Wednesday, December 18, 2024
Flats for sale
Homeವಿದೇಶಪ್ಯಾರೀಸ್ : ಭೀಕರ ಚಂಡಮಾರುತದಿಂದ ಫ್ರಾನ್ಸ್ ನಲ್ಲಿ ಸಾವಿರಾರು ಮಂದಿ ಸಾವು..!

ಪ್ಯಾರೀಸ್ : ಭೀಕರ ಚಂಡಮಾರುತದಿಂದ ಫ್ರಾನ್ಸ್ ನಲ್ಲಿ ಸಾವಿರಾರು ಮಂದಿ ಸಾವು..!

ಪ್ಯಾರೀಸ್ : ಫಾನ್ಸ್ ಹಿಂದೂ ಮಹಾಸಾಗರ ಪ್ರದೇಶದಲ್ಲಿ ಭಾರಿಪ್ರಮಾಣದ ಚಂಡಮಾರುತದ ಉಂಟಾದ ಹಾನಿಯಿಂದ ಪರಿಣಾಮ ಸಾವಿರಾರುವ ಮಂದಿ ಸಾವನ್ನಪ್ಪಿದ್ದು ಲಕ್ಷಾಂತರ ಮಂದಿ ಮನೆ ಮಠ ಕಳೆದುಕೊಂಡು ಅತಂತ್ರರಾಗಿರುವ ಘಟನೆ ನಡೆದಿದೆ.

ಮಾಯೊಟೆಯಲ್ಲಿನ ಜಸಸಂಖ್ಯೆಯಲ್ಲಿ 3 ಲಕ್ಷದ 20 ಸಾವಿರಕ್ಕೂ ಅಧಿಕ ಮಂದಿ ಆಹಾರ, ನೀರು ಮತ್ತು ಆಶ್ರಯದ ತೀವ್ರ ಕೊರತೆಯೊಂದಿಗೆ ಪರದಾಡುವಂತಾಗಿದೆ. ಚಂಡಮಾರುತದಿಂದ ಉಂಟಾದ ಪರಿಣಾಮದಿಂದ ಬದುಕುಳಿದ ಮಂದಿಯ ರಕ್ಷಣಾ ಕಾರ್ಯ ಬರದಿಂದ ಸಾಗಿದೆ, ಸಂಕಷ್ಟದಲ್ಲಿರುವ ಜನರ ರಕ್ಷಣಾ ಕಾರ್ಯ ನಡೆದಿದೆ.

ಚಿಡೋ ಚೈಡೋ ಚಂಡಮಾರುತ ಗಂಟೆಗೆ 225 ಕಿ.ಮೀಗಿಂತಲೂ ಅಧೀಕ ವೇಗದಲ್ಲಿ ಬೀಸಿದ ಹಿನ್ನೆಲೆಯಲ್ಲಿ ಅಪಾರ ಪ್ರಮಾಣದ ಉಂಟಾದಗಿಂತ ಹೆಚ್ಚು ಗಾಳಿಯ ವೇಗವನ್ನು ತಂದಾಗ ಸಂಪೂರ್ಣ ವಸಾಹತುಗಳು ಚಪ್ಪಟೆಯಾಗಿವೆ, ತಾತ್ಕಾಲಿಕ ಶಿಬಿರ ನಿರ್ಮಾಣ ಮಾಡಿ ಜನರಿಗೆ ಆಶ್ರಯ ನೀಡಲಾಗಿದೆ.

ಮನೆಮಠ ಕಳೆದುಕೊಂಡು ಬೀದಿಗೆ ಬಂದಿರುವ ಹಿನ್ನೆಲೆಯಲ್ಲಿ ಕಳೆದ ಮೂರು ದಿನಗಳಿಂದ ಅನ್ನ ಆಹಾರ, ನೀರು ಹಾಗೂ ವಸತಿಗಾಗಿ ಜನರು ಪರದಾಡುವಂತಾಗಿದೆ ಮಾಮೌಡ್‌ಜೌ ನಲ್ಲಿ ಸರಬರಾಜುಗಳಿಗಾಗಿ ಸಾಲಿನಲ್ಲಿ ಕಾಯುತ್ತಿದ್ದರು. “ನಮಗೆ ಈಗ ಮೂರು ದಿನಗಳವರೆಗೆ ನೀರು ಇರಲಿಲ್ಲ, ಇದರಿಂದ ತೊಂದರೆಯಾಗಿದೆ ಎಂದು ಅನೇಕ ಜನರು ಸಮಸ್ಯೆ ಹೇಳಿಕೊಂಡಿದ್ದಾರೆ. ಇನ್ನೊಬ್ಬ ಮಾಮೌಡ್‌ಜೌ ನಿವಾಸಿ ಜಾನ್ ಬಲ್ಲೊಜ್, ಚಂಡಮಾರುತ ಅಬ್ಬರದಿಂದ ಸಮಸ್ಯೆಗೆ ಸಿಲುಕಿದ್ದೇವೆ. ಇದರ ಹಾನಿಯಿಂದ ಹೊರಬರಲು ಬಹಳಷ್ಟು ದಿನಗಳೇ ಆಗಬಹುದು ಎಂದಿದ್ದಾರೆ.

ರಾಜಧಾನಿಯಲ್ಲಿ ವಾಸಿಸುವ ಮೊಹಮ್ಮದ್ ಇಶ್ಮೇಲ್, ದುರಂತ”ದಿAದ ಜನರ ಬದುಕು ದುಸ್ತರವಾಗಿದೆ. ದಿನನಿತ್ಯದ ಕನಿಷ್ಠ ಸೌಲಭ್ಯವಿಲ್ಲದೆ ಪರದಾಡುವಂತಾಗಿದೆ. ಹಗಲು ರಾತ್ರಿ ಎನ್ನದೆ ಸಮಸ್ಯೆಗೆ ಸಿಲುಕಿದ್ದೇವೆ
ಎಂದು ಹೇಳಿದ್ದಾರೆ.

ಆಶ್ರಯ ಪಡೆಯುವ ಪ್ರಯತ್ನದಲ್ಲಿ ಫ್ರೆಂಚ್ ಪ್ರದೇಶಕ್ಕೆ ಪ್ರಯಾಣಿಸದ ದಾಖಲೆರಹಿತ ವಲಸಿಗರು ಸೇರಿದಂತೆ ಮಾಯೊಟೆ ಬಡ ಸಮುದಾಯಗಳು, ವಸತಿ ಸೌಲಭ್ಯ ಇಲ್ಲದೆ ಪರದಾಡುವಂತಾಗಿದೆ. ಜನಸAಖ್ಯೆಯ ಸುಮಾರು ಶೇಕಡಾ ೭೫ರಷ್ಟು ಜನರು ರಾಷ್ಟ್ರೀಯ ಬಡತನ ರೇಖೆಯ ಕೆಳಗೆ ವಾಸಿಸುತ್ತಿದ್ದಾರೆ ಮತ್ತು ನಿರುದ್ಯೋಗ ಮೂರರಲ್ಲಿ ಒಬ್ಬರು ಸಮಸ್ಯೆಯಿಂದ ಬಳಲುತ್ತಿದ್ದಾರೆ.

ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರು “ಮಾಯೊಟೆನಲ್ಲಿರುವ ಜನರ ಸಂಕಷ್ಠಕ್ಕೆ ಮಿಡಿದಿದ್ದು ಚಂಡಮಾರುತದಿಂದ ಬೀದಿಗೆ ಬಂದ ಜನರ ರಕ್ಷಣೆಗೆ ಸರ್ಕಾರ ಎಲ್ಲಾ ಅಗತ್ಯ ಕ್ರಮ ಕೈಗೊಳ್ಳಲಿದೆ ಎಂದು ತಿಳಿಸಿದ್ದಾರೆ.

ಗೆಟ್ಟಿ ಇಮೇಜಸ್ ಮಾಯೊಟ್ಟೆಯಲ್ಲಿ ಅಪಾರ ಪ್ರಮಾಣದಲ್ಲಿ ಹಾನಿಯಾದ ಹಿನ್ನೆಲೆಯಲ್ಲಿ ಶಾಲಾ ಕಾಲೇಜಿಗೆ ರಜೆ ಘೋಷಿಸಲಾಗಿದೆ ದ್ವೀಪಕ್ಕೆ ಭೇಟಿ ನೀಡಲಿರುವ ಫ್ರೆಂಚ್ ಆಂತರಿಕ ಸಚಿವ ಬ್ರೂನೋ ರೆಟಾಲಿಯೊ, ಚಂಡಮಾರುತದ “ಅಸಾಧಾರಣ ತೀವ್ರತೆ” ಯಿಂದ ಸಮಸ್ಯೆಗೆ ಸಿಲುಕಿರುವ ಜನರಿಗೆ ರಕ್ಷಣೆ ಒದಗಿಸುವುದು ನಮ್ಮ ಸದ್ಯದ ಕರ್ತವ್ಯ ಎಂದಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular