ಬೆಂಗಳೂರು : ಟ್ರಾಫಿಕ್ನ ಲ್ಲಿ ಸಿಲುಕಿದ್ದ ವ್ಯಕ್ತಿಯೊಬ್ಬ ತಡೆಯಲಾಗದೆ ರಸ್ತೆಯಲ್ಲೇ ಮೂತ್ರವಿಸರ್ಜನೆ ಮಾಡಿದ ಘಟನೆ ಬೆಂಗಳೂರಿನ ಚಂದಾಪುರ ಫ್ಲೈ ಓವರ್ ಮೇಲೆ ನಡೆದಿದೆ. ವ್ಯಕ್ತಿಯ ಮೂತ್ರವಿಸರ್ಜನೆ ವಿಡಿಯೋ ಸಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.
ಶನಿವಾರ, ಭಾನುವಾರ ಹಾಗೂ ಗಣರಾಜ್ಯೋತ್ಸವದ ಅಂಗವಾಗಿ ಸಾಲು ಸಾಲು ರಜೆಯಿದ್ದ ಕಾರಣ ಬೆಂಗಳೂರಿನಿAದ ಜನರು ತಮ್ಮ ತಮ್ಮ ಊರುಗಳತ್ತ ಮುಖಮಾಡುತ್ತಿದ್ದು ನಗರದಲ್ಲಿ ಸಂಚಾರ ದಟ್ಟಣೆ ವಿಪರೀತವಾಗಿತ್ತು. ಚಂದಾಪುರದಿAದ ಅತ್ತಿಬೆಲೆಗೆ ತೆರಳುವ ಮಾರ್ಗದಲ್ಲಿ ಸಂಚಾರ ದಟ್ಟಣೆ ಹೆಚ್ಚಾಗಿತ್ತು. ಈ ವೇಳೆ ಕಾರು ಚಾಲಕ ಟ್ರಾಫಿಕ್ನಲ್ಲಿ ಸಿಲುಕಿದ್ದಾನೆ. ಗಂಟೇಗಟ್ಟಲೇ ಕಾದಿದ್ದಾನೆ. ಆದರೆ ಮೂತ್ರವಿಸರ್ಜನೆ ತಡೆಯಲಾಗದೆ ಕಾರಿನ ಎರಡು ಡೋರ್ ಓಪನ್ ಮಾಡಿ ರಸ್ತೆಯಲ್ಲೇ ಮೂತ್ರವಿಸರ್ಜನೆ ಮಾಡಿದ್ದಾನೆ. ಈ ವಿಡಿಯೋ ವ್ಯಕ್ತಿಯೊಬ್ಬರ ಮೊಬೈಲ್ನಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ.


