ಬೆಂಗಳೂರು : ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ವ್ಯಾಪ್ತಿಗೆ ಬರುವ ರಾಜ್ಯದಲ್ಲಿನ ಒಟ್ಟು 9 ರಾಷ್ಟ್ರೀಯ ಹೆದ್ದಾರಿಗಳ ಟೋಲ್ ದರ ಏರಿಕೆಯಾಗಿದ್ದು, ಏಪ್ರಿಲ್ 1 ರಿಂದ ಜಾರಿಯಾಗಲಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಟೋಲ್ ದರವನ್ನು ಪರಿಷ್ಕರಿಸಿದ್ದು, ವಿಶೇಷವಾಗಿ ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇನಲ್ಲಿ ಸಂಚರಿಸುವವರಿಗೆ ಹೆಚ್ಚಿನ ಹೊರೆಯಾಗಲಿದೆ.
ದರ ಏರಿಕೆಗೆ ಕಾರಣವೇನು : ಪ್ರತಿ ವರ್ಷ ಹಣದುಬ್ಬರ ಮತ್ತು ಸಗಟು ಬೆಲೆ ಸೂಚ್ಯಂಕವನ್ನು (ಡಬ್ಲೂö್ಯಪಿಐ) ಆಧರಿಸಿ ಟೋಲ್ ದರಗಳನ್ನು ಪರಿಷ್ಕರಿಸಲಾಗುತ್ತದೆ. ರಸ್ತೆಗಳ ನಿರ್ವಹಣೆ ಮತ್ತು ಮೂಲಸೌಕರ್ಯ ಅಭಿವೃದ್ಧಿಗಾಗಿ ಈ ಹೆಚ್ಚಳ ಅನಿವಾರ್ಯ ಎಂದು ಎನ್ಎಚ್ಎಐ ಅಧಿಕಾರಿಗಳು ತಿಳಿಸಿದ್ದಾರೆ.
ಫಾಸ್ಟ್ಟ್ಯಾಗ್ ವಾರ್ಷಿಕ ಪಾಸ್ ದರವೂ ಏರಿಕೆ: ಕೇವಲ ದಿನನಿತ್ಯದ ಟೋಲ್ ಮಾತ್ರವಲ್ಲದೆ, ಫಾಸ್ಟ್ಟ್ಯಾಗ್ ವಾರ್ಷಿಕ ಪಾಸ್ ದರವನ್ನು ಸಹ ಎನ್ಎಚ್ಎಐ ಶೇ,75 ರಷ್ಟು ಏರಿಕೆ ಮಾಡಿದೆ. ಪ್ರಸ್ತುತ 3,000 ಇರುವ ವಾರ್ಷಿಕ ಪಾಸ್ ದರವು ಏಪ್ರಿಲ್ 1 ರಿಂದ 3,೦75 ಆಗಲಿದೆ. ಈ ಪಾಸ್ ಮೂಲಕ ವರ್ಷಕ್ಕೆ 200 ಬಾರಿ ಟೋಲ್ ದಾಟುವ ಅವಕಾಶವಿರುತ್ತದೆ.
ವಾಹನದ ಫಾಸ್ಟ್ಟ್ಯಾಗ್ ನಲ್ಲಿ ಕನಿಷ್ಠ ಬ್ಯಾಲೆನ್ಸ್ ಕಾಯ್ದುಕೊಳ್ಳಬೇಕಿದೆ. ಏಪ್ರಿಲ್ 1 ರಿಂದ ಹಣವಿಲ್ಲದಿದ್ದರೆ ದ್ವಿಗುಣ ಮೊತ್ತವನ್ನು ಪಾವತಿಸಬೇಕಾಗಬಹುದು. ಯಾವ ಟೋಲ್ಗಳಲ್ಲಿ ಏರಿಕೆ : ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ, ಬೆಂಗಳೂರು-ಹೈದರಾಬಾದ್ ರಾಷ್ಟಿçÃಯ ಹೆದ್ದಾರಿ, ಬೆಂಗಳೂರು-ಪುಣೆ ರಾಷ್ಟ್ರೀಯ ಹೆದ್ದಾರಿ, ಹೊಸೂರು ರಸ್ತೆ (ಎಲೆಕ್ಟಾçನಿಕ್ ಸಿಟಿ ಫ್ಲೆöÊ ಓವರ್), ಬೆಂಗಳೂರು-ಚೆನ್ನೈ ರಾಷ್ಟ್ರೀಯ ಹೆದ್ದಾರಿ, ಬೆಂಗಳೂರು ವಿಮಾನ ನಿಲ್ದಾಣ ರಸ್ತೆ (ಸಾದಹಳ್ಳಿ ಟೋಲ್) ಸೇರಿದಂತೆ ಒಟ್ಟು ೯ ರಾಷ್ಟಿçÃಯ ಹೆದ್ದಾರಿಗಳಲ್ಲಿ ಸಂಚರಿಸುವ ವಾಹನ ಚಾಲಕರಿಗೆ ಟೋಲ್ ದರ ಏರಿಕೆ ಬಿಸಿ ತಟ್ಟಲಿದೆ.


