Thursday, July 23, 2026
Homeಜಿಲ್ಲೆಪುತ್ತೂರು: ಮಹಿಳೆ ಸ್ನಾನ ಮಾಡುತ್ತಿದ್ದ ವೇಳೆ ಇಣುಕಿ ನೋಡುತ್ತಿದ್ದ ಕಾಮುಕ ಕಪೊಲೀಸ್ ಕಸ್ಟಡಿಗೆ..!

ಪುತ್ತೂರು: ಮಹಿಳೆ ಸ್ನಾನ ಮಾಡುತ್ತಿದ್ದ ವೇಳೆ ಇಣುಕಿ ನೋಡುತ್ತಿದ್ದ ಕಾಮುಕ ಕಪೊಲೀಸ್ ಕಸ್ಟಡಿಗೆ..!

ಪುತ್ತೂರು ; ಮಹಿಳೆ ಸ್ನಾನ ಮಾಡುತ್ತಿದ್ದ ವೇಳೆ ಇಣುಕಿ ನೋಡಿದ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ಅಬ್ದುಲ್ ರಹಿಮಾನ್ (41) ಅವರನ್ನು ನ್ಯಾಯಾಲಯ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.

ಸ್ಥಳೀಯ ಉದ್ಯಮಿ ಅಬ್ದುಲ್ ರಹಿಮಾನ್ ಜುಲೈ 21 ರಂದು ರಾತ್ರಿ 9 ಗಂಟೆ ಸುಮಾರಿಗೆ ಸ್ನಾನ ಮಾಡುತ್ತಿದ್ದ 22 ವರ್ಷದ ಮಹಿಳೆಯನ್ನು ಇಣುಕಿ ನೋಡಿದಾಗ ಸಿಕ್ಕಿಬಿದ್ದಿದ್ದಾರೆ. ಸ್ಥಳೀಯರು ಆತನನ್ನು ಬೆನ್ನಟ್ಟಿ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಅತಿಯಾಗಿ ಹೆಣ್ಣು ಹುಚ್ಚನಾಗಿದ್ದ ಅಬ್ದುಲ್ ರಹಿಮಾನ್ ಪಿರಿಯಡ್ಕ ಸುತ್ತಮುತ್ತಲಿನ ಮಹಿಳೆಯರಿಗೆ ಹಿಂಬಾಗಿಲ ಮೂಲಕ ಮನೆಗೆ ನುಗ್ಗಿ ನಿದ್ದೆಯಲ್ಲೇ ಲೈಂಗಿಕ ಕಿರುಕುಳ ನೀಡುತ್ತಿದ್ದ ಎಂಬ ಅಂಶ ಪೊಲೀಸ್ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular