Wednesday, March 18, 2026
Flats for sale
Homeಜಿಲ್ಲೆಮಂಗಳೂರು : ಅನಧಿಕೃತವಾಗಿ ನೇತಾಡುತ್ತಿದ್ದ ಬ್ಯಾನರ್ -ಫ್ಲೆಕ್ಸ್ ತೆರವಿಗೆ ನೂತನ ಆಯುಕ್ತರ ಖಡಕ್ ಸೂಚನೆ..!

ಮಂಗಳೂರು : ಅನಧಿಕೃತವಾಗಿ ನೇತಾಡುತ್ತಿದ್ದ ಬ್ಯಾನರ್ -ಫ್ಲೆಕ್ಸ್ ತೆರವಿಗೆ ನೂತನ ಆಯುಕ್ತರ ಖಡಕ್ ಸೂಚನೆ..!

ಮಂಗಳೂರು : ಈ ಅಧಿಕಾರಿಗಳೇ ಇಂಗೆ ಬಂದ ಒಂದು ತಿಂಗಳು ನಿಷ್ಠಾವಂತ ಮೇಸ್ಟ್ರು ತರಹ ಆಡ್ತಾರೆ ಆದರೆ ಹಣದ ಮೂಲ ತಿಳಿದ ಮೇಲೆ ಸಪ್ಪೆಗಾಗ್ತಾರೆ ಇದು ದುನಿಯಾ ಅಂದರೆ ಪ್ರಪಂಚದಲ್ಲಿ ತಿಳಿದ ವಿಚಾರ .ಎಲ್ಲಾ ಪ್ರಜೆಗಳಿಗೂ ತಿಳಿದ ವಿಚಾರ ಆದರೆ ಆಡಳಿತ ವ್ಯವಸ್ಥೆ ಎಕ್ಕುಟ್ಟೋಗಿದೆ ಅದನ್ನು ದೇವರು ಬಂದರೂ ಸರಿ ಮಾಡಕ್ಕಾಗಲ್ಲ. ನಗರದ ಸೌಂದರ್ಯವನ್ನು ಹಾಳುಗೆಡವುತ್ತಿದ್ದ ಬ್ಯಾನರ್ -ಫ್ಲೆಕ್ಸ್ ವಿರುದ್ಧ ನೂತನ ಆಯುಕ್ತರು ದಿಟ್ಟ ಕ್ರಮ ಕೈಗೊಂಡಿದ್ದು, ಸಾರ್ವಜನಿಕ ವಲಯದಲ್ಲಿ ವ್ಯಾಪಕ ಪ್ರಶಂಸೆಗೆ ಪಾತ್ರರಾಗಿದ್ದಾರೆ. ನಗರದಲ್ಲಿ ಅನಧಿಕೃತವಾಗಿ ನೇತಾಡುತ್ತಿದ್ದ ಬ್ಯಾನರ್ -ಫ್ಲೆಕ್ಸ್ ಗಳನ್ನು ಖುದ್ದು ಕಮೀಷನರ್ ಫೀಲ್ಡಿಗಿಳಿದು ತೆರವುಗೊಳಿಸಿದ್ದಾರೆ. ಅನುಮತಿ ಪಡೆಯದೆ ನಿರ್ಬಂಧಿತ ಪ್ರದೇಶಗಳಲ್ಲಿ ಬ್ಯಾನರ್ ಅಳವಡಿಸಿದರೆ ದಂಡ ಹಾಕುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಈ ಮೊದಲು ಮಂಗಳೂರು ತಾಲೂಕು ಸಹಾಯಕ ಆಯುಕ್ತರಾಗಿದ್ದಾಗಲೂ ಹಲವಾರು ದಿಟ್ಟ ನಿರ್ಧಾರಗಳನ್ನು ಪಾಲಿಸಿ ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿದ್ದರು. ಜನರೊಂದಿಗೆ ದರ್ಪ ತೊರದೆ, ಜನರ ಸಮಸ್ಯೆಗಳಿಗೆ ಸ್ಪಂಧಿಸುವ ಉತ್ತಮ ಅಧಿಕಾರಿ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದ ನೂತನ ಆಯುಕ್ತ ರವಿಚಂದ್ರ ನಾಯಕ್ ರವನೂ ಏನೂ ಹೊಸತನವನ್ನು ಮಾಡಲು ಹೊರಟಿದ್ದಾರೆ ಇದು ಎಷ್ಟು ದಿನವೆಂಬುದು ಗೊತ್ತಿಲ್ಲ ಆದರೆ ಈ ಭ್ರಷ್ಟ ರಾಜಕಾರಣಿಗಳ ದರ್ಪಕ್ಕೆ ತಲೆಬಾಗುವ ಅಧಿಕಾರಿಗಳು ಯಾರು ಹೆಚ್ಚು ದಿನ ಉಳಿಯುವುದಿಲ್ಲವೆಂಬುದು ನಿಜವಾದ ವಿಚಾರ.

ಕಳೆದ ಹತ್ತು ವರ್ಷಗಳಿಂದ ನಿವೃತ್ತಿಯಾದರೂ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುವ ಆರೋಗ್ಯ ಅಧಿಕಾರಿ ಶೆಟ್ರು ರಿಗೆ ಬಿಸಿ ಮುಟ್ಟಿಸಿದ್ದು ಮಹಾನಗರ ಪಾಲಿಕೆಯಲ್ಲಿ ಟ್ರೇಡ್ ಲೈಸನ್ಸ್, ಜನನ ಮರಣ ಪತ್ರ ಹೀಗೆ ಪ್ರತಿಯೊಂದು ಕಡತದಲ್ಲೂ ಕಮಾಯಿ ಮಾಡುತ್ತಿದ್ದ ಅಕ್ಷರಶಃ ಪಾಲಿಕೆಯಲ್ಲಿ ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದ ಸರ್ವಾಧಿಕಾರಿ ಇದೀಗ ಹಲ್ಲು ಇಲ್ಲದೆ ಕಡಲೆಕಾಯಿ ತಿಂದಂತಾಗಿದೆ.

ಭ್ರಷ್ಟ ಆಯುಕ್ತರಾಗಿದ್ದ ಆನಂದ್ ಕಾರ್ಬಾರು ಲಂಚಬಾಕರಿಗೆ ‘ಪರಮಾನಂದ’ ಅಡ್ಡೆಯಾಗಿತ್ತು. ಆದರೆ ನೂತನ ಆಯುಕ್ತ ರವಿಚಂದ್ರ ನಾಯಕ್ ಅದಕ್ಕೆಲ್ಲ ಬ್ರೇಕ್ ಹಾಕಿದ್ದಾರೆ.ಗುತ್ತಿಗೆದಾರರಿಗೆ ಖಡಕ್ ಎಚ್ಚರಿಕೆ ನೀಡಿದ್ದು, ಭ್ರಷ್ಟಾಚಾರ ನಡೆಸಿದರೆ ಬ್ಲ್ಯಾಕ್ ಲಿಸ್ಟ್ ಗೆ ಸೇರಿಸುವುದಾಗಿ ಹೇಳಿಕೆ ನೀಡಿದ್ದಾರೆ.ಇದು ತಾತ್ಕಾಲಿಕನೊ ಅಥವಾ ತಾತ್ಕಾಲಿಕನೊ ಎಂಬುದು ಮುಂದೆ ತಿಳಿಯಬೇಕಾಗಿದೆ ಒಟ್ಟಿನಲ್ಲಿ ಸ್ಪಷ್ಟ ಆಡಳಿತ ಭ್ರಷ್ಟಾಚಾರ ರಹಿತ ಆಡಳಿತ ಅಂತ ಹೇಳಬಹುದಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular