Saturday, July 25, 2026
Homeರಾಜ್ಯಪಾವಗಡ : ಹಾಡು ಆಗಲೇ ಮನೆ ಬೀಗ ಹೊಡೆದು ಚಿನ್ನದ ಆಭರಣ ಲೂಟಿ .

ಪಾವಗಡ : ಹಾಡು ಆಗಲೇ ಮನೆ ಬೀಗ ಹೊಡೆದು ಚಿನ್ನದ ಆಭರಣ ಲೂಟಿ .

ಪಾವಗಡ : ಸೋಮವಾರ ಹಾಡು ಆಗಲೇ ಮನೆ ಬೀಗ ಹೊಡೆದು ಇಪ್ಪತ್ತು ಗ್ರಾಂ ಚಿನ್ನದ ಆಭರಣ ಹಾಗೂ ಐದು ಸಾವಿರ ನಗದು ಕಳ್ಳತನ ಮಾಡಿ ಪಾರಾರಿಯಾಗಿದ ಘಟನೆ ಪಾವಗಡ ಪಟ್ಟಣದಲ್ಲಿ ನಡೆದಿದೆ.

ಪಾವಗಡ ಪಟ್ಟಣದ ಶ್ರೀ ನಿವಾಸ್ ನಗರದ ಜ್ಞಾನಭೂದಿನಿ ಶಾಲೆಯ ಪಕ್ಕದಲ್ಲಿ ಬಾಡಿಗೆ ಮನೆ ಒಂದರಲ್ಲಿ ಸಿ.ಎಸ್.ಸಿ.ಕಂಪೋಟರ್ ಸೆಂಟರ್ ಮಾಲಿಕ ರೇಣುಕೇಶ್ ಎಂಬುವರು ಮನೆಯಲ್ಲಿ ಮಧ್ಯಾಹ್ನ 1:00 ಸಮಯದಲ್ಲಿ ಕೆಲಸಕ್ಕೆ ತೆರಳಿದಂತಹ ಸಂದರ್ಭದಲ್ಲಿ ಯಾರು ಇಲ್ಲದ ವೇಳೆ ಕಳ್ಳರು ಮನೆ ಬೀಗ ಹೊಡೆದು ಮನೆಯಲ್ಲಿ ಇದ್ದಂತಹ 20 ಗ್ರಾಂ ಚಿನ್ನದ ಆಭರಣಗಳು ಹಾಗೂ ನಗದು ಐದು ಸಾವಿರ ಹಣ ದೋಚಿ ಪರಾರಿಯಾಗಿದ್ದಾರೆ.

ಸ್ಥಳೀಯ ಪೊಲೀಸರು ಸ್ಥಳಕ್ಕೆ ದಾವಿಸಿ ಪರಿಶೀಲನೆ ನಡೆಸಿ ನಂತರ ಪ್ರಕರಣ ದಾಖಲಿಸಿ ಕೊಂಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular