ನವದೆಹಲಿ : ಭಾರತದ ಹಿತಾಸಕ್ತಿಗೆ ಹಾನಿಯಾಗುವ ರೀತಿಯಲ್ಲಿ ನಮ್ಮ ಭೂಮಿಯನ್ನು ಬಳಸಲು ಯಾರಿಗೂ ಅನುಮತಿ ನೀಡುವುದಿಲ್ಲ ಎಂದು ಶ್ರೀಲAಕಾ ಅಧ್ಯಕ್ಷ ಅನುರಾ ಕುಮಾರ ದಿಸಾ ನಾಯಕೆ ಅವರು ಸೋಮವಾರ ಪ್ರಧಾನಿ ನರೇಂದ್ರ ಮೋದಿಗೆ ಭರವಸೆ ನೀಡಿದ್ದಾರೆ.
ತನ್ಮೂಲಕ ಹಿಂದೂ ಮಹಾಸಾಗರದಲ್ಲಿ ತನ್ನ ಅಸ್ತಿತ್ವವನ್ನು ಬಲಪಡಿಸುತ್ತಿರುವ ಚೀನಾಕ್ಕೆ ಶ್ರೀಲಂಕಾ ನಾಯಕ ಸೆಡ್ಡು ಹೊಡೆದಿದ್ದಾರೆ. ಕಳೆದ ಸೆಪ್ಟಂಬರ್‌ನಲ್ಲಿ ಶ್ರೀಲಂಕಾ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ ಇದೇ ಮೊದಲ ಬಾರಿಗೆ ಭಾರತಕ್ಕೆ ಮೂರು ದಿನಗಳ ಪ್ರವಾಸ ಕೈಗೊಂಡಿರುವ ದಿಸಾ ನಾಯಕೆ ಅವರು ಇಲ್ಲಿನ ಹೈದರಾಬಾದ್ ಹೌಸ್‌ನಲ್ಲಿ ಪ್ರಧಾನಿ ಮೋದಿಯವರನ್ನು ಭೇಟಿಯಾಗಿ ದ್ವಿಪಕ್ಷೀಯ ಬಾಂಧವ್ಯ ಬಲಪಡಿಸುವ ಕುರಿತು ಚರ್ಚಿಸಿದರು.
ಭಾರತದೊಂದಿಗಿನ ಸಹಕಾರವು ಖಂಡಿತವಾಗಿಯೂ ಅಭಿವೃದ್ಧಿ ಹೊಂದುತ್ತದೆ. ಭಾರತಕ್ಕೆ ನಮ್ಮ ನಿರಂತರ ಬೆಂಬಲ ನೀಡುವುದಾಗಿ ನಾನು ಪ್ರಧಾನಿ ಮೋದಿಗೆ ಭರವಸೆ ನೀಡುತ್ತೇನೆ ಎಂದು ದಿಸಾ ನಾಯಕೆ ಹೇಳಿದರು. ಭಾರತದ ಅತಿಥ್ಯ ಹಾಗೂ ಪ್ರಧಾನಿ ಮೋದಿ ಮತ್ತು ರಾಷ್ಟçಪತಿ ಮರ್ಮು ಅವರ ಆಹ್ವಾನಗಳಿಗೆ ಕೃತಜ್ಞತೆ ವ್ಯಕ್ತಪಡಿಸಿದ ಅವರು, ಈ ಭೇಟಿಯು ಉಭಯ ದೇಶಗಳ ನಡುವಣ ದ್ವಿಪಕ್ಷೀಯ ಸಹಕಾರವನ್ನು ಹೇಗೆ ಬಲಗೊಳ್ಳುತ್ತಿದೆ ಎಂದು ವಿವರಿಸಿದರು. ಈ ಭೇಟಿಯು ಉಭಯ ದೇಶಗಳ ನಡುವಣ ಸಹಕಾರ ಮತ್ತಷ್ಟು ಅಭಿವೃದ್ಧಿಗೊಳ್ಳಲು ದಾರಿ ಮಾಡಿಕೊಟ್ಟಿದೆ ಎಂದರು.
ಎರಡು ವರ್ಷಗಳ ಹಿಂದೆ ನಾವು ಅಭೂತಪೂರ್ವ ಆರ್ಥಿಕ ಬಿಕ್ಕಟ್ಟನ್ನು ಎದುರಿಸಿದ್ದೇವೆ. ಭಾರತವು ಈ ಬಿಕ್ಕಟ್ಟಿನಿಂದ ಹೊರಬರಲು ನಮಗೆ ಅಪಾರವಾದ ಸಹಾಯಹಸ್ತ ಚಾಚಿತ್ತು. ವಿಶೇಷವಾಗಿ ಸಾಲ ಮುಕ್ತ ರಚನಾಪ್ರಕ್ರಿಯೆಯಲ್ಲಿಯೂ ನಮಗೆ ಬೆಂಬಲ ನೀಡಿದೆ ಎಂದರು. ಭಾರತದ ವಿದೇಶಾಂಗ ನೀತಿಯಲ್ಲಿ ಶ್ರೀಲಂಕಾ ಅತ್ಯಂತ ವಿಶೇಷವಾದ ಸ್ಥಾನಮಾನ ಹೊಂದಿರುವುದು ನಮಗೆ ಗೊತ್ತಿದೆ. ಪ್ರಧಾನಿ ಮೋದಿಯವರು ಯಾವಾಗಲೂ ನಮ್ಮ ಸಾರ್ವಭೌಮ ಹಾಗೂ ಸಮಗ್ರತೆ ರಕ್ಷಿಸುತ್ತಾರೆಂಬ ಭರವಸೆ ಇದೆ ಎಂದರು.
ಚೀನಾ ಈಗ ಹಂಬಸ್ತೋಟ ಬಂದರಿನ ಮೇಲೆ ತನ್ನ ಹಿತಾಸಕ್ತಿಗಳನ್ನು ಕಾಯ್ದುಕೊಳ್ಳುವತ್ತ ಗುರಿಯಿರಿಸಿಕೊಂಡಿದೆ. ಶ್ರೀಲಂಕಾ ಈ ಬಂದರಿನ ನಿರ್ಮಾಣಕ್ಕೆ ಸಂಬAಧಿಸಿದ ಸಾಲ ಮರುಪಾವತಿ ಮಾಡುವಲ್ಲಿ ವಿಫಲವಾದ ನಂತರ ಚೀನಾ ಸೇನೆ ಈ ಬಂದರಿನಲ್ಲಿ ಯುವಾನ್ ವಾಂಗ್-5 ನAತಹ ಯುದ್ಧ ನೌಕೆಯನ್ನು ಲಂಗರು ಹಾಕಿ ತನ್ನ ಸ್ಥಿತಿ ಭದ್ರಪಡಿಸುತ್ತಿದೆ.