Saturday, July 18, 2026
Homeಜಿಲ್ಲೆಮಂಗಳೂರು ; ಸಿಸಿಬಿ ಪೊಲೀಸರ ಕಾರ್ಯಾಚರಣೆ : ಮಾದಕ ವಸ್ತು ಎಂಡಿಎಂಎ ಮಾರಾಟ ಮಾಡುತ್ತಿದ್ದ ಮೂವರ...

ಮಂಗಳೂರು ; ಸಿಸಿಬಿ ಪೊಲೀಸರ ಕಾರ್ಯಾಚರಣೆ : ಮಾದಕ ವಸ್ತು ಎಂಡಿಎಂಎ ಮಾರಾಟ ಮಾಡುತ್ತಿದ್ದ ಮೂವರ ಬಂಧನ, 4,37,500 ಮೌಲ್ಯದ ಸೊತ್ತು ವಶಕ್ಕೆ.

ಮಂಗಳೂರು ; ಮಂಗಳೂರು ನಗರದಲ್ಲಿ ಮಾದಕ ವಸ್ತುಗಳ ಮಾರಾಟವನ್ನು ತಡೆಯುವ ನಿಟ್ಟಿನಲ್ಲಿ ಸಿಸಿಬಿ (CCB) ಪೊಲೀಸರು ಮಹತ್ವದ ಕಾರ್ಯಾಚರಣೆ ನಡೆಸಿದ್ದು ಪಂಪ್‌ವೆಲ್–ಎಕ್ಕೂರು ಪ್ರದೇಶದಲ್ಲಿ ಆಟೋ ರಿಕ್ಷಾದ ಮೂಲಕ ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದ ನಿಷೇಧಿತ ಮಾದಕ ವಸ್ತುವಾದ ಎಂಡಿಎಂಎ (MDMA) ವಶಪಡಿಸಿಕೊಂಡು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ಬಂಧಿತರನ್ನು ತೊಕ್ಕೊಟ್ಟು ಪೆರ್ಮನೂರು ನಿವಾಸಿ ಹೈದರ್ ಅಲಿ (53), ಚೆಂಬುಗುಡ್ಡೆ ನಿವಾಸಿ ಮೊಹಮ್ಮದ್ ಸಜಾದ್ (29) ಹಾಗೂ ಶಿರ್ವ ಉಡುಪಿ ಜಿಲ್ಲೆ ಪ್ರಸ್ತುತ ಉಜ್ಜೋಡಿಯಲ್ಲಿ ನೆಲೆಸಿರುವ ಜೈಸನ್ ಮೆನೆಜಸ್ (26) ಎಂದು ತಿಳಿದಿದೆ.ಆರೋಪಿಗಳಿಂದ 26 ಗ್ರಾಂ ಎಂಡಿಎಂಎ (ಮೌಲ್ಯ: ₹2,50,000) ನಗದು ₹37,000 , ೫ ಮೊಬೈಲ್ ಫೋನ್‌,ತೂಕಮಾಪನ ಯಂತ್ರ ಹಾಗೂ ಆಟೋ ರಿಕ್ಷಾ ಸೇರಿ ಒಟ್ಟು ₹4,37,500 ಮೌಲ್ಯದ ಸೊತ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.ಈ ಕುರಿತು ಮಂಗಳೂರು ನಗರದ ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular