ಮಂಗಳೂರು : ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಪೌರಾಯುಕ್ತೆ ಅಮೃತ ಗೌಡರವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ ಶಿಡ್ಲಘಟ್ಟ ತಾಲೂಕಿನ ಕಾಂಗ್ರೆಸ್ ಮುಖಂಡ ರಾಜೀವ ಗೌಡನ ಮೇಲೆ ಅಪರಾಧ ಕ್ರಮಾಂಕ 9/2026 ಮತ್ತು 10/2026 ರಂತೆ ಪ್ರಕರಣ ದಾಖಲಾಗಿದೆ ಈ ವಿಷಯಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಸಮಿತಿಯು ರಾಜೀವ ಗೌಡರನ್ನು ಪಕ್ಷದಿಂದ ಉಚ್ಚಾಟಿಸಿದ್ದು ಹಾಗೂ ಚಿಕ್ಕಬಳ್ಳಾಪುರ ನ್ಯಾಯಾಲಯವು ಜಾಮೀನು ತಿರಸ್ಕರಿಸಿದೆ.ಇದರಿಂದ ಉಚ್ಚಾಟಿತ ಕಾಂಗ್ರೆಸ್ ಮುಖಂಡ ರಾಜೀವ ಗೌಡ ತಲೆಮಾರಿಸಿಕೊಂಡಿದ್ದು ಕರ್ನಾಟಕ ಮಾನ್ಯ ಉಚ್ಚ ನ್ಯಾಯಾಲಯದಲ್ಲೂ ಜಾಮೀನಿಗೆ ಅರ್ಜಿ ಹಾಕಿರುತ್ತಾನೆ, ಆದರೆ ಉಚ್ಚ ನ್ಯಾಯಾಲಯವು ಜಾಮೀನು ತಿರಸ್ಕಾರಗೊಳಿಸಿದರಿಂದ ತಲೆಮರಿಸಿಕೊಂಡ ಆರೋಪಿಯು ಜಿಲ್ಲೆಯ ಹಾಗೂ ರಾಜ್ಯದ ನಾನಾ ಭಾಗಗಳಲ್ಲಿ ತಿರುಗಾಡಿಕೊಂಡು ಆಶ್ರಯ ಪಡೆದುಕೊಂಡು ನಂತರ ಮಂಗಳೂರು ನಗರದ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಾದ ಪಚ್ಛನಾಡಿ ಬಳಿ ಇರುವ ಉದ್ಯಮಿ ಮೈಕಲ್ ರೇಗೋ ಗೆ ಸಂಬಂಧಪಟ್ಟ ಫಾರ್ಮ್ ಹೌಸ್ ನಲ್ಲಿ (ಮನೆಯಲ್ಲಿ )ಕಳೆದ 2 ದಿನಗಳಿಂದ ಆಶ್ರಯ ಪಡೆದಿದ್ದಾನೆಂದು ಮಾಹಿತಿ ತಿಳಿದುಬಂದಿದೆ.
ದಿನಾಂಕ 26/01/2026 ರಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಶೆಡ್ಲಘಟ್ಟ ಪೊಲೀಸರು ಆರೋಪಿಯ ಇರುವಿಕೆಯ ಬಗ್ಗೆ ಮಾಹಿತಿ ಪಡೆದುಕೊಂಡು ಮಂಗಳೂರಿಗೆ ಆಗಮಿಸಿದ ಹಿನ್ನೆಲೆಯಲ್ಲಿ ಮೈಕಲ್ ರೆಗೋ ನನ್ನು ಬಂದಿಸಿದ್ದು ಸ್ಥಳದಿಂದ ಆರೋಪಿ ರಾಜೀವ ಗೌಡ ನು ಪೊಲೀಸರು ಬಂಧಿಸುತ್ತಾರೆ ಎಂಬುದಾಗಿ ಅರಿತು ಕಾರಿನಲ್ಲಿ ಪರಾರಿಯಾಗಿದ್ದು ನಂತರ ಮಂಗಳೂರು ನಗರದ ಕಂಕನಾಡಿ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಾದ ರೈಲ್ವೆ ನಿಲ್ದಾಣಕ್ಕೆ ತೆರಳಿ ವಾಹನವನ್ನು ರೈಲ್ವೆ ಸ್ಟೇಷನ್ ಬಳಿ ನಿಲ್ಲಿಸಿ ಪರಾರಿಯಾಗಿದ್ದಾನೆ. ಆರೋಪಿಯ ಸುಳಿವನ್ನು ಬೆನ್ನು ಹತ್ತಿದ ಶಿಡ್ಲಘಟ್ಟ ಪೊಲೀಸರು ಆರೋಪಿಯನ್ನು ಕೇರಳ ರಾಜ್ಯದ ಕಣ್ಣೂರು ಬಳಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.


