Thursday, July 23, 2026
Homeರಾಜ್ಯಬೆಂಗಳೂರು : ಪಕ್ಕದ ಮನೆಯ ದಂಪತಿಗಳ ಸರಸ ಸಲ್ಲಾಪದಿಂದ ಕಿರಿಕಿರಿ,ಬೇಸತ್ತ ಮಹಿಳೆಯಿಂದ ಪೊಲೀಸ್​ ಠಾಣೆಗೆ ದೂರು.

ಬೆಂಗಳೂರು : ಪಕ್ಕದ ಮನೆಯ ದಂಪತಿಗಳ ಸರಸ ಸಲ್ಲಾಪದಿಂದ ಕಿರಿಕಿರಿ,ಬೇಸತ್ತ ಮಹಿಳೆಯಿಂದ ಪೊಲೀಸ್​ ಠಾಣೆಗೆ ದೂರು.

ಬೆಂಗಳೂರು : ರಾತ್ರೆ ಪಕ್ಕದ ಮನೆ ದಂಪತಿಯ ಖುಲ್ಲಂಖುಲ್ಲಾ ಸರಸ ಸಲ್ಲಾಪ ವಿಕೃತ ವರ್ತನೆ ಲೈಂಗಿಕ ಕ್ರಿಯೆಯಿಂದ ಬೇಸತ್ತ ಮಹಿಳೆಯೊಬ್ಬರು ಗಿರಿನಗರ ಪೊಲೀಸರಿಗೆ ದೂರು ನೀಡಿದ್ದಾರೆ. ಗಿರಿನಗರದ ಅವಲಹಳ್ಳಿಯ 44 ವರ್ಷದ ಮಹಿಳೆಯು ತಾನು ವಾಸವಿರುವ ಬಾಡಿಗೆ ಮನೆಯ ಪಕ್ಕದ ಮನೆಯಲ್ಲಿ ವಾಸವಿರುವ ಖುಲ್ಲಂಖುಲ್ಲಾ ಸರಸ ಸಲ್ಲಾಪ ನಡೆಸುವ ದಂಪತಿ ವಿರುದ್ಧ ದೂರು ನೀಡಿದ್ದು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಮಹಿಳೆಯು ಬಾಡಿಗೆಗಿರುವ ಮನೆ ಬಾಗಿಲಿಗೆ ಎದುರಾಗಿಯೇ ಪಕ್ಕದ ಮನೆ ಬೆಡ್ ರೂಂ ಇದ್ದು ಅಲ್ಲಿನ ದಂಪತಿ ಕಿಟಕಿ ಬಾಗಿಲು ತೆರೆದಿಟ್ಟುಕೊಂಡೇ ಲೈಂಗಿಕ ಕ್ರಿಯೆ ನಡೆಸುತ್ತಾರೆ. ಜೊತೆಗೆ ವಿಕೃತ ವರ್ತನೆ ಮಾಡುತ್ತಾ ಕಿರುಚುವ ಸದ್ದುಗಳು ಹಾಗೂ ಹಾವಭಾವಗಳನ್ನು ಪ್ರದರ್ಶಿಸಲಿದ್ದು ಅವರ ವರ್ತನೆಯಿಂದ ಕಿರಿಕಿರಿ ಉಂಟಾಗಿ ಕಿಟಕಿ ಬಾಗಿಲು ಹಾಕಿಕೊಳ್ಳಿ ಎಂದರೆ, ನಮ್ಮ ಮನೆ ನಮ್ಮ ಇಷ್ಟ ಎಂದು ಉತ್ತರಿಸುತ್ತಾರೆ ಅಲ್ಲಿನ ವ್ಯಕ್ತಿಯು ನನ್ನ ಅತ್ಯಾಚಾರ, ಕೊಲೆ ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ಮಹಿಳೆ ಉಲ್ಲೇಖಿಸಿದ್ದಾರೆ.

ಆರೋಪಿಗೆ ಮನೆ ಮಾಲೀಕ ಮತ್ತು ಆತನ ಮಗನೂ ಸಾಥ್ ಕೊಟ್ಟಿದ್ದು,ನಿಮಗೆ ಇಷ್ಟವಿಲ್ಲದಿದ್ದರೆ ನೀವೇ ಮನೆ ಬಿಟ್ಟುಹೋಗಿ ಎಂದು ದಬಾಯಿಸಿದ್ದಾರೆ.ಅಲ್ಲದೆ ಕೆಲವು ಯುವಕರನ್ನು ಕರೆಸಿ, ಎಲ್ಲರೂ ತುಂಬಾ ಅವಾಚ್ಯ ಶಬ್ದಗಳಿಂದ ನಿಂದಿಸಿ ಮಹಿಳೆ ಮತ್ತು ಮಹಿಳೆಯ ಕುಟುಂಬಕ್ಕೆ ಬೆದರಿಕೆ ಹಾಕಿದ್ದಾರೆ. ಇವರಿಂದ ಸೂಕ್ತ ರಕ್ಷಣೆ ನೀಡಿ ಮತ್ತು ಇವರುಗಳ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಮಹಿಳೆ ದೂರು ದಾಖಲಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular