ಮಂಗಳೂರು : ಶ್ರೀಮಂಗಳೂರು : ಶ್ರೀ ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಆಡಳಿತ ಮಂಡಳಿ ಆಯ್ಕೆ ವಿಚಾರದಲ್ಲಿ ಅನಾವಶ್ಯಕ ಗೊಂದಲ ಸೃಷ್ಟಿಸಬಾರದು ಎಂದು ಕ್ಷೇತ್ರದ ಆಡಳಿತ ಸಮಿತಿಯ ಕೋಶಾಧಿಕಾರಿ ಪದ್ಮರಾಜ್ ಆರ್. ಪೂಜಾರಿ ಸ್ಪಷ್ಟಪಡಿಸಿದರು.
ಅಖಿಲ ಭಾರತ ಬಿಲ್ಲವರ ಯೂನಿಯನ್‌ನಿಂದ 2026-27ನೇ ಸಾಲಿನ ಆಡಳಿತ ಸಮಿತಿಗೆ 9 ಜನರನ್ನು ನೇಮಕ ಮಾಡಲಾಗಿದೆ ಎಂದು ರವಿಶಂಕರ್ ಮಿಜಾರ್ ನೀಡಿದ ಹೇಳಿಕೆ ಅಧಿಕೃತವಲ್ಲ. ಕೋರ್ಟ್ ಆದೇಶವಿದೆ ಎಂದು ತಪ್ಪು ಮಾಹಿತಿ ಹಬ್ಬಿಸಲಾಗುತ್ತಿದೆ ಎಂದು ಅವರು ಆರೋಪಿಸಿದರು. ಶ್ರೀಕ್ಷೇತ್ರ ರೂವಾರಿ ಬಿ. ಜನಾರ್ದನ ಪೂಜಾರಿ ಅವರ ಮಾರ್ಗದರ್ಶನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2025 ಜೂನ್ 20ರಂದು ಕಾರ್ಯದರ್ಶಿ ಮಾಧವ ಸುವರ್ಣ ಅವರ ನೇತೃತ್ವದಲ್ಲಿ ಆಡಳಿತ ಸಮಿತಿಯ ಸಭೆ ನಡೆದಿದ್ದು, ನೂತನ ಸಮಿತಿಯನ್ನು ಘೋಷಿಸಲಾಗಿದೆ ಎಂದರು. ಸಭೆಯ ಮಾಹಿತಿ ಎಲ್ಲಾ ಸದಸ್ಯರಿಗೆ ನೀಡಲಾಗಿದ್ದರೂ ಕೆಲವರು ಗೈರಾಗಿದ್ದರು ಎಂದು ತಿಳಿಸಿದರು..
1920ರ ಸಾಹುಕಾರ್ ಕೊರಗಪ್ಪ ಅವರ ಉಯಿಲಿನ ಪ್ರಕಾರ ಅವರ ಕುಟುಂಬದ ಯೋಗ್ಯ ಸದಸ್ಯರನ್ನು ಅಧ್ಯಕ್ಷರಾಗಿ ಆಯ್ಕೆ ಮಾಡುವ ನಿರ್ಧಾರದಂತೆ, ಅವರ ಮೊಮ್ಮಗ ಜೈರಾಜ್ ಎಚ್. ಸೋಮಸುಂದರಂ ಅವರನ್ನು ಸರ್ವಾನುಮತದಿಂದ ಅಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ ಎಂದು ಹೇಳಿದರು. ಈ ಆಯ್ಕೆಯನ್ನು ಪ್ರಶ್ನಿಸಿ ಕೆಲವರು ನ್ಯಾಯಾಲಯಕ್ಕೆ ಹೋದರೂ, ಯಾವುದೇ ತಡೆಯಾಜ್ಞೆ ಬಂದಿಲ್ಲ ಎಂದು ಸ್ಪಷ್ಟಪಡಿಸಿದರು.
ಇದಲ್ಲದೆ, ಅಖಿಲ ಭಾರತ ಬಿಲ್ಲವರ ಯೂನಿಯನ್ ಸಭೆಯಲ್ಲಿ ಹೊಸ ಸಮಿತಿಗಳನ್ನು ರಚಿಸುವುದು ಸಾಮಾನ್ಯವಾಗಿದ್ದು, ಇತ್ತೀಚೆಗೆ ಕೆಲವು ವ್ಯಕ್ತಿಗಳಿಗೆ ಸದಸ್ಯತ್ವ ನೀಡಿ ಹೊಸ ಸಮಿತಿ ರೂಪಿಸಲಾಗಿದೆ. ಈ ತಂಡ ಕೋರ್ಟ್ ಆದೇಶವನ್ನು ತಪ್ಪಾಗಿ ಬಿಂಬಿಸಿ ಸಾರ್ವಜನಿಕರಿಗೆ ತಪ್ಪು ಮಾಹಿತಿ ನೀಡುತ್ತಿದೆ ಎಂದು ಆರೋಪಿಸಿದರು. ಈ ಕುರಿತು ಸಮಾಜದವರು ಗೊಂದಲಕ್ಕೀಡಾಗಬಾರದು ಎಂದು ಮನವಿ ಮಾಡಿದ ಅವರು, ಕಾನೂನು ಸಲಹೆಗಾರ ಚಿದಾನಂದ ಕೆದಿಲಾಯ ಕೂಡ ನ್ಯಾಯಾಲಯದ ಆದೇಶಗಳ ಕುರಿತು ವಿವರ ನೀಡಿದರು.
ಈ ಸಂದರ್ಭದಲ್ಲಿ ಬಿ. ಜನಾರ್ದನ ಪೂಜಾರಿ, ಜೈರಾಜ್ ಎಚ್. ಸೋಮಸುಂದರಂ, ಕಿಶೋರ್ ಕುಮಾರ್ ದಂಡಕೇರಿ, ಕೃತಿನ್ ದೀರಜ್ ಅಮೀನ್, ಲತೇಶ್ ಸುವರ್ಣ ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದರು.ಸ್ಪಷ್ಟಪಡಿಸಿದರು.
ಅಖಿಲ ಭಾರತ ಬಿಲ್ಲವರ ಯೂನಿಯನ್‌ನಿಂದ 2026-27ನೇ ಸಾಲಿನ ಆಡಳಿತ ಸಮಿತಿಗೆ 9 ಜನರನ್ನು ನೇಮಕ ಮಾಡಲಾಗಿದೆ ಎಂದು ರವಿಶಂಕರ್ ಮಿಜಾರ್ ನೀಡಿದ ಹೇಳಿಕೆ ಅಧಿಕೃತವಲ್ಲ. ಕೋರ್ಟ್ ಆದೇಶವಿದೆ ಎಂದು ತಪ್ಪು ಮಾಹಿತಿ ಹಬ್ಬಿಸಲಾಗುತ್ತಿದೆ ಎಂದು ಅವರು ಆರೋಪಿಸಿದರು. ಶ್ರೀಕ್ಷೇತ್ರ ರೂವಾರಿ ಬಿ. ಜನಾರ್ದನ ಪೂಜಾರಿ ಅವರ ಮಾರ್ಗದರ್ಶನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2025 ಜೂನ್ 20ರಂದು ಕಾರ್ಯದರ್ಶಿ ಮಾಧವ ಸುವರ್ಣ ಅವರ ನೇತೃತ್ವದಲ್ಲಿ ಆಡಳಿತ ಸಮಿತಿಯ ಸಭೆ ನಡೆದಿದ್ದು, ನೂತನ ಸಮಿತಿಯನ್ನು ಘೋಷಿಸಲಾಗಿದೆ ಎಂದರು. ಸಭೆಯ ಮಾಹಿತಿ ಎಲ್ಲಾ ಸದಸ್ಯರಿಗೆ ನೀಡಲಾಗಿದ್ದರೂ ಕೆಲವರು ಗೈರಾಗಿದ್ದರು ಎಂದು ತಿಳಿಸಿದರು..
1920ರ ಸಾಹುಕಾರ್ ಕೊರಗಪ್ಪ ಅವರ ಉಯಿಲಿನ ಪ್ರಕಾರ ಅವರ ಕುಟುಂಬದ ಯೋಗ್ಯ ಸದಸ್ಯರನ್ನು ಅಧ್ಯಕ್ಷರಾಗಿ ಆಯ್ಕೆ ಮಾಡುವ ನಿರ್ಧಾರದಂತೆ, ಅವರ ಮೊಮ್ಮಗ ಜೈರಾಜ್ ಎಚ್. ಸೋಮಸುಂದರಂ ಅವರನ್ನು ಸರ್ವಾನುಮತದಿಂದ ಅಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ ಎಂದು ಹೇಳಿದರು. ಈ ಆಯ್ಕೆಯನ್ನು ಪ್ರಶ್ನಿಸಿ ಕೆಲವರು ನ್ಯಾಯಾಲಯಕ್ಕೆ ಹೋದರೂ, ಯಾವುದೇ ತಡೆಯಾಜ್ಞೆ ಬಂದಿಲ್ಲ ಎಂದು ಸ್ಪಷ್ಟಪಡಿಸಿದರು.
ಇದಲ್ಲದೆ, ಅಖಿಲ ಭಾರತ ಬಿಲ್ಲವರ ಯೂನಿಯನ್ ಸಭೆಯಲ್ಲಿ ಹೊಸ ಸಮಿತಿಗಳನ್ನು ರಚಿಸುವುದು ಸಾಮಾನ್ಯವಾಗಿದ್ದು, ಇತ್ತೀಚೆಗೆ ಕೆಲವು ವ್ಯಕ್ತಿಗಳಿಗೆ ಸದಸ್ಯತ್ವ ನೀಡಿ ಹೊಸ ಸಮಿತಿ ರೂಪಿಸಲಾಗಿದೆ. ಈ ತಂಡ ಕೋರ್ಟ್ ಆದೇಶವನ್ನು ತಪ್ಪಾಗಿ ಬಿಂಬಿಸಿ ಸಾರ್ವಜನಿಕರಿಗೆ ತಪ್ಪು ಮಾಹಿತಿ ನೀಡುತ್ತಿದೆ ಎಂದು ಆರೋಪಿಸಿದರು. ಈ ಕುರಿತು ಸಮಾಜದವರು ಗೊಂದಲಕ್ಕೀಡಾಗಬಾರದು ಎಂದು ಮನವಿ ಮಾಡಿದ ಅವರು, ಕಾನೂನು ಸಲಹೆಗಾರ ಚಿದಾನಂದ ಕೆದಿಲಾಯ ಕೂಡ ನ್ಯಾಯಾಲಯದ ಆದೇಶಗಳ ಕುರಿತು ವಿವರ ನೀಡಿದರು.
ಈ ಸಂದರ್ಭದಲ್ಲಿ ಬಿ. ಜನಾರ್ದನ ಪೂಜಾರಿ, ಜೈರಾಜ್ ಎಚ್. ಸೋಮಸುಂದರಂ, ಕಿಶೋರ್ ಕುಮಾರ್ ದಂಡಕೇರಿ, ಕೃತಿನ್ ದೀರಜ್ ಅಮೀನ್, ಲತೇಶ್ ಸುವರ್ಣ ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದರು.