ಮಂಗಳೂರು : ಕರ್ನಾಟಕ ರಾಜ್ಯ ಲೆಕ್ಕಪರಿಶೋಧಕರ ಸಂಘದ (KSCAA) 2026-27ನೇ ಸಾಲಿನ ಅಧ್ಯಕ್ಷರಾಗಿ ಮಂಗಳೂರಿನ ಸಿ.ಎ. ಸುನಿಲ್ ಭಂಡಾರಿ ಆಯ್ಕೆಯಾಗಿದ್ದಾರೆ.
ಸಂಘದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಸುನಿಲ್ ಭಂಡಾರಿ ಅವರು, ಚಾರ್ಟರ್ಡ್ ಅಕೌಂಟೆಂಟ್‌ಗಳ ವೃತ್ತಿಪರ ಅಭಿವೃದ್ಧಿ ಹಾಗೂ ಸಂಘದ ಸದಸ್ಯರ ಹಿತಾಸಕ್ತಿಗಾಗಿ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುವುದಾಗಿ ತಿಳಿಸಿದ್ದಾರೆ.
ತಮ್ಮ ನಾಯಕತ್ವದ ಮೂಲಕ ಸಂಘವನ್ನು ಮತ್ತಷ್ಟು ಬಲಿಷ್ಠಗೊಳಿಸುವುದರ ಜೊತೆಗೆ, ರಾಜ್ಯದ ಚಾರ್ಟರ್ಡ್ ಅಕೌಂಟೆಂಟ್ ಸಮುದಾಯವನ್ನು ಒಗ್ಗೂಡಿಸಿ ಹೊಸ ಅವಕಾಶಗಳನ್ನು ಸೃಷ್ಟಿಸಲು ಆದ್ಯತೆ ನೀಡುವುದಾಗಿ ಅವರು ಹೇಳಿದ್ದಾರೆ.
ಸಿ.ಎ. ಸುನಿಲ್ ಭಂಡಾರಿ ಅವರು ಬೊಳಿಯಾರು ತಾರಿಪಾಡಿಯ ದಿ. ಕಾಂತಣ್ಣ ಭಂಡಾರಿ ಹಾಗೂ ಪೆಲಪಾಡಿಯ ವಸಂತಿ ಕೆ. ಭಂಡಾರಿ ದಂಪತಿಯ ಪುತ್ರರಾಗಿದ್ದಾರೆ.

