ನ್ಯೂಯಾರ್ಕ್ : ನಿಮಗೆ 40 ವರ್ಷ ದಾಟಿದ್ದು ನಿಮಗೆ ಅರಿವಿಲ್ಲದಂತೆಯೇ ದೇಹದೊಳಗೆ ಹೃದಯ ಸಂಬಂಧಿ ಸಮಸ್ಯೆ ,ಪಾರ್ಶ್ವವಾಯು ,ಸಕ್ಕರೆ ಕಾಯಿಲೆ ಆರಂಭಿಕ ಹಂತದಲ್ಲಿದ್ದರೆ ಒಂದು ಸಣ್ಣ ಗ್ಲಾಸ್ ‘ರೆಡ್ ವೈನ್’ ಅಥವಾ ಒಂದು ಬಾಟಲಿ ಬಿಯರ್ ಅಥವಾ ಒಂದು ಪೆಗ್ ವಿಸ್ಕಿ ಯನ್ನು ನಿಯಮಿತವಾಗಿ ಸೇವಿಸುವ ಮೂಲಕ ದೇಹದ ಪರಿಸ್ಥಿತಿ ಸುಧಾರಿಸುತ್ತದೆ ಎಂದು ಲಾನ್ಸೆಟ್ ವೈದ್ಯಕೀಯ ಜರ್ನಲ್ ನಲ್ಲಿ ಇಂಥದೊಂದು ವರದಿ ಪ್ರಕಟವಾಗಿದೆ.
15 ರಿಂದ 39 ವರ್ಷದ ವರೆಗಿನ ಪುರುಷರಲ್ಲಿ ಮದ್ಯಸೇವನೆ ಅಂಥಹದೇನು ಆರೋಗ್ಯಕರವಲ್ಲವಂತೆ.ಆದರೆ ೪೦ ವರ್ಷ ದಾಟಿದವರು ನಿಯಮಿತವಾಗಿ ಮದ್ಯ ಸೇವಿಸಿದರೆ ದೀರ್ಘವದಿಯಲ್ಲಿ ಸಣ್ಣ ಪ್ರಮಾಣದಲ್ಲಿ ಆರೋಗ್ಯಕ್ಕೆ ಲಾಭವಿದೆ ಎಂದು ಸಂಶೋಧನೆಯಿಂದ ತಿಳಿದುಬಂದಿದೆ ಎಂದು ವಾಷಿಂಗ್ಟನ್ ಸ್ಕೂಲ್ ಮೆಡಿಸಿನ್ ಪ್ರಾಧ್ಯಾಪಕ ಡಾ.ಎಮ್ಯಾನುಯೆಲ್ ಗಾಕಿಡೋ ಹೇಳಿದ್ದಾರೆ.
204 ರಾಷ್ಟ್ರಗಳಲ್ಲಿನ 15 ವರ್ಷಗಳಿಂದ 65 ವರ್ಷಗಳವರೆಗೆ ವ್ಯಕ್ತಿಗಳು ಅವರ ಮದ್ಯ ಸೇವನೆ ಕ್ರಮ 1990 ರಿಂದ ೨೦೨೦ ರ ವರೆಗೆ ಅವರ ದಿನಚರಿಯನ್ನು ಸಂಶೋದನೆಯಲ್ಲಿ ಪರಿಶೀಲಿಸಲಾಗಿದೆಯೆಂದು ತಿಳಿದುಬಂದಿದೆ.
“ಯುವ ವಯಸ್ಕರು ಕುಡಿಯುವುದರಿಂದ ದೂರವಿರುತ್ತಾರೆ ಎಂದು ಯೋಚಿಸುವುದು ವಾಸ್ತವಿಕವಲ್ಲದಿದ್ದರೂ, ಇತ್ತೀಚಿನ ಪುರಾವೆಗಳನ್ನು ಸಂವಹನ ಮಾಡುವುದು ಮುಖ್ಯ ಎಂದು ನಾವು ಭಾವಿಸುತ್ತೇವೆ, ಇದರಿಂದಾಗಿ ಪ್ರತಿಯೊಬ್ಬರೂ ತಮ್ಮ ಆರೋಗ್ಯದ ಬಗ್ಗೆ ತಿಳುವಳಿಕೆಯುಳ್ಳ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು.” ಎಂದು ಹೇಳಿದ್ದಾರೆ.
ಆರೋಗ್ಯದ ಅಪಾಯಗಳನ್ನು ಹೆಚ್ಚಿಸದೆ ಸೇವಿಸಬಹುದಾದ ಆಲ್ಕೋಹಾಲ್ ಮಟ್ಟವು ಜೀವಿತಾವಧಿಯಲ್ಲಿ ಹೆಚ್ಚಾಗುತ್ತದೆ ಎಂದು ಅವರು ತಿಳಿಸಿದ್ದಾರೆ . 100 ಮಿಲಿ ಗ್ಲಾಸ್ 13% ಆಲ್ಕೋಹಾಲ್ ಕೆಂಪು ವೈನ್ ಅಥವಾ 375 ಮಿಲಿ ಕ್ಯಾನ್ ಅಥವಾ 3.5% ಬಿಯರ್ ಬಾಟಲಿ ಸೇವಿಸಿದರೆ ಉತ್ತಮ ಎಂದು ಸಂಶೋಧಕರು ಪರಿಗಣಿಸಿದ್ದಾರೆ.
ಮೆಡಿಸಿನ್ ಜರ್ನಲ್‌ನಲ್ಲಿ ಪ್ರಕಟವಾದ ಪ್ರತ್ಯೇಕ ಸಂಶೋಧನೆಯು ವಾರಕ್ಕೆ ಏಳು ದಿನ ಅಥವಾ ಹೆಚ್ಚಿನ ಆಲ್ಕೋಹಾಲ್ ಸೇವನೆಯು ಮೆದುಳಿನಲ್ಲಿರುವ ಕಬ್ಬಿಣವು ಆಲ್ಝೈಮರ್ ಮತ್ತು ಪಾರ್ಕಿನ್ಸನ್ ಕಾಯಿಲೆಗಳಿಗೆ ಸಂಬಂಧಿಸಿದೆ ಇದು ಸ್ಟ್ರೋಕ್ ಹಾಗೂ ಇನ್ನಿತರ ಸಮಸ್ಯೆಗಳಿಗೆ ಕಾರಣವಾಗುತ್ತದೆಂದು ತಿಳಿಸಿದೆ.
“ನೀವು ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸುತ್ತಿದ್ದರೆ, ವಾರಕ್ಕೆ 14 ಯೂನಿಟ್‌ಗಳನ್ನು ಮೀರಬೇಡಿ (ಸುಮಾರು ಆರು ಪಿಂಟ್‌ಗಳಷ್ಟು ಲಾಗರ್ ಅಥವಾ ಬಾಟಲಿ ಮತ್ತು ಅರ್ಧದಷ್ಟು ವೈನ್), ಹಾಗೂ ವಾರದಲ್ಲಿ ಕನಿಷ್ಠ ಮೂರು ದಿನವಾದರೂ ಮದ್ಯಪಾನ ತ್ಯಜಿಸುವುದು ಉತ್ತಮವೆಂದು ವರದಿಯಲ್ಲಿದೆ.