ಬೆಂಗಳೂರು : ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆಯ ಅವಧಿಯನ್ನು ಚುನಾವಣಾ ಆಯೋಗ ಮತ್ತೆ 10 ದಿನ ವಿಸ್ತರಿಸಿದೆ. ಇದರಂತೆ, ಭರ್ತಿ ಮಾಡಿದ ಗಣತಿ ನಮೂನೆಗಳನ್ನು ಸಲ್ಲಿಸಲು ಆಗಸ್ಟ್ 17 ಕೊನೆಯ ದಿನವಾಗಿರಲಿದೆ.
ಈ ಹಿಂದೆ ಗಣತಿ ನಮೂನೆ ಸಲ್ಲಿಕೆಗೆ ಆಗಸ್ಟ್ 8 ಅಂತಿಮ ದಿನವಾಗಿತ್ತು. ಆದರೆ ಗಣತಿ ನಮೂನೆಗಳ ಭರ್ತಿ ಹಾಗೂ ವಾಪಸ್ ಸಲ್ಲಿಕೆ ಸಂದರ್ಭದಲ್ಲಿ ಹಲವರು ಗೈರಾಗಿರುವುದು ಸೇರಿದಂತೆ ನಿಧನ, ಶಾಶ್ವತ ಸ್ಥಳಾಂತರ, ನಕಲಿ ಹಾಗೂ ಇತರ (ASDDO) ವರ್ಗಕ್ಕೆ ಸೇರಿದ ಸುಮಾರು 1.10 ಕೋಟಿ ಮತದಾರರ ಮಾಹಿತಿಯ ಪರಿಶೀಲನೆ ಅಗತ್ಯವಿರುವ ಹಿನ್ನೆಲೆಯಲ್ಲಿ ಅವಧಿ ವಿಸ್ತರಿಸಲಾಗಿದೆ.
ರಾಜಕೀಯ ಪಕ್ಷಗಳು ಹಾಗೂ ಮತದಾರರಿಗೆ ಈ ಮಾಹಿತಿಯನ್ನು ಮತ್ತೊಮ್ಮೆ ಪರಿಶೀಲಿಸಲು ಅವಕಾಶ ಕಲ್ಪಿಸುವ ಉದ್ದೇಶದಿಂದ ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡಲಾಗಿದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ವಿ. ಅನುಕುಮಾರ್ ತಿಳಿಸಿದ್ದಾರೆ.
ಪರಿಷ್ಕೃತ ವೇಳಾಪಟ್ಟಿ
ಆ.17: ಗಣತಿ ನಮೂನೆ ಸಲ್ಲಿಕೆಗೆ ಕೊನೆಯ ದಿನ
ಆ.24: ಕರಡು ಮತದಾರರ ಪಟ್ಟಿ ಪ್ರಕಟಆ.24ರಿಂದ ಸೆ.23: ಆಕ್ಷೇಪಣೆ ಹಾಗೂ ಹಕ್ಕುಗಳ ಸಲ್ಲಿಕೆಗೆ ಅವಕಾಶಆ.24ರಿಂದ ಅ.22: ನೋಟಿಸ್, ಪರಿಶೀಲನೆ ಹಾಗೂ ಇತ್ಯರ್ಥ ಪ್ರಕ್ರಿಯೆ . ಆ 27 : ಅಂತಿಮ ಮತದಾರರ ಪಟ್ಟಿ ಪ್ರಕಟ,ಮತದಾರರ ಮಾಹಿತಿ
ಪರಿಶೀಲನೆಗೆ ಹೆಚ್ಚುವರಿ,ಕಾಲಾವಕಾಶ ನೀಡಿರುವುದು ಎಸ್ಐಆರ್ ಪ್ರಕ್ರಿಯೆಯ ಪ್ರಮುಖ ಬದಲಾವಣೆಯಾಗಿದೆ.

