ಬಂಟ್ವಾಳ : ಕರ್ತವ್ಯ ಲೋಪದ ಆರೋಪದ ಮೇಲೆ ಪುಂಜಾಲಕಟ್ಟೆ ಪೊಲೀಸ್ ಠಾಣೆ ಎಸ್‌ಐ ಸುತೇಶ್ ಅವರನ್ನು ಸರಕಾರ ಎಸ್ಪಿ ಕಚೇರಿಗೆ ವರ್ಗಾವಣೆ ಮಾಡಿದೆ.
ಮಧ್ಯರಾತ್ರಿ 12 ಗಂಟೆಗೆ ವರ್ಗಾವಣೆ ಆದೇಶವನ್ನು ಕಳುಹಿಸಲಾಗಿದೆ. ಯುವ ವಕೀಲರೊಬ್ಬರ ಬಂಧನಕ್ಕೆ ಸಂಬಂಧಿಸಿದಂತೆ ಎಸ್ ಐ ಸುತೇಶ್ ವಿವಾದ ಎದುರಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ ವಿವಿಧ ಸಂಘಟನೆಗಳು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದವು.
ಉಪ್ಪಿನಂಗಡಿ ಪೊಲೀಸ್ ಎಸ್‌ಐ ನಂದಕುಮಾರ್ ಅವರಿಗೆ ಸದ್ಯ ಪುಂಜಾಲಕಟ್ಟೆ ಪೊಲೀಸ್ ಠಾಣೆಯ ಜವಾಬ್ದಾರಿಯನ್ನು ಹಸ್ತಾಂತರಿಸಲಾಗಿದೆ.