Saturday, July 25, 2026
Homeಜಿಲ್ಲೆಮಂಗಳೂರು : ದ.ಕ.ಜಿಲ್ಲೆಯಲ್ಲಿ 12,000 ಲೀಟರ್ ಮದ್ಯ, 15 ಕೆಜಿ ಮಾದಕ ವಸ್ತು ವಶ.

ಮಂಗಳೂರು : ದ.ಕ.ಜಿಲ್ಲೆಯಲ್ಲಿ 12,000 ಲೀಟರ್ ಮದ್ಯ, 15 ಕೆಜಿ ಮಾದಕ ವಸ್ತು ವಶ.

ಮಂಗಳೂರು ; ಮಾದರಿ ನೀತಿ ಸಂಹಿತೆ ಜಾರಿಯಾದ ದಿನದಿಂದ ಏಪ್ರಿಲ್ 1ರವರೆಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 41,90,665 ರೂಪಾಯಿ ಮೌಲ್ಯದ 12,844 ಲೀಟರ್ ಮದ್ಯವನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ಮದ್ಯದ ಜೊತೆಗೆ 8,69,950 ರೂಪಾಯಿ ಮೌಲ್ಯದ 15.5 ಕೆಜಿ ಮಾದಕ ದ್ರವ್ಯಗಳನ್ನು ವಶಪಡಿಸಿಕೊಳ್ಳಲಾಗಿದೆ.

ಅಬಕಾರಿ ನಿಯಮಗಳನ್ನು ಉಲ್ಲಂಘಿಸಿದ ಪ್ರಕರಣಗಳು ಸೇರಿದಂತೆ 243 ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ.ಬೇರೆ ಬೇರೆ ಜಿಲ್ಲೆಗಳಲ್ಲಿ ಕುಕ್ಕರ್,ಪಾತ್ರೆ,ಹಣ ಹಂಚುತ್ತಿದ್ದು ದಕ್ಷಿಣ ಕನ್ನಡ ಜಿಲ್ಲೆಯ ಭಾಗದ ಜನರಿಗೆ ಅಂತಹ ಬಿಟ್ಟಿ ಭಾಗ್ಯ ಸಿಗುವುದಿಲ್ಲವೆಂದು ಎಲ್ಲರಿಗೂ ತಿಳಿದ ವಿಚಾರ,ಚುನಾವಣೆ ಅಧಿಕಾರಿಗಳು ಎಲ್ಲ ಕಡೆಗಳಲ್ಲಿ ಹದ್ದಿನ ಕಣ್ಣಿಟ್ಟಿದ್ದು ಅಕ್ರಮ ಚಟುವಟಿಕೆಗಳ ಬಗ್ಗೆ ನಿಗಾ ವಹಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular