Thursday, July 2, 2026
Homeಗ್ಯಾಜೆಟ್ / ಟೆಕ್ನವದೆಹಲಿ : ವಾಟ್ಸಾಪ್‌ನಲ್ಲಿ ಮಹತ್ವದ ಬದಲಾವಣೆ ; ಇನ್ನು ಫೋನ್ ನಂಬರ್ ಬದಲು ಯೂಸರ್‌ನೇಮ್‌ನಿಂದ ಚಾಟ್!

ನವದೆಹಲಿ : ವಾಟ್ಸಾಪ್‌ನಲ್ಲಿ ಮಹತ್ವದ ಬದಲಾವಣೆ ; ಇನ್ನು ಫೋನ್ ನಂಬರ್ ಬದಲು ಯೂಸರ್‌ನೇಮ್‌ನಿಂದ ಚಾಟ್!

ನವದೆಹಲಿ : ಜಗತ್ತಿನ ಅತಿದೊಡ್ಡ ಮೆಸೇಜಿಂಗ್ ವೇದಿಕೆಯಾದ ವಾಟ್ಸಾಪ್, ಬಳಕೆದಾರರ ಖಾಸಗಿತನ ಹೆಚ್ಚಿಸುವ ಉದ್ದೇಶದಿಂದ ಮಹತ್ವದ ಹೊಸ ಫೀಚರ್ ಪರಿಚಯಿಸಲು ಮುಂದಾಗಿದೆ. ಇನ್ನು ಮುಂದೆ ಫೋನ್ ಸಂಖ್ಯೆ ಹಂಚಿಕೊಳ್ಳುವ ಬದಲು ಯೂಸರ್‌ನೇಮ್ (Username) ಮೂಲಕವೇ ಸಂದೇಶ ಕಳುಹಿಸಲು ಹಾಗೂ ಸಂಪರ್ಕ ಸಾಧಿಸಲು ಅವಕಾಶ ನೀಡಲಿದೆ.

ಮೆಟಾ ಸಂಸ್ಥೆ ಅಭಿವೃದ್ಧಿಪಡಿಸುತ್ತಿರುವ ಈ ಫೀಚರ್ ಮೂಲಕ ಬಳಕೆದಾರರು ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂ ಮಾದರಿಯಲ್ಲೇ ತಮ್ಮದೇ ವಿಶಿಷ್ಟ ಯೂಸರ್‌ನೇಮ್ ರಚಿಸಿಕೊಳ್ಳಬಹುದು. ಈ ವ್ಯವಸ್ಥೆ ಜಾರಿಗೆ ಬಂದ ಬಳಿಕ ಅಪರಿಚಿತರೊಂದಿಗೆ ಸಂಪರ್ಕ ಸಾಧಿಸಲು ಮೊಬೈಲ್ ಸಂಖ್ಯೆ ಹಂಚಿಕೊಳ್ಳುವ ಅಗತ್ಯ ಇರುವುದಿಲ್ಲ.

ಗ್ರೂಪ್ ಚಾಟ್‌ಗಳಲ್ಲಿ ಅಪರಿಚಿತರಿಗೆ ಮೊಬೈಲ್ ಸಂಖ್ಯೆ ಗೋಚರಿಸುವ ಸಮಸ್ಯೆಗೂ ಇದರಿಂದ ಪರಿಹಾರ ಸಿಗಲಿದೆ. ಯೂಸರ್‌ನೇಮ್ ಮೂಲಕ ಸಂಪರ್ಕಿಸಿದರೂ ಫೋನ್ ಸಂಖ್ಯೆ ಇತರರಿಗೆ ಕಾಣಿಸುವುದಿಲ್ಲ ಎಂದು ಕಂಪನಿ ತಿಳಿಸಿದೆ.

ಹೆಚ್ಚುವರಿ ಭದ್ರತೆಗಾಗಿ “Username Key” ಎಂಬ ಹೊಸ ಆಯ್ಕೆಯನ್ನೂ ಪರಿಚಯಿಸಲಾಗುತ್ತಿದೆ. ಮೊದಲ ಬಾರಿಗೆ ಯಾರಾದರೂ ಸಂಪರ್ಕಿಸಲು ಯತ್ನಿಸಿದರೆ, ಯೂಸರ್‌ನೇಮ್ ಜೊತೆಗೆ ಈ ವಿಶೇಷ ಕೀ ಕೂಡ ಅಗತ್ಯವಾಗುತ್ತದೆ. ಇದರಿಂದ ಯಾರು ನಿಮಗೆ ಸಂದೇಶ ಕಳುಹಿಸಬಹುದು ಎಂಬುದರ ಮೇಲೆ ಬಳಕೆದಾರರಿಗೆ ಹೆಚ್ಚಿನ ನಿಯಂತ್ರಣ ಸಿಗಲಿದೆ.

ಈ ಹೊಸ ಫೀಚರ್ ಸದ್ಯ ಅಭಿವೃದ್ಧಿ ಹಂತದಲ್ಲಿದ್ದು, ಮುಂದಿನ ಕೆಲವು ತಿಂಗಳಲ್ಲಿ ಜಾಗತಿಕವಾಗಿ ಹಂತ ಹಂತವಾಗಿ ಬಳಕೆದಾರರಿಗೆ ಲಭ್ಯವಾಗುವ ನಿರೀಕ್ಷೆಯಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular