Tuesday, October 6, 2026
Homeರಾಜಕೀಯಬೆಳಗಾವಿ : ಶೀಘ್ರದಲ್ಲೇ ಡಿಕೆಶಿ ಸಂಪುಟದಲ್ಲಿ ಮಹಿಳಾ ಮಂತ್ರಿ? ಲಕ್ಷ್ಮೀ ಹೆಬ್ಬಾಳಕರ ಹೇಳಿಕೆ ಕುತೂಹಲ..!

ಬೆಳಗಾವಿ : ಶೀಘ್ರದಲ್ಲೇ ಡಿಕೆಶಿ ಸಂಪುಟದಲ್ಲಿ ಮಹಿಳಾ ಮಂತ್ರಿ? ಲಕ್ಷ್ಮೀ ಹೆಬ್ಬಾಳಕರ ಹೇಳಿಕೆ ಕುತೂಹಲ..!

ಬೆಳಗಾವಿ : ಕರ್ನಾಟಕ ಸಚಿವ ಸಂಪುಟದಲ್ಲಿ ಮಹಿಳಾ ಸಚಿವರ ಸೇರ್ಪಡೆ ವಿಚಾರ ಮತ್ತೆ ಚರ್ಚೆಗೆ ಬಂದಿದೆ. ಈ ಕುರಿತು ಬೆಳಗಾವಿಯಲ್ಲಿ ಮಾಜಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ ನೀಡಿರುವ ಹೇಳಿಕೆ ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ.

ಸಚಿವ ಸಂಪುಟಕ್ಕೆ ಮಹಿಳಾ ಸಚಿವರ ಸೇರ್ಪಡೆ ವಿಳಂಬವಾಗುತ್ತಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಲಕ್ಷ್ಮೀ ಹೆಬ್ಬಾಳಕರ, “ಅತೀ ಶೀಘ್ರದಲ್ಲೇ ಕರ್ನಾಟಕ ಸರ್ಕಾರದ ಸಂಪುಟದಲ್ಲಿ ಮಹಿಳಾ ಮಂತ್ರಿಯನ್ನು ನೋಡ್ತೀರಿ” ಎಂದು ಹೇಳಿದ್ದಾರೆ.

ಇದೇ ವೇಳೆ, “ಲಕ್ಷ್ಮೀ ಹೆಬ್ಬಾಳಕರ ಅವರೇ ಮತ್ತೆ ಸಚಿವರಾಗುತ್ತಾರಾ?” ಎಂಬ ಪ್ರಶ್ನೆಗೆ ನೇರ ಉತ್ತರ ನೀಡಲು ಅವರು ನಿರಾಕರಿಸಿದ್ದಾರೆ. “ನಾನು ಒಂದಕ್ಕೆ ಉತ್ತರ ಕೊಡ್ತೀನಿ, ಒಂದಕ್ಕೆ ಉತ್ತರ ಕೊಡಲ್ಲ. ಎರಡನೇ ಪ್ರಶ್ನೆಗೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.“ಸುತ್ತಿ ಬಳಿಸಿ ನನ್ನ ಸುತ್ತಲೂ ಬರಬೇಡಿ. ನಾನು ಬಹಳಷ್ಟು ಸೂಕ್ಷ್ಮವಾದ ಸ್ಥಳದಲ್ಲಿ ಇದ್ದೇನೆ” ಎಂದು ಹೆಬ್ಬಾಳಕರ ಹೇಳಿದ್ದಾರೆ.

ರಾಜಕೀಯದಲ್ಲಿ ಅಧಿಕಾರ ಶಾಶ್ವತವಲ್ಲ ಎಂಬುದನ್ನು ಉಲ್ಲೇಖಿಸಿದ ಅವರು, “ರಾಜಕಾರಣದಲ್ಲಿ ಕಾಲ ಒಂದೇ ತರಹ ಇರುವುದಿಲ್ಲ, ಅಧಿಕಾರವು ಶಾಶ್ವತವಾಗಿ ಇರುವುದಿಲ್ಲ. ಅಧಿಕಾರ ಇದ್ದಾಗ ಜನರು ನೆನೆಸುವಂತಹ ಕೆಲಸ ಮಾಡಿದ್ದೀನಿ” ಎಂದರು.
ತಮ್ಮ ಕ್ಷೇತ್ರ, ಜಿಲ್ಲೆ ಹಾಗೂ ರಾಜ್ಯದಲ್ಲಿ ಸಚಿವೆಯಾಗಿ ಉತ್ತಮ ಕೆಲಸ ಮಾಡಿರುವುದಾಗಿ ಹೇಳಿದ ಹೆಬ್ಬಾಳಕರ, “ಈಗ ನೀವೇ ಹೇಳ್ತಿದ್ದೀರಿ ಜನ ನೆನಪಿಸುತ್ತಿದ್ದಾರೆ ಅಂತ” ಎಂದು ಪ್ರತಿಕ್ರಿಯಿಸಿದರು. ಹೆಬ್ಬಾಳಕರ ಅವರ ಈ ಹೇಳಿಕೆ ಮತ್ತೆ ಸಚಿವ ಸಂಪುಟ ಸೇರ್ಪಡೆಯಾಗುವ ಸಾಧ್ಯತೆ ಕುರಿತ ಚರ್ಚೆಗೆ ಕಾರಣವಾಗಿದ್ದು, ಅವರು ನೀಡಿರುವ “ಶೀಘ್ರದಲ್ಲೇ ಮಹಿಳಾ ಮಂತ್ರಿ” ಎಂಬ ಹೇಳಿಕೆ ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular