Friday, March 13, 2026
Flats for sale
Homeವಿದೇಶಬೆಂಗಳೂರು : ಯೆಮೆನ್ ಪ್ರಜೆಯ ತಲೆಯಲ್ಲಿ 18 ವರ್ಷಗಳಿಂದ ಇದ್ದ ಗುಂಡನ್ನು ಹೊರತೆಗೆದ ವೈದ್ಯರು.

ಬೆಂಗಳೂರು : ಯೆಮೆನ್ ಪ್ರಜೆಯ ತಲೆಯಲ್ಲಿ 18 ವರ್ಷಗಳಿಂದ ಇದ್ದ ಗುಂಡನ್ನು ಹೊರತೆಗೆದ ವೈದ್ಯರು.

ಬೆಂಗಳೂರು : ಯೆಮೆನ್ ಪ್ರಜೆಯ ತಲೆಯಲ್ಲಿ ಬರೋಬ್ಬರಿ ೧೮ ವರ್ಷಗಳಿಂದ ಇದ್ದ ಗುಂಡನ್ನು ಬೆಂಗಳೂರಿನ ವೈದ್ಯರು ಯಶಸ್ವಿಯಾಗಿ ಶಸ್ತçಚಿಕಿತ್ಸೆ ಮೂಲಕ ಹೊರತೆಗೆದಿದ್ದಾರೆ.

ಇದೊಂದು ಆಶ್ಚರ್ಯವೇ ಅನ್ನಬಹುದು ಹೌದು…29 ವರ್ಷದ ಯೆಮೆನ್ ಪ್ರಜೆಯ ತಲೆಯಲ್ಲಿ ಸುಮಾರು 18 ವರ್ಷಗಳಿಂದ ಅಂಟಿಕೊAಡಿದ್ದ ಬುಲೆಟ್ ಅನ್ನು ಬೆಂಗಳೂರಿನ ವೈದ್ಯರು ತೆಗೆದುಹಾಕಿದ್ದಾರೆ. 10 ನೇ ವಯಸ್ಸಿನಲ್ಲಿ ಯೆಮೆನ್‌ನಲ್ಲಿ ಎರಡು ಗುಂಪುಗಳ ಘರ್ಷಣೆ ನಡೆದಿತ್ತು. ಈ ವೇಳೆ ಈತ ತನ್ನ ಅಂಗಡಿಯಿAದ ಹೊರಬAದಾಗ ಗಾಯಗೊಂಡಿದ್ದರು. ಅವರನ್ನು ಹತ್ತಿರದ ಆಸ್ಪತ್ರೆಗೆ ಸಾಗಿಸಲಾಯಿತು. ವೈದ್ಯರು ಗಾಯವನ್ನು ಮಾತ್ರ ಸ್ವಚ್ಛಗೊಳಿಸಿದರು ಮತ್ತು ಬುಲೆಟ್ ಅನ್ನು ಹೊರತೆಗೆಯಲಿಲ್ಲ.ಇದರಿಂದ ಅವರಿಗೆ ಸರಿಯಾಗಿ ಕಿವು ಕೇಳಿಸುತ್ತಿರಲಿಲ್ಲ, ಪದೇಪದೆ ತಲೆನೋವು ಮತ್ತು ಕಿವಿ ಸೋರುವಿಕೆಯಿಂದ ಬಳಲುತ್ತಿದ್ದರು. ಏಕೆಂದರೆ ಸುಮಾರು ೩ ಸೆಂಟಿಮೀಟರ್ ಉದ್ದದ ಗುಂಡು ಅವರ ಎಡ ಕಿವಿಯ ಮೂಲಕ ಒಳಗೆ ಹೋಗಿತ್ತು. ಮೂಳೆಯಲ್ಲಿ ಸಿಲುಕಿತ್ತು. ಕೀವು ಶೇಖರಣೆಯಿಂದಾಗಿ ಕಿವಿಯ ಸೋಂಕು ಉAಟಾಗಿತ್ತು. ಕೊನೆಗೂ ಕಳೆದ ವಾರ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಅದನ್ನು ತೆಗೆಯಲಾಗಿದೆ.

ವೈದ್ಯರು ಬುಲೆಟ್‌ನ ನಿಖರವಾದ ಸ್ಥಾನವನ್ನು ಕಂಡುಹಿಡಿಯಲು ಎಕ್ಸ್ರೇ ಮಾಡಿ ಸುತ್ತಮುತ್ತಲಿನ
ಅಂಗಾAಶಗಳಿAದ ಬೇರ್ಪಡಿಸುವಲ್ಲಿ ಯಶಸ್ವಿಯಾದರು. ಸದ್ಯ ವ್ಯಕ್ತಿಯ ಶಸ್ತçಚಿಕಿತ್ಸೆಯಿಂದಾಗಿ ಶ್ರವಣಶಕ್ತಿ ಭಾಗಶಃ ಕೇಳಿಸುತ್ತಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular