Thursday, March 12, 2026
Flats for sale
Homeಜಿಲ್ಲೆಮಂಗಳೂರು ; ಬಂಟ್ವಾಳದಲ್ಲಿ ರಹೀಂ ಹತ್ಯೆ ಪ್ರಕರಣ ; ಮಂಗಳೂರಿನ ಹಲವೆಡೆ ಪರಿಸ್ಥಿತಿ ಉದ್ವಿಗ್ನ ,ಸುರತ್ಕಲ್...

ಮಂಗಳೂರು ; ಬಂಟ್ವಾಳದಲ್ಲಿ ರಹೀಂ ಹತ್ಯೆ ಪ್ರಕರಣ ; ಮಂಗಳೂರಿನ ಹಲವೆಡೆ ಪರಿಸ್ಥಿತಿ ಉದ್ವಿಗ್ನ ,ಸುರತ್ಕಲ್ ನಲ್ಲಿ ಬಸ್ಸಿಗೆ ಕಲ್ಲು ತೂರಾಟ …!

ಮಂಗಳೂರು ; ಬಿ.ಸಿ ರೋಡ್ ನಲ್ಲಿ ರಹಿಮಾನ್ ಹತ್ಯೆಯಿಂದಾಗಿ ದ.ಕ ಜಿಲ್ಲೆಯಲ್ಲಿ ಹಲವೆಡೆ ಪರಿಸ್ಥಿತಿ ಉದ್ವಿಗ್ನಗೊಂಡಿದೆ.

ಸುರತ್ಕಲ್ ನಲ್ಲಿ ಖಾಸಗಿ ನಂದಿನಿ ಬಸ್ ಮೇಲೆ ಕಲ್ಲು ತೂರಾಟ ನಡೆಸಿದ್ದು
ಪರಂಗಿಪೇಟೆ ,ಬಿಸಿರೋಡ್,ತುಂಬೆಯವರೆಗೆ ಎಲ್ಲಾ ಅಂಗಡಿಗಳು ಬಂದ್ ಮಾಡಲಾಗಿದೆ.

ಬಂಟ್ವಾಳ ತಾಲೂಕಿನ ಅಮ್ಮುಂಜೆ ಗ್ರಾಮದಲ್ಲಿ ಖಾಸಗಿ ಬಸ್ ಗಳನ್ನು ಆಟೋದಲ್ಲಿ ಅಟ್ಟಿಕೊಂಡು ಕಿಡಿಗೇಡಿಗಳು ಹೋಗಿದ್ದು ಬಸ್ ಗಳ ಸಂಚಾರ ಮಾಡೋದಕ್ಕೆ ವಿರೋಧ‌ ವ್ಯಕ್ತಪಡಿಸಿದ್ದಾರೆ. ಆಟೋದಲ್ಲಿ ಅಟ್ಟಿಸಿಕೊಂಡು ಹೋಗಿ ವಾಪಾಸ್ ಕಳುಹಿಸಿದ ವೀಡಿಯೋ ವೈರಲ್ ಆಗಿದ್ದು ದ.ಕ ಜಿಲ್ಲೆಯಲ್ಲಿ ಪೋಲಿಸ್ ಬಿಗಿ ಬಂದೊಬಸ್ತ್ ಮಾಡಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular