Thursday, July 23, 2026
Homeರಾಜ್ಯಬೆಂಗಳೂರು : ಗ್ರಾಹಕರಿಗೆ ಬಿಗ್ ಶಾಕ್ ; ಈರುಳ್ಳಿ ಬೆಲೆಯಲ್ಲಿ ಮತ್ತೆ ಏರಿಕೆ.

ಬೆಂಗಳೂರು : ಗ್ರಾಹಕರಿಗೆ ಬಿಗ್ ಶಾಕ್ ; ಈರುಳ್ಳಿ ಬೆಲೆಯಲ್ಲಿ ಮತ್ತೆ ಏರಿಕೆ.

ಬೆಂಗಳೂರು : ರಾಜ್ಯದಲ್ಲಿಈ ಬಾರಿ ಹೆಚ್ಚು ಮಳೆಯಾಗುವುದರಿಂದ ಈರುಳ್ಳಿಯ ಉತ್ಪಾದನೆಯಲ್ಲಿ ಭಾರಿ ಕುಸಿತ ಉಂಟಾಗಿದೆ. ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ಈರುಳ್ಳಿ ಬಾರದ ಹಿನ್ನೆಲೆ ಪೂರೈಕೆ ಕೂಡ ಕಡಿಮೆಯಾಗಿದೆ. ಸದ್ಯ ರಾಜ್ಯಕ್ಕೆ ಪುಣೆ, ಮಹಾರಾಷ್ಟ್ರದಿಂದ ಈರುಳ್ಳಿ ತರುಹಿಸಿಕೊಳ್ಳಲಾಗುತ್ತಿದ್ದು 50 ರೂ. ಇದ್ದ ಈರುಳ್ಳಿಯ ಬೆಲೆ ಇದೀಗ 60 ರಿಂದ 70 ರೂಪಾಯಿ ಆಗಿದೆ.

ಈ ದುಬಾರಿ ದುನಿಯಾದಿಂದ ಜನಸಾಮನ್ಯರ ಬದುಕು ಕಷ್ಟಕರವಾಗಿದೆ. ದಿನದಿಂದ ದಿನಕ್ಕೆ ಅಗತ್ಯ ವಸ್ತುಗಳ‌ ಬೆಲೆ‌ ಏರಿಕೆಯಾಗುತ್ತಿದ್ದು, ಬಡವರು ಮಧ್ಯಮ ವರ್ಗದವರು ಜೀವನ ನಡೆಸುವುದೇ ಸವಾಲಾಗಿದೆ. ಈ ಮಧ್ಯೆ ಈರುಳ್ಳಿ ಬೆಲೆ ಏರಿಕೆಯಾಗಿದ್ದು, ಗ್ರಹಾಕರಿಗೆ ಕಣ್ಣೀರು ತರಿಸುತ್ತಿದೆ. ಸದ್ಯ ಕರ್ನಾಟಕದ ಹಲವೆಡೆ ಅತಿಯಾದ ಮಳೆಯ ಕಾರಣ ಬೆಳೆ ನೀರು‌ಪಾಲಗುತ್ತಿದ್ದು, ಮತ್ತೊಂದೆಡೆ ಈರುಳ್ಳಿ ಮಳೆಯಿಂದಾಗಿ ಇಟ್ಟಲ್ಲೇ ಕೊಳೆತು ಹೋಗಿ ರೈತರಿಗೆ ಬಾರಿ ನಷ್ಟ ಉಂಟಾಗಿದೆ.

ಈ ಬಾರಿ ದಸರಾ ವೇಳೆಗೆ ಈರುಳ್ಳಿಯ ಬೆಲೆ ಮತ್ತಷ್ಟು ದುಬಾರಿಯಾಗುವ ಸಾಧ್ಯತೆ ಇದ್ದುಈರುಳ್ಳಿಯ ಬೆಲೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಅಂತ ವ್ಯಾಪಾರಸ್ಥರು ಅಂದಾಜಿಸಿದ್ದಾರೆ. ಈ‌ ಮಧ್ಯೆ ಬೆಳ್ಳುಳ್ಳಿ ಕೆಜಿಗೆ 400 ರೂ. ಆಗಿದ್ದು ಇದೆ ರೀತಿ ಮಳೆ ಮುಂದುವರಿದರೆ ದೈನದಿಂದ ಬಳಕೆಯ ವಸ್ತುಗಳು ಗಗನಕ್ಕೇರಲಿದೆ ಎಂದು ತಜ್ಞರು ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular