Wednesday, March 18, 2026
Flats for sale
Homeಜಿಲ್ಲೆಬಂಟ್ವಾಳ : ಪುರಸಭೆ ಮಾಜಿ ಅಧ್ಯಕ್ಷನ ಚಾಲೆಂಜ್ : ಭಜರಂಗದಳ-ವಿ.ಎಚ್.ಪಿ ಯಿಂದ ಬಿ‌.ಸಿ.ರೋಡ್ ಚಲೋ ಕರೆ,ಪರಿಸ್ಥಿತಿ...

ಬಂಟ್ವಾಳ : ಪುರಸಭೆ ಮಾಜಿ ಅಧ್ಯಕ್ಷನ ಚಾಲೆಂಜ್ : ಭಜರಂಗದಳ-ವಿ.ಎಚ್.ಪಿ ಯಿಂದ ಬಿ‌.ಸಿ.ರೋಡ್ ಚಲೋ ಕರೆ,ಪರಿಸ್ಥಿತಿ ಉದ್ವಿಗ್ನ ..!!

ಬಂಟ್ವಾಳ : ಕಾಂಗ್ರೆಸ್ ಮಾಜಿ ಬಂಟ್ವಾಳ ಪುರಸಭೆ ಮಾಜಿ ಅಧ್ಯಕ್ಷ ಮೊಹಮ್ಮದ್ ಷರೀಫ್ ಹಾಗೂ ತಮ್ಮ ಹುಸೇನರ ಎಂಬವರು ಸಾಮಾಜಿಕಜಾಲತಾಣದಲ್ಲಿ ಕಳೆದ ಎರಡು ದಿನಗಳ ಹಿಂದೆ ಆಡಿಯೋ ಹರಿಯ ಬಿಟ್ಟಿದ್ದು Vhp ಮುಖಂಡ ಶರಣ್ ಪಂಪವೆಲ್ಲಗೆ ಬಹಿರಂಗ challange ಹಾಕಿ ನೀನು ನಿನ್ನ ಅಮ್ಮನಿಗೆ ಹುಟ್ಟಿದರೆ ಸೋಮವಾರ ಈದ್ ಮಿಲಾದ್ ಪ್ರಯುಕ್ತ ನಡೆಯುವ ಮೆರವಣಿಗೆಯನ್ನು ತಾಕತ್ತಿದ್ದರೆ ನಮ್ಮ ಮೆರವಣಿಗೆಯನ್ನ ನಿಲ್ಲಿಸಿ ನೋಡು ಎಂದು ಚಾಲೆಂಜ್ ಹಾಕಿದ್ದು ಇದೀಗ ಚಾಲೆಂಜ್ ಗೆ ಚಾಲೆಂಜ್ ಎಂಬಂತೆ ಪರಿಸ್ಥಿತಿ ಉದ್ವಿಗನಕ್ಕೇರಿದೆ.

ಇದನ್ನು ಸವಾಲಾಗಿ ಸ್ವೀಕರಿಸಿದ ವಿಶ್ವ ಹಿಂದೂ ಪರಿಷತ್ -ಬಜರಂಗದಳ ಇಂದು ಬೆಳಗ್ಗೆ ಬಿಸಿ ರೋಡ್ ಚಲೋ ಕರೆದಿದ್ದು ಬಿಸಿ ರೋಡ್ ನಲ್ಲಿ ಸಾವಿರಾರು ಕಾರ್ಯಕರ್ತರು ಜಮಾಹಿಸಿದ್ದಾರೆ,ಬೆಳಗ್ಗೆ 7 ಗಂಟೆಗೆ ಬಿಸಿ ರೋಡ್ ಗೆ ಸವಾಲು ಸ್ವೀಕರಿಸಿದ ಶರಣ್ ಪಂಪವೆಲ್ಲ್ ಹಿಂದುತ್ವದ ಭದ್ರಕೋಟೆಯಾಗಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜಿಹಾದಿಗಳ ಯಾವುದೇ ಷಡ್ಯಂತ್ರ ನಡೆಯುದಿಲ್ಲ ಇಡೀ ಹಿಂದೂ ಸಮಾಜಕ್ಕೆ ಸವಾಲು ಹಾಕಿದ್ದರು. ಹೀಗಾಗಿ ಬಿ.ಸಿ.ರೋಡ್​​ಗೆ ನಾವು ಬಂದಿದ್ದೇವೆ. ನಮ್ಮ ಱಲಿಯನ್ನು ಪೊಲೀಸರು ತಡೆದಿದ್ದನ್ನು ಖಂಡಿಸ್ತೇನೆ. ನಾನು ಯಾವುದೇ ಪ್ರಚೋದನಕಾರಿ ಹೇಳಿಕೆ ನೀಡಿಲ್ಲ. ನಾಗಮಂಗಲದಲ್ಲಿ ಹಿಂದೂ ಅಂಗಡಿಗಳಿಗೆ ಬೆಂಕಿ ಹಾಕಿದ್ದಾರೆ. ಸವಾಲು ಹಾಕಿದವನಿಗೆ ತಾಕತ್​ ಇದ್ದರೆ ಇಲ್ಲಿಗೆ ಬರಬೇಕಿತ್ತು ಎಂದು ಹೇಳಿದರು.

ಬಿ.ಸಿ.ರೋಡ್ ನಲ್ಲಿ ಹೆಚ್ಚುವರಿ ಪೊಲೀಸರ ನಿಯೋಜನೆ ಮಾಡಿದ್ದೂ ಎಸ್ಪಿ ಯತೀಶ್ ನೇತೃತ್ವದಲ್ಲಿ ಜಿಲ್ಲೆಯಲ್ಲಿ ಬಿಗಿ ಬಂದೋಬಸ್ತ್ ಮಾಡಲಾಗಿದೆ. ಹಿಂದೂ ಸಂಘಟನೆಗಳು ಶಾಂತಿಯುತ ಧರಣಿ ನಡೆಸುತ್ತೇವೆಂದಿದ್ದರು. ಹಾಗಾಗಿ ಬಿ.ಸಿ.ರೋಡ್​​ ಜಂಕ್ಷನ್​ನಲ್ಲಿ ಅವಕಾಶ ನೀಡಿದ್ದೇವೆ. ಏನಾದರೂ ಸಮಸ್ಯೆಯಾದರೆ ಕಾನೂನು ಕ್ರಮದ ಎಚ್ಚರಿಕೆ ನೀಡಿದ್ದೇವೆ. ಈವರೆಗೂ ಯಾವುದೇ ಅಹಿತಕರ ಘಟನೆ ಸಂಭವಿಸಿಲ್ಲ. ಮುಂದೆಯೂ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಗಿದೆ. ಸದ್ಯ ಬಿ.ಸಿ.ರೋಡ್​​ನಲ್ಲಿ ಹೆಚ್ಚುವರಿ ಭದ್ರತೆ ನಿಯೋಜನೆ ಮಾಡಲಾಗಿದೆ ಎಂದು ಹೇಳಿದರು. ಬಿಸಿ ರೋಡ್​ನಲ್ಲಿ ಕೆ.ಎಸ್.ಆರ್.ಪಿ ತುಕಡಿಗಳು, ಆರ್ಮ್ ರಿಸರ್ವ್ ಫೋರ್ಸ್ ಸೇರಿದಂತೆ ವಿವಿಧ ತುಕಡಿಗಳ ಮುಕ್ಕಾಂ ಹೂಡಿವೆ. ಪರಸ್ಪರ ಪ್ರಚೋದನಕಾರಿ ಹೇಳಿಕೆಯಿಂದ ಉದ್ವಿಗ್ನಗೊಂಡಿದ್ದ ಪರಿಸ್ಥಿತಿಯನ್ನು ಶಾಂತಗೊಳಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ ಎಂದು ಎಸ್​​ಪಿ ಎನ್​.ಯತೀಶ್ ತಿಳಿಸಿದ್ದಾರೆ

RELATED ARTICLES

LEAVE A REPLY

Please enter your comment!
Please enter your name here

Most Popular