ಫ್ರಾನ್ಸ್ : ಅಲ್ ಖೈದಾ ಸಂಘಟನೆ ನಾಯಕನಾಗಿದ್ದ ಉಗ್ರ ಒಸಾಮಾ ಬಿನ್ ಲಾಡೆನ್ ಪುತ್ರ ಒಮರ್ ಬಿನ್ ಲಾಡೆನ್ ನನ್ನು ಫ್ರಾನ್ಸ್ ತನ್ನ ದೇಶದಿಂದ ಹೊರಹಾಕಿದೆ. ಮತ್ತೆ ಯಾವುದೇ ಕಾರಣಕ್ಕೂ ಫ್ರಾನ್ಸ್ ಪ್ರವೇಶಿಸದಂತೆ ನಿರ್ಬಂಧವನ್ನು ವಿಧಿಸಲಾಗಿದೆ.
ಸಾಮಾಜಿಕ ಮಾಧ್ಯಮದಲ್ಲಿ ಭಯೋತ್ಪಾದನೆಯನ್ನು ಪ್ರತಿಪಾದಿಸುವ ಪೋಸ್ಟ್ಗಳ ಆಧಾರದ ಮೇಲೆ ಒಮರ್ ಬಿನ್ ಲಾಡೆನ್‌ನನ್ನು ಫ್ರೆಂಚ್ ಅಧಿಕಾರಿಗಳು ಹೊರಹಾಕಿದ್ದಾರೆ ಎಂದು ಫ್ರೆಂಚ್ ಆಂತರಿಕ ಸಚಿವ ಬ್ರೂನೋ ರಿಟೆಲ್ಲೊ ಹೇಳಿದ್ದಾರೆ.
ಅಲ್ ಖೈದಾ ನಾಯಕ ಒಸಾಮಾ ಬಿನ್ ಲಾಡೆನ್‌ನ ಮಗ ಒಮರ್ ಬಿನ್ ಲಾಡೆನ್ ಫ್ರಾನ್ಸ್ ಗೆ ಮರಳುವ ಯಾವುದೇ ಯತ್ನದ ವಿರುದ್ಧ ಅಗತ್ಯ ಕ್ರಮಗಳನ್ನು ಕೈಗೊಂಡಿರುವುದಾಗಿ ಫ್ರಾನ್ಸ್ ಆಂತರಿಕ ಸಚಿವರು ಹೇಳಿದ್ದಾರೆ.
ಗೃಹ ಸಚಿವಾಲಯದ ಪ್ರಕಾರ, ಚಿತ್ರಕಲೆಯಲ್ಲಿ ಅಪಾರ ಪ್ರತಿಭೆಯನ್ನು ಪ್ರದರ್ಶಿಸುವ ಮೂಲಕ ಚಿತ್ರಕಲಾವಿದನ್ನಾಗಿ ಗುರುತಿಸಿಕೊಂಡಿದ್ದ ಒಮರ್ ಬಿನ್ ಲಾಡೆನ್ ತನ್ನ ತಂದೆಯನ್ನು ತೊರೆದ ಬಳಿಕ 2016 ರಿಂದಲೂ ಉತ್ತರ ಫ್ರಾನ್ಸ್ ನ ನಾರ್ಮಂಡಿಯಲ್ಲಿ ತನ್ನ ಬ್ರಿಟಿಷ್ ಪತ್ನಿಯೊಂದಿಗೆ ನೆಲೆಯೂರಿದ್ದ ಎನ್ನಲಾಗಿದೆ. ೨೦೨೩ ರಲ್ಲಿ ಅವರ ಸಾಮಾಜಿಕ ಜಾಲತಾಣಗಳಲ್ಲಿ ಭಯೋತ್ಪಾದನೆಯನ್ನು ಪ್ರತಿಪಾದಿಸುವ ಕಾಮೆಂಟ ಷೇಧಕ್ಕೆ
ಸಹಿ ಹಾಕಿರುವುದಾಗಿ ಸಚಿವರು ಹೇಳಿದ್ದಾರೆ.