Thursday, July 23, 2026
Homeಜಿಲ್ಲೆಮಂಗಳೂರು ; ಮಂಗಳೂರು ಮಹಾನಗರ ಪಾಲಿಕೆ ವತಿಯಿಂದ ನೇತ್ರಾವತಿ ನದಿಗೆ ಗಂಗಾಪೂಜೆ,ಬಾಗಿನ ಅರ್ಪಣೆ….!

ಮಂಗಳೂರು ; ಮಂಗಳೂರು ಮಹಾನಗರ ಪಾಲಿಕೆ ವತಿಯಿಂದ ನೇತ್ರಾವತಿ ನದಿಗೆ ಗಂಗಾಪೂಜೆ,ಬಾಗಿನ ಅರ್ಪಣೆ….!

ಮಂಗಳೂರು : ತುಂಬೆಯ ಕಿಂಡಿ ಅಣೆಕಟ್ಟಿನಲ್ಲಿ ಪ್ರಸ್ತುತ 6 ಮೀ. ಎತ್ತರಕ್ಕೆ ನೀರು ಸಂಗ್ರಹವಿದ್ದು, ಮುಂದಿನ 150 ದಿನಗಳ ವರೆಗೆ ಉಪಯೋಗಿಸ ಬಹುದಾಗಿದೆ. ಹೀಗಾಗಿ ಈ ಬಾರಿ ನಗರಕ್ಕೆ ಕುಡಿಯುವ ನೀರಿನ ಸಮಸ್ಯೆ ಎದುರಾಗುವ ಸಾಧ್ಯತೆಯಿಲ್ಲ ಎಂದು ಮೇಯರ್‌ ಮನೋಜ್ ಕುಮಾರ್ ಹೇಳಿದರು.

ಕಿಂಡಿ ಅಣೆಕಟ್ಟಿನ ಬಳಿ ಜನಪ್ರತಿನಿಧಿಗಳು, ಅಧಿಕಾರಿಗಳ ಜತೆ ಮಂಗಳವಾರ ಗಂಗಾ ಪೂಜೆ ನೆರವೇರಿಸಿ ಹಾಗೂ ನೇತ್ರಾವತಿ ನದಿಗೆ ಬಾಗಿನ ಅರ್ಪಿಸಿ ಅವರು ಮಾತನಾಡಿದರು.

ಜೀವ ನದಿ ನೇತ್ರಾವತಿ ,ಮಾತೆಯರನ್ನು ಹೆಸರಿಟ್ಟು ಪೂಜಿಸುವಂತಹ ಪದ್ದತಿ, ಕೃಷಿ ಚಟುವಟಿಕೆ ಹಾಗೂ ಇನ್ನಿತರ ಚಟುವಟಿಕೆಗಳಿಗೆ ನೀರುನ್ನಿಸುತ್ತದೆ,ಈ ವರ್ಷ ಕೂಡ 6 ಮೀಟರ್ ನೀರು ಇದ್ದು ಕೊರತೆ ಇನ್ನಿರುವುದಿಲ್ಲ ಹಾಗೂ ಜಲಕ್ಷಾಮ ಬರಬಾರದೆಂದು ಆಸಿಸಿದರು,ನೀರಿನ ಬರಗಾಲ ಬರಬಾರದೆಂದು ಪ್ರಾರ್ಥಿಸಿದರು ನೀರಿನ ಮಟ್ಟ ನೋಡಿದರೆ ಯಾವುದೇ ತೊಂದರೆವಿಲ್ಲ ಎಂದರು.,ಜಲಸಿರಿ ಯೋಜನೆಯಲ್ಲಿ 720 ಕೋಟಿ ವೆಚ್ಚದಲ್ಲಿ ಕಾಮಗಾರಿ ನಡೆಯುತ್ತಿದ್ದು ಮುಂದಿನ ದಿನಗಳಲ್ಲಿ 24 ಗಂಟೆ ನೀರು ಸರಬರಾಜು ನಡೆಯಲಿದ್ದು ಮಂಗಳೂರು. ದೇಶಕ್ಕೆ ಮಾದರಿ ನಗರವಾಗಲಿದೆ ಎಂದು ಹೇಳಿದರು.

ಬಳಿಕ ಮಾತನಾಡಿದ ವಿಪಕ್ಷ ನಾಯಕ ಅನೀಲ್ ಕುಮಾರ್ ವಾಡಿಕೆಯಂತೆ ಗಂಗಾ ಪೂಜೆ ನಡೆಯುತ್ತಿದ್ದು ,ನೀರಿನ ಅಭಾವ ಬಾರದಂತೆ ದೇವರಿಗೆ ಪ್ರಾರ್ಥನೆ ಮಾಡಿದ್ದೆವೆ ಒಣ ಹವೆ ಹೆಚ್ಚಾಗಿರುವುದರಿಂದ ದೇವರ ಸ್ವರೂಪದ ನೀರಿಗೆ ಭಾಗೀನ ಅರ್ಪಿಸಿದೇವೆ, ಬಹಳಷ್ಟು ಹಣವನ್ನು ವ್ಯಯಿಸಿದ್ದು ಮುಂದಿನ ದಿನಗಳಲ್ಲಿ ನೀರಿನ ಬರಗಾಲ ಬರಬಾರದೆಂದು ಗಂಗಾಮಾತೆಯನ್ನು ಬೇಡಿಕೊಂಡರು..

ಮ.ನಾ.ಪ ದ ಆಯುಕ್ತರು ಮಾತನಾಡಿ ಕುಡಿಯುವ ನೀರಿನ ಮಹತ್ವದ ಬಗ್ಗೆ ಈಗಾಗಲೇ ತಿಳಿಸಿದ್ದು, ನೀರು ಅತ್ಯಮೂಲ್ಯ ವಾದದ್ದು ,ನಮ್ಮ ಕೈಯಲ್ಲಿ ಏನೆಲ್ಲಾ ಮಾಡಬಹುದು ಅದನ್ನು ನಾವು ಮಾಡುತ್ತ ಬಂದಿದ್ದೇವೆ, ಅಚಾತುರ್ಯ ನಡೆಯದಂತೆ ಅಭೂತ ಪೂರ್ವ ಶಕ್ತಿ ಯ ಆಶಿರ್ವಾದ ಬೇಕು ಈ ಹಿನ್ನೆಲೆ ಈ ಬಾರಿಯೀ 3 ತಿಂಗಳಿಗೆ ನೀರಿನ ಕೊರತೆ ಬರದಂತೆ ಇರಲಿ ಎಂದು ತಿಳಿಸಿದರು.

ಬಳಿಕ ಶಶಿಧರ್ ಹೆಗ್ಡೆ ಮಾತನಾಡಿದ್ದು ಈ ಗಾಗಲೇ ಪ್ರಸ್ತಾಪಿಸಿದಂತೆ ಸಾರ್ವಜನಿಕ ಮೂಲಬೂತ ಸೌಕರ್ಯ ವಿತರಿಸುವುದರಲ್ಲಿ ನಾವು ನಂಬರ್ 1 ಆಗಿದ್ದೆವೆ,ಈ ಮೇರಯ್ ರವರ ಸಾರ್ವಜನಿಕ ರ ಮೇಲೆನ ಕಾಳಜಿಗೆ ಶಾಲಾ, ಸ್ಮಾರ್ಟ್ ಸಿಟಿ ಯೋಜನೆಯಿಂದ ಹಲವು ಕಾಮಗಾರಿ ನಡೆದಿದ್ದು ತಮ್ಮ ಆಡಳಿದ ಅವಧಿಯನ್ನು ಸ್ಮರಿಸಿದರು, ಈ ನದಿಗೆ ಕೊರತೆ ಬರದಂತೆ ದೇವರಲ್ಲಿ ಬೇಡಿಕೊಂಡರು.

ವೇದಿಕೆಯಲ್ಲಿ ಉಪಮೇಯರ್ ಬಾನುಮತಿ,ವಿಪಕ್ಷ ನಾಯಕ ಅನೀಲ್ ಕುಮಾರ್ ,ಪ್ರೆಮಾನಂದ ಶೆಟ್ಟಿ,ಶಶಿಧರ್ ಶೆಟ್ಟಿ,ಭಾಸ್ಕರ ಮೊಯ್ಲಿ,ಜಯನಂದ ಅಂಚಾನ್,ಮನೋಹರ್ ಶೆಟ್ಟಿ ಕದ್ರಿ ಸುಮಿತ್ರ,ಸರಿತ, ಹಾಗೂ ಇನ್ನಿತರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular