Sunday, March 15, 2026
Flats for sale
Homeಜಿಲ್ಲೆಬಂಟ್ವಾಳ : ಲಾರಿಗಳ ಮುಖಾಮುಖಿ ಡಿಕ್ಕಿ,ಇಂಧನ ಟ್ಯಾಂಕ್ ಸೋರಿಕೆ,ಚಾಲಕನಿಗೆ ಗಾಯ.

ಬಂಟ್ವಾಳ : ಲಾರಿಗಳ ಮುಖಾಮುಖಿ ಡಿಕ್ಕಿ,ಇಂಧನ ಟ್ಯಾಂಕ್ ಸೋರಿಕೆ,ಚಾಲಕನಿಗೆ ಗಾಯ.

ಬಂಟ್ವಾಳ : ಇಲ್ಲಿನ ರಾಷ್ಟ್ರೀಯ ಹೆದ್ದಾರಿಯ ನರಹರಿ ಪರ್ವತದ ರಸ್ತೆಯಲ್ಲಿ ಶನಿವಾರ ಎರಡು ಲಾರಿಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಲಾರಿಯೊಂದರ ಚಾಲಕನಿಗೆ ಗಂಭೀರ ಗಾಯಗಳಾಗಿರುವ ಘಟನೆ ಶುಕ್ರವಾರ ನಡೆದಿದೆ.

ಡಿಕ್ಕಿಯ ರಭಸಕ್ಕೆ ಎರಡೂ ಲಾರಿಗಳ ಇಂಧನ ಟ್ಯಾಂಕ್‌ಗಳು ಸ್ಫೋಟಗೊಂಡ ಪರಿಣಾಮ ತೈಲ ರಸ್ತೆಯ ತುಂಬೆಲ್ಲಾ ಹರಿದು ಗಂಟೆಗಟ್ಟಲೆ ಸಂಚಾರ ತಡೆ ಉಂಟಾಗಿತ್ತು.

ಒಂದು ಲಾರಿ ಮಂಗಳೂರಿನಿಂದ ಬೆಂಗಳೂರಿಗೆ ಬಂದು ಕಲ್ಲಿದ್ದಲು ಸಾಗಿಸುತ್ತಿತ್ತು.

ಅಪಘಾತದಿಂದ ಮೆಲ್ಕಾರ್ ಮತ್ತು ಕಲ್ಲಡ್ಕದವರೆಗೆ ಎರಡೂ ಕಡೆ ವಾಹನಗಳ ಬ್ಲಾಕ್ ಆಗಿದ್ದು ಸರತಿ ಸಾಲಿನಲ್ಲಿ ನಿಂತಿತ್ತು. ನಂತರ ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಇಂಧನದಿಂದ ಜಾರುತ್ತಿದ್ದ ರಸ್ತೆಗೆ ನೀರು ಸಿಂಪಡಿಸಿ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ .

RELATED ARTICLES

LEAVE A REPLY

Please enter your comment!
Please enter your name here

Most Popular