ಮಂಗಳೂರು ; ಕದ್ರಿ ಉದ್ಯಾನದಲ್ಲಿ ನಡೆಯುತ್ತಿರುವ ಗೇರು ಮೇಳದಲ್ಲಿ ಬಾಲ ಪ್ರತಿಭೆಯ ಕಲಾಕೃತಿ ಗಮನ ಸೆಳೆದಿದೆ. “Birds on Canvas” ಎಂಬ ಶೀರ್ಷಿಕೆಯಡಿ ರಚಿಸಲಾದ ಚಿತ್ರಕಲೆ ಮೂಲಕ ಫಾತಿಮಾ ಝೋಯಾ ಸಾರ್ವಜನಿಕರ ಹಾಗೂ ಕಲಾಭಿಮಾನಿಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.






ಮೇಳದ ವಿವಿಧ ಮಳಿಗೆಗಳು ಹಾಗೂ ಪ್ರದರ್ಶನಗಳ ನಡುವೆ ಬಾಲಕಿಯ ಕಲಾತ್ಮಕ ಪ್ರತಿಭೆ ವಿಶೇಷ ಆಕರ್ಷಣೆಯಾಗಿ ಹೊರಹೊಮ್ಮಿದ್ದು, ಅನೇಕರು ಆಕೆಯ ಸೃಜನಶೀಲತೆಯನ್ನು ಶ್ಲಾಘಿಸಿದ್ದಾರೆ.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಗಣ್ಯರು ಹಾಗೂ ಸಂದರ್ಶಕರು ಬಾಲ ಪ್ರತಿಭೆಯ ಕೆಲಸವನ್ನು ಪ್ರಶಂಸಿಸಿದ್ದು, ಇಂತಹ ವೇದಿಕೆಗಳು ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಗುರುತಿಸಲು ಸಹಕಾರಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಗೇರು ಮೇಳದಲ್ಲಿ ಕೃಷಿ, ತಂತ್ರಜ್ಞಾನ ಹಾಗೂ ಕೈಗಾರಿಕಾ ಪ್ರದರ್ಶನಗಳ ಜೊತೆಗೆ ಇಂತಹ ಕಲಾ ಪ್ರದರ್ಶನಗಳು ಕಾರ್ಯಕ್ರಮಕ್ಕೆ ಹೆಚ್ಚುವರಿ ಆಕರ್ಷಣೆ ನೀಡಿವೆ.


