ಬೆಳಗಾವಿ : ಸಂಕ್ರಾಂತಿ ಹಬ್ಬದ ದಿನವೇ ಸಚಿವ ಲಕ್ಷ್ಮೀ ಹೆಬ್ಬಾಳಕರ ಕಾರು ಅಪಘಾತವಾಗಿದೆ. ಭೀಕರ ಅಪಘಾತದಲ್ಲಿ ಅದೃಷ್ಟವಶಾತ್ ಸಚಿವೆ ಮತ್ತವರ ಸಹೋದರ ಸೇರಿ ನಾಲ್ವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸಚಿವೆ ಹೆಬ್ಬಾಳಕರ ಗೆ ಅಪಘಾತದಲ್ಲಿ ಬೆನ್ನುಮೂಳೆ, ಕುತ್ತಿಗೆ ಮೂಳೆ ಮುರಿವೆ.ಸದ್ಯ ಬೆಳಗಾವಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ತಾಯೊಂದಿಗೆ ಕಾರಿನಲ್ಲಿ ಬರಬೇಕಿದ್ದ ಪುತ್ರ ಕೊನೆಕ್ಷಣದಲ್ಲಿ ರೈಲಿನಲ್ಲಿ ಬಂದಿದ್ದರಿಂದ ಅಪಘಾತದಿಂದ ಪಾರಾಗಿದ್ದಾರೆ.
ಪ್ರತಿವರ್ಷ ಕುಟುಂಬ ಸಮೇತ ಹುಟ್ಟುರಾದ ಚಿಕ್ಕಹಟ್ಟಿಹೊಳಿ ಗ್ರಾಮದಲ್ಲಿ ಹಬ್ಬ ಆಚರಿಸುವುದಕ್ಕೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ ನಿನ್ನೆ ರಾತ್ರಿ 12 ಗಂಟೆಗೆ ರಸ್ತೆ ಮಾರ್ಗವಾಗಿ ಬೆಂಗಳೂರಿನಿಂದ ಬೆಳಗಾವಿಯತ್ತ ಪ್ರವಾಸ ಬೆಳೆಸಿದ್ರು. ಪಕ್ಷದ ಸಿಎಲಪಿ ಸಭೆಯಲ್ಲಿ ಭಾಗವಹಿಸಿದ್ದ ಸಚಿವೆ ಹೆಬ್ಬಾಳಕರ ತಮ್ಮ ಸರ್ಕಾರಿ ಕಾರಿನಲ್ಲಿ ಸಹೋದರ, ಎಂಎಲಸಿ ಚನ್ನರಾಜ್ ಹಟ್ಟಿಹೊಳಿ, ಗನ್ ಮ್ಯಾನ್, ಡ್ರೈವ್ ಜೊತೆಗೆ ಬರ್ತಿದ್ದರು. ಇಂದು ಬೆಳಗ್ಗೆ5.30 ಕ್ಕೆ ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ಅಂಬಡಗಟ್ಟಿ ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿ ಮೇಲೆ ಕಾರಿಗೆ ನಾಯಿ ಅಡ್ಡ ಬಂದಿದೆ. ಅದನ್ನ ತಪ್ಪಿಸಲು ಹೋದ ಡ್ರೈವರ್ ನಿಯಂತ್ರಣ ಕಳೆದುಕೊಂಡಿದ್ದಾನೆ. ಆಗ ಹೆಬ್ಬಾಳಕರ ಕಾರು ರಸ್ತೆ ಪಕ್ಕದ ಮರಕ್ಕೆ ಢಿಕ್ಕಿ ಹೊಡೆದಿದೆ.ಇದರಿಂದ ಕಾರಿನಲ್ಲಿದ್ದ ಸಚಿವೆ ಹೆಬ್ಬಾಳಕರ, ಸಹೋದರ ಸೇರಿ ಮೂವರಿಗೆ ಬಲವಾದ ಪೆಟ್ಟಾಗಿದೆ. ಕಾರನಲ್ಲಿದ್ದ ಏರ್ ಬ್ಯಾಗ್ ಓಪನ್ ಆಗಿದ್ದರಿಂದ ನಾಲ್ವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅಪಘಾತ ಆಗುತ್ತಿದ್ದಂತೆ ತಕ್ಷಣವೇ ಸ್ಥಳೀಯರು ಸಚಿವೆ ಹೆಬ್ಬಾಳಕರ ಅವರನ್ನ ಬೆಳಗಾವಿ ವಿಜಯ ಆಸ್ಪತ್ರೆ ಗೆ ದಾಖಲಿಸಿದ್ದಾರೆ. ಸಚಿವೆ ಲಕ್ಷ್ಮೀ ಹೆಬ್ಬಾಳಕರ ಆಸ್ಪತ್ರೆಗೆ ಬಂದಾಗ ಕಾರನಿಂದ ಇಳಿಯಲು ಆಗಲಿಲ್ಲ. ಕೆಲವರ ಸಹಾಯದಿಂದ ವೀಲ್ ಚೇರ್ ಮೇಲೆ ಕುಳಿತು ಆಸ್ಪತ್ರೆ ಒಳಗೆ ಕರೆದುಕೊಂಡು ಹೋಗಲಾಯ್ತು. ಅತ್ತ ಆಸ್ಪತ್ರೆಯಲ್ಲೂ ಸಚಿವೆ ಹೆಬ್ಬಾಳಕರ ಅವರನ್ನ ವೀಲ್ ಚೇರ್ ಮೇಲೆಯೇ ಚಿಕಿತ್ಸೆ ಪಡೆದುಕೊಂಡಿದ್ದಾರೆ. ತಕ್ಷಣವೇ ತಜ್ಞ ವೈದ್ಯ ಡಾ. ರವಿ ಪಾಟೀಲ್ ತಂಡ ಸಚಿವೆ ಹೆಬ್ಬಾಳಕರ ಸೇರಿ ನಾಲ್ವರಿಗೂ ಪೇನ್ ಕಿಲ್ಲರ್ ಇಂಜಕ್ಷನ್, ಆ್ಯಂಟಿಬೈಟಿಕ್ ಇಂಜೆಕ್ಷನ್ ಕೊಟ್ಟಿದ್ದಾರೆ. ಏಕ್ಸರೆ ಮತ್ತು ಸಿಟಿ ಸ್ಕ್ಯಾನ್ ಮಾಡಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಬೆನ್ನಿನ L1 ಮತ್ತುL4 ಮೂಳೆ ಮುರಿದೆ.ಅಲ್ಲದೇ ಕುತ್ತಿಗೆ ಬಳಿಯ C1 ಮತ್ತುC2 ಮೂಳೆ ಮುರದಿರುವುದು ಪತ್ತೆಯಾಗಿದೆ. ಅತ್ತ ಸಚಿವೆ ಸಹೋದರ ಚನ್ನರಾಜ್ ಹಟ್ಟಿಹೊಳಿ ಗೆ ತಲೆ ಪೆಟ್ಟಾಗಿದ್ದು, ಮೆದುಳಿಗೆ ಬಾವು ಬಂದಿದೆ. ಸದ್ಯ ಸಚಿವೆ ಆರೋಗ್ಯವಾಗಿದ್ದಾರೆ. ಯಾವುದೇ ಭಯ ಪಡುವುದು ಅಗತ್ಯವಿಲ್ಲ ಅಂತಾ ಡಾ.ರವಿ ಪಾಟೀಲ್ ಮತ್ತು ಪುತ್ರ ಮೃಣಾಲ್ ಹೆಬ್ಬಾಳಕರ ಹೇಳಿದ್ದಾರೆ.
ಇನ್ನೂ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಇನ್ನೆರಡು ದಿನಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲಿದ್ದಾರೆ. ಅನಂತರ ಸಚಿವೆ ಹೆಬ್ಬಾಳಕರ ಅವರನ್ನ ಡಿಸ್ಚಾಜ್ ಮಾಡಲಾಗುವುದು. ಒಂದು ತಿಂಗಳುಗಳ ಕಾಲ ಮನೆಯಲ್ಲಿ ಹೆಬ್ಬಾಳಕರ ಗೆ ಬೆಡ್ ರೇಸ್ಟಗೆ ವೈದ್ಯರು ಸಲಹೆ ಕೊಟ್ಟಿದ್ದಾರೆ. ಇನ್ನೂ ಸಚಿವೆ ಹೆಬ್ಬಾಳಕರ ಜೊತೆಗೆ ಪುತ್ರ ಮೃಣಾಲ್ ಕೂಡಾ ಕಾರಿನಲ್ಲಿ ಬರಬೇಕಿತ್ತು.ಆದ್ರೆ ಕೊನೆಕ್ಷಣದಲ್ಲಿ ಮೃಣಾಲ್ ರೈಲಿನಲ್ಲಿ ಬೆಳಗಾವಿ ಗೆ ಬಂದಿದ್ದಾರೆ. ಇದರಿಂದ ಅಪಘಾತದಿಂದ ಮೃಣಾಲ್ ಪಾರಾಗಿದ್ದಾರೆ. ಘಟನೆ ತಿಳಿಯುತ್ತಿದ್ದಂತೆ ತಾಯಿ, ಸೊಸೆ ಡಾ. ಹಿತಾ, ಸಹೋದರಿಯರು, ಪತಿ ರವೀಂದ್ರ ಆಸ್ಪತ್ರೆ ಗೆ ದೌಡಾಯಿಸಿ ಬಂದ್ರು. ಅತ್ತ ಬೆಳಗಾವಿ ಎಸ್ಪಿ, ಪೊಲೀಸ್ ಕಮೀಷನರ್, ಕಾರಂಜಿ ಮಠದ ಸ್ವಾಮೀಜಿ, ಬಿಜೆಪಿ ರಾಜ್ಯ ಉಪಾಧ್ಯಕ್ಷ ಅನಿಲ ಬೆನಕೆ, ಜೋಲ್ಲೆ ದಂಪತಿಗಳು ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿ, ಕುಟುಂಬಸ್ಥರಿಗೆ ಧೈರ್ಯ ತುಂಬಿದ್ರು. ಈ ಮಧ್ಯೆ ಬೆಳಗಾವಿ ಎಸ್ಪಿ ಡಾ.ಭೀಮಾಶಂಕರ ಗುಳೇದ ಖುದ್ದು ಸಚಿವೆಯಿಂದ ಘಟನೆ ಸಂಪೂರ್ಣ ಮಾಹಿತಿ ಪಡೆದಿದ್ದಾರೆ. ನಾಯಿ ಅಡ್ಡ ಬಂದ್ದಿದ್ದಕ್ಕೆ ಅಪಘಾತ ಸಂಭವಿಸಿದೆ. ಕಾನೂನು ಪ್ರಕಾರ ಕೇಸ್ ದಾಖಲಾಗುತ್ತದೆ. ಸದ್ಯ ಎಲ್ಲರೂ ಆರೋಗ್ಯವಾಗಿದ್ದಾರೆ ಅಂತಾ ಎಸ್ಪಿ ಹೇಳಿದ್ದಾರೆ. ಇತ್ತ ಮಾಜಿ ಸಚಿವೆ ಶಶಿಕಲಾ ಜೋಲ್ಲೆ ಮಾತನಾಡಿ, ಹೆಬ್ಬಾಳಕರ ಖುದ್ದು ನನ್ನೊಂದಿಗೆ ಮಾತನಾಡಿದ್ದಾರೆ. ದೇವರ ದಯೆಯಿಂದ ಏನು ಆಗಿಲ್ಲ. ಯಾರು ಕೂಡಾ ಗಾಬರಿ ಪಡಬೇಕಿಲ್ಲಾ ಅಂತಾ ಹೇಳಿದ್ದಾರೆ.
ಒಟ್ಟಿನಲ್ಲಿ ಸಂಭ್ರಮದಿಂದ ಕುಟುಂಬಸ್ಥರ ಜೊತೆಗೆ ಸಂಕ್ರಾಂತಿ ಹಬ್ಬ ಆಚರಿಸಬೇಕೆಂದು ಕೊಂಡಿದ್ದ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸದ್ಯ ವೈದ್ಯರ ನಿಗಾದಲ್ಲಿ ಸಚಿವೆ ಹೆಬ್ಬಾಳಕರ ಚಿಕಿತ್ಸೆ ಮುಂದೊರೆದಿದೆ. ಅಪಘಾತ ಸುದ್ದಿ ಕೇಳಿ ಮುಖಂಡರು, ಆಪ್ತರು, ಕಾರ್ಯಕರ್ತರು ಆಸ್ಪತ್ರೆಗೆ ದೌಡಾಯಿಸಿ ಬರುತ್ತಿದ್ದಾರೆ. ವೈದ್ಯರು ವಿಶ್ರಾಂತಿ ಸೂಚಿಸಿದ್ದರಿಂದ ಗಣ್ಯರನ್ನ ಹೊರತುಪಡಿಸಿ ಯಾರೊಬ್ಬರಿಗೂ ಭೇಟಿ ಅವಕಾಶ ಕೊಡ್ತಿಲ್ಲ.ಅತ್ತ ಗೃಹ ಸಚಿವ ಪರಮೇಶ್ವರ ಸ್ವಯಂ ಸಚಿವೆ ಆರೋಗ್ಯ ವಿಚಾರಿಸಿದ್ದಾರೆ. ರಸ್ತೆ ಅಪಘಾತ ಕುರಿತು ಕಿತ್ತೂರು ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.