Monday, July 27, 2026
Homeಜಿಲ್ಲೆಪುತ್ತೂರು: ತೆಂಗಿನಕಾಯಿ ಕೀಳುತ್ತಿದ್ದ ವೇಳೆ ಮಹಿಳೆ ಕೆಳಗೆ ಬಿದ್ದು ಸಾವು.

ಪುತ್ತೂರು: ತೆಂಗಿನಕಾಯಿ ಕೀಳುತ್ತಿದ್ದ ವೇಳೆ ಮಹಿಳೆ ಕೆಳಗೆ ಬಿದ್ದು ಸಾವು.

ಪುತ್ತೂರು : ತೆಂಗಿನ ಮರ ಹತ್ತುವ ಹಾಗೂ ತೆಂಗಿನಕಾಯಿ ಕೀಳುವ ಪರಿಣತಿಗೆ ಹೆಸರಾದ 30 ವರ್ಷದ ಮಹಿಳೆಯೊಬ್ಬರು ತೆಂಗಿನಕಾಯಿ ಕೀಳುವ ವೇಳೆ ಆಕಸ್ಮಿಕವಾಗಿ ಕೆಳಗೆ ಬಿದ್ದು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಸವಣೂರು ಸಮೀಪದ ಪುಂಚಪ್ಪಾಡಿ ಗ್ರಾಮದಲ್ಲಿ ನಡೆದಿದೆ.

ಮೃತರು ಪ್ರಮೋದ್ ಬೆಳ್ಳಾಜೆಯವರ ಪತ್ನಿ ಸುಚಿತ್ರಾ. ಅವರು ಪತಿ ಮತ್ತು ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

ತೆಂಗಿನ ಮರ ಹತ್ತುವ ಪರಿಣತಿಯನ್ನು ಗುರುತಿಸಿ ಸುಚಿತ್ರಾ ಅವರನ್ನು ಹಲವಾರು ಸಂಘ ಸಂಸ್ಥೆಗಳು ಸನ್ಮಾನಿಸಿವೆ.
RELATED ARTICLES

LEAVE A REPLY

Please enter your comment!
Please enter your name here

Most Popular