Saturday, March 14, 2026
Flats for sale
Homeಕ್ರೀಡೆಬೆಂಗಳೂರು : ದೇಶದಲ್ಲಿ ಇಂದಿನಿಂದ 18 ನೇ ಆವೃತ್ತಿಯ T20 ಐಪಿಎಲ್ ಪರ್ವ…!

ಬೆಂಗಳೂರು : ದೇಶದಲ್ಲಿ ಇಂದಿನಿಂದ 18 ನೇ ಆವೃತ್ತಿಯ T20 ಐಪಿಎಲ್ ಪರ್ವ…!

ಬೆಂಗಳೂರು : ಅತಿ ಶ್ರೀಮಂತ ಕ್ರಿಕೆಟ್ ಟಿ20 ಲೀಗ್,ಬಿಸಿಸಿಐನ ಬಾಕ್ಸ್ ಆಫೀಸ್, ಇಂಡಿಯನ್ ಪ್ರೀಮಿಯರ್ ಲೀಗ್ ೧೮ನೇ ವರ್ಷಕ್ಕೆ ಕಾಲಿಟ್ಟಿದ್ದು, ಇಂದಿನಿಂದ ಈ ಹೊಸ ಆವೃತ್ತಿ ದೇಶದಲ್ಲಿ ಸಂಚಲನ ಮೂಡಿಸಲಿದೆ. ‘

10 ತಂಡಗಳು, 24 ಪಂದ್ಯಗಳಲ್ಲಿ ಒಂದು ಟ್ರೋಫಿಗಾಗಿ ಕಾದಾಟ ನಡೆಸಲಿದ್ದು, ಬೇಸಿಗೆಯ ಬಿರುಬಿಸಿಲಿಗೆ ಬಳಲಿ ಹೋಗಿರುವ ಅಭಿಮಾನಿಗಳಿಗೆ ಸಂಜೆಯ ಸಮಯವನ್ನು ಮತ್ತೇರಿಸುವಂತಹ ಮಜಾ ನೀಡಲಿದೆ ಈ ಟೂರ್ನಿ. 17 ಆವೃತ್ತಿಗಳನ್ನು ಕಂಡ ಈ ಐಪಿಎಲ್‌ನಲ್ಲಿ ಈಗಾಗಲೇ6 ತಂಡಗಳು ಚಾಂಪಿಯನ್‌ಪಟ್ಟ ಅಲಂಕರಿಸಿವೆ. ಆರ್‌ಸಿಬಿ, ಪಂಜಾಬ್ ಕಿಂಗ್ಸ್, ಲಖನೌ ಸೂಪರ್ ಜಯಂಟ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಟ್ರೋಫಿಗಾಗಿ ಕಾಯುತ್ತಿವೆ. ಮೆಗಾ ಆಕ್ಷನ್ ಮೂಲಕ ಇಡೀ 10 ತಂಡಗಳು ಹೊಸ ರೂಪ ಪಡೆದುಕೊಂಡಿದೆ.9 ಭಾರತೀಯ ನಾಯಕರು, ಓರ್ವ ವಿದೇಶಿ ನಾಯಕರು ಈ ಟೂರ್ನಿಯಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನೂ ಸಾಕಷ್ಟು ವಿಶೇಷತೆಗಳಿಂದ ಇಂಡಿಯನ್ ಪ್ರೀಮಿಯರ್ ಲೀಗ್ ಮತ್ತಷ್ಟು ಬದಲಾವಣೆಗಳ ಮೂಲಕ ಎಲ್ಲರ ಎದುರಿಗೆ ಬರುತ್ತಿದ್ದು, ದೇಶದ ಕೋಟ್ಯಂತರ ಮಂದಿ ಕಣ್ತುಂಬಿಕೊಳ್ಳಲು ಕ್ಷಣಗಣನೆ ಆರಂಭವಾಗಿದೆ.

18ನೇ ಆವೃತ್ತಿ ಐಪಿಎಲ್‌ನಲ್ಲಿ 10 ತಂಡಗಳು ಪಾಲ್ಗೊಳ್ಳುತ್ತಿದ್ದು, ಒಂದು ತಂಡ 10 ತಂಡಗಳ ಪೈಕಿ 9 ತಂಡಗಳ ಜೊತೆ ಎರಡೆರಡು ಬಾರಿ ಕಾದಾಡಲಿವೆ. ಉಳಿದಂತೆ ಒಂದುತಂಡದೊಂದಿಗೆ ಒಮ್ಮೆ ಕಾದಾಡಲಿದ್ದು, ಒಟ್ಟು 14 ಲೀಗ್ ಪಂದ್ಯಗಳನ್ನು ಆಡಲಿದೆ. ಈ ಪೈಕಿ ಅತಿ ಹೆಚ್ಚು ಗೆಲುವು ಹಾಗೂ ಅಂಕ ಪಡೆದ 4 ತಂಡಗಳು ಪ್ಲೇಆಫ್‌ಗೆ ಲಗ್ಗೆಯಿಡಲಿವೆ. ಇದರಲ್ಲಿ ಎರಡು ಕ್ವಾಲಿಫೈಯರ್ ಹಾಗೂ 1 ಎಲಿಮಿನೇಟರ್ ಹಾಗೂ 1 ಫೈನಲ್ ಪಂದ್ಯ ನಿಗದಿಯಾಗಿದೆ.

ಪಟ್ಟಕ್ಕಾ ಗಿಯೇ ನೈಟ್ ರೈಡರ್ಸ್ ಹಂಟ್ .

ಈ ಬಾರಿಯ ಐಪಿಎಲ್‌ನಲ್ಲಿ ಹಾಲಿ ಚಾಂಪಿಯನ್ ಆಗಿ ಬರುತ್ತಿರುವ ಕೋಲ್ಕತಾ ನೈಟ್ ರೈಡರ್ಸ್ ಪಡೆ, ೪ನೇ ಬಾರಿ ಟ್ರೋಫಿ ಗೆದ್ದು ಪಟ್ಟ ಉಳಿಸಿಕೊಳ್ಳಲು ಎದುರು ನೋಡುತ್ತಿದೆ. ಆದರೆ, ಮೆಗಾ ಆಕ್ಷನ್‌ನಲ್ಲಿ ಮಾಡಿಕೊಂಡ ಎಡವಟ್ಟು, ಶ್ರೇಯಸ್ ಅಯ್ಯರ್ ಅವರನ್ನು ಕೈ ಬಿಟ್ಟು ಈಗ ಆ ಸ್ಥಾನಕ್ಕೆ ಕೊನೆ ಗಳಿಗೆಯಲ್ಲಿ ಅನುಭವಿ ಅಜಿಂಕ್ಯ ರಹಾನೆ ಅವರನ್ನು ತಂದು ಕೂರಿಸಲಾಗಿದೆ. ರಹಾನೆ ನಾಯಕತ್ವ ದೇಶೀಯ ಹಾಗೂ ಅಂತಾರಾಷ್ಟಿçÃಯ ಕ್ರಿಕೆಟ್‌ನಲ್ಲೂ ಮೆಚ್ಚುವಂತಹದ್ದೇ. ಅಲ್ಲದೇ, ರಾಜಸ್ಥಾನ ರಾಯಲ್ಸ್ ತಂಡವನ್ನು ಮುನ್ನಡೆಸಿದ ಅನುಭವವಿದೆ. ಹಾಗಾಗಿ ಕೆಕೆಆರ್‌ಗೆ ಸಾಲಿಡ್ ಕ್ಯಾಪ್ಟೆನ್ಸಿಯೇ ಶ್ರೀರಕ್ಷೆ. ಆಟಗಾರರ ಪೈಕಿಯೂ ಗಮನಾರ್ಹ ಆಯ್ಕೆ ಇಲ್ಲಿ ಕಾಣಬಹುದಾಗಿದ್ದು, ರೆಹಮುನ್ನುಲ್ಲಾ ಗುರ್ಬಾಜ್, ಕ್ವಿಂಟನ್ ಡಿ ಕಾಕ್, ರೊವ್ಮನ್ ಪೊವೆಲ್,ವೆಂಕಟೇಶ್ ಅಯ್ಯರ್, ರಿಂಕು ಸಿಂಗ್, ಆಂಡ್ರೆ ರಸೆಲ್ ಗೇಮ್ ಚೇಂಜರ್‌ಗಳಾಗಿದ್ದಾರೆ. ಬೌಲಿಂಗ್‌ನಲ್ಲೂ
ಕೆಕೆಆರ್ ಬಲಿಷ್ಠವಾಗಿದೆ.

ತಂಡಗಳ ನಾಯಕರ ಪಟ್ಟಿ
ಆರ್‌ಸಿಬಿ ರಜತ್ ಪಟೀದಾರ್
ಚೆನ್ನೈ ರುತುರಾಜ್ ಗಾಯಕ್ವಾಡ್
ಎಸ್‌ಆರ್‌ಎಚ್ ಪ್ಯಾಟ್ ಕಮಿನ್ಸ್
ಮುಂಬೈ ಹಾರ್ದಿಕ್ ಪಾಂಡ್ಯ
ಲಖನೌ ರಿಶಭ್ ಪಂತ್
ಕೆಕೆಆರ್ ಅಜಿಂಕ್ಯ ರಹಾನೆ
ಡೆಲ್ಲಿ ಅಕ್ಷರ್ ಪಟೇಲ್
ಪಂಜಾಬ್ ಶ್ರೇಯಸ್ ಅಯ್ಯರ್
ರಾಜಸ್ಥಾನ ಸಂಜು ಸ್ಯಾಮ್ಸನ್
ಗುಜರಾತ್ ಶುಭಮನ್ ಗಿಲ್

ಹೊಸ ನಿಯಮಗಳ ಜಾರಿ

ƒಓವರ್-ರೇಟ್ ಡಿಮೆರಿಟ್ ಪಾಯಿಂಟ್ ಸಿಸ್ಟಮ್:

ಪುನರಾವರ್ತಿತ ನಿಧಾನ ಓವರ್ ದರಗಳಿಗೆ ನಾಯಕರನ್ನು ನಿಷೇಧಿಸುವ ಬದಲು, ಐಪಿಎಲ್ 2025 ಡಿಮೆರಿಟ್ ಪಾಯಿಂಟ್‌ಗಳನ್ನು ನಿಗದಿಪಡಿಸುತ್ತದೆ.

ಮೂರು ವರ್ಷಗಳವರೆಗೆ ಸಂಗ್ರಹವಾಗುವ ಈ ಅಂಕಗಳ ಪರಿಣಾಮ ನಾಯಕರು ನಿಧಾನ ಓವರ್ ದರಗಳಿಗೆ ಆರ್ಥಿಕ ದಂಡ ತೆರಬೇಕಾಗುತ್ತದೆ.

ƒಟೈಮ್-ಔಟ್‌ಗಳು : ಐಪಿಎಲ್‌ನಲ್ಲಿ, ಪ್ರತಿ ಇನ್ನಿಂಗ್ಸ್ ಎರಡು ಸ್ಟಾರ್ಟಜಿಕ್ ಟೈಮ್-ಔಟ್‌ಗಳನ್ನು ಒಳಗೊಂಡಿದ್ದು, ೩ಫೀಲ್ಡಿಂಗ್ ತಂಡಗಳು 6-9 ಓವರ್‌ಗಳ ನಡುವೆ ಮತ್ತು ಬ್ಯಾಟಿಂಗ್ ತಂಡಗಳು 13- 16 ಓವರ್‌ಗಳ ನಡುವೆ ತಮ್ಮ ಟೈಮ್-ಔಟ್‌ಗಳನ್ನು ತೆಗೆದುಕೊಳ್ಳಬಹುದು.

ƒಲಾಲಾರಸದ ನಿಷೇಧಕ್ಕೆ ಬ್ರೇಕ್: ಐಪಿಎಲ್ 2025 ರಲ್ಲಿ ಚೆಂಡಿಗೆ ಲಾಲಾರಸ (ಎಂಜಲು) ಬಳಸುವುದಕ್ಕೆ ಇದ್ದ ನಿಷೇಧವನ್ನು ತೆಗೆದುಹಾಕಲಾಗುತ್ತದೆ, ಇದು ಆರಂಭದಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗದಿAದಾಗಿ ಜಾರಿಗೆ ತರಲಾದ ನಿಯಮವಾತ್ತು. ಆದರೆ ಈ ನಿಷೇಧವನ್ನು ತೆಗೆದು ಹಾಕಲಾಗಿದೆ.

ƒವೈಡ್‌ಗಳಿಗೆ ಹಾಕ್-ಐ ನಿಯಮ: ಈ ಬಾರಿಯ ಐಪಿಎಲ್‌ನಲ್ಲಿ ಆಫ್‌ಸೈಡ್ ಮತ್ತು ಹೆಡ್-ಹೈವೈಡ್ ಬಾಲ್‌ಗಳನ್ನು ನಿರ್ಣಯಿಸಲು ಹಾಕ್-ಐ ತಂತ್ರಜ್ಞಾನವನ್ನು ಬಳಸಲಾಗುವುದು. ಬ್ಯಾಟರ್‌ನ ಸೊಂಟದ ಎತ್ತರದ ನೋ ಬಾಲ್‌ಗಳಿಗೆ ಹಿಂದೆ ಬಳಸಲಾಗುತ್ತಿದ್ದ ತಂತ್ರಜ್ಞಾನವನ್ನು ಮುಂದುವರಿಸಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular