಗೆ ಬಂದಿದೆ. ಹನಿ ಟ್ರ್ಯಾಪ್ ಮಾಡಿ ದುಡ್ಡು ಕೀಳಲು ನಿಂತ ಕಿರುಕುಳ ತಾಳಲಾರದೆ ಕುಗ್ಗಿ ಹೋಗಿ ಇಂತಹ ಒಂದು ತೀರ್ಮಾನಕ್ಕೆ ಬಂದಿದ್ದಾರೆ. ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ಸಾಲಗಾರರಿಗೆ ಬಾಕಿ ಇಟ್ಟಿದ್ದ ಒಂದುವರೆ ಕೋಟಿ ಸಾಲವನ್ನು ಮುಮ್ತಾಜ್ ಆಲಿ ಮರು ಪಾವತಿ ಮಾಡಿದ್ದಾರೆ. ಅಷ್ಟೇ ಅಲ್ಲದೆ ಶಾಲೆ ಹಾಗೂ ತನ್ನ ಫಿಶ್ ಮಿಲ್ ನೋಡಿಕೊಳ್ಳುವಂತೆ ತಮ್ಮ ಸಹೋದರರ ಹೆಸರಿನಲ್ಲಿ ಪತ್ರ ಬರೆದಿಟ್ಟಿದ್ದಾರೆ. ಈ ವಿಚಾರ ಇದೀಗ ಬೆಳಕಿಗೆ ಬಂದಿದ್ದು ಸಾಯುವ ನಿರ್ಧಾರ ಮೊದಲೇ ಮಾಡಿದ್ದರು ಅನ್ನೋದು ಸ್ಪಷಗಟವಾಗಿದೆ. ಸಾಲಗಾರರಿಗೆ ಮೋಸ ಮಾಡದೇ ಹಣ ಹಿಂತಿರುಗಿಸಿದ ಮುಮ್ತಾಜ್ ಬಳಿಕ ಆತ್ಮಹತ್ಯೆ ಗೆ ಶರಣಾಗಿದ್ದಾರೆ. ಸಾವಿನಲ್ಲೂ ತನ್ನ ಬದ್ಧತೆ ಮರೆಯದ ಮುಮ್ತಾಜ್ ಆಲಿ ಬಗ್ಗೆ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ
ಇನ್ನು ಮುಮ್ತಾಜ್ ಆಲಿಗೆ ಆತ್ಮಹತ್ಯೆ ಮಾಡಿಕೊಳ್ಳಲು ಮಹಿಳೆಯನ್ನು ಉಪಯೋಗಿಸಿ ಮಾಡಿದ ಬ್ಲ್ಯಾಕ್ ಮೇಲ್ ಕಾರಣ ಎಂದು ಅಲಿ ಕುಟುಂಬಸ್ಥರು ಆರೋಪಿಸಿದ್ದರು. ಈ ಬಗ್ಗೆ ಮುಮ್ತಾಜ್ ಅಲಿ ತಮ್ಮ ಹೈದರ್ ಅಲಿ ಕಾವೂರು ಪೊಲೀಸ್ ಠಾಣೆಯಲ್ಲಿ ಓರ್ವ ಮಹಿಳೆ ಸೇರಿದಂತೆ ಆರು ಮಂದಿಯ ಮೇಲೆ ದೂರು ನೀಡಿದ್ದರು. ರೆಹಮತ್ ಅಲಿಯಾಸ್ ಆಯಿಷಾ ಎಂಬ ಮಹಿಳೆಯನ್ನು ಬಳಸಿಕೊಂಡು ಆತ್ಮಹತ್ಯೆಗೆ ಪ್ರಚೋದನೆ ನೀಡಲಾಗಿದೆ. ಆರು ಮಂದಿಯ ತಂಡ ಬ್ಲ್ಯಾಕ್ ಮೇಲ್ ಮಾಡಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದರು. ಈ ಸಂಬಂಧ ಕಾವೂರು ಠಾಣೆಯಲ್ಲಿ ರೆಹಮತ್, ಅಬ್ದುಲ್ ಸತ್ತಾರ್, ಶಾಫಿ, ಮುಸ್ತಫಾ,ಶೋಯೆಬ್ ಮತ್ತು ಮುಮ್ತಾಜ್ ಅಲಿ ಕಾರು ಚಾಲಕ ಸಿರಾಜ್ ವಿರುದ್ಧ ಪ್ರಕರಣ ದಾಖಲಾಗಿತ್ತು.
ಈ ಕುರಿತು ತನಿಖೆ ಕೈಗೊಂಡಿದ್ದ ಮಂಗಳೂರು ಸಿಸಿಬಿ ಪೊಲೀಸರು ಇಂದು ಮೂವರನ್ನು ಬಂಧಿಸಿದ್ದಾರೆ. ಸಧ್ಯ ಪ್ರಕರಣದ ಮಾಸ್ಟರ್ಮೈಂಡ್ ಆಗಿರುವ ಎ2 ಆರೋಪಿ ಅಬ್ದುಲ್ ಸತ್ತಾರ್ಗಾಗಿ ಶೋಧಕಾರ್ಯ ನಡೆದಿದೆ.