Saturday, January 31, 2026
Flats for sale
Homeವಾಣಿಜ್ಯನವದೆಹಲಿ : ಭಾರತ-ಐರೋಪ್ಯ ಒಕ್ಕೂಟದ ನಡುವೆ ಐತಿಹಾಸಿಕ ಮುಕ್ತ ವ್ಯಾಪಾರಕ್ಕೆ ಒಪ್ಪಂದ.

ನವದೆಹಲಿ : ಭಾರತ-ಐರೋಪ್ಯ ಒಕ್ಕೂಟದ ನಡುವೆ ಐತಿಹಾಸಿಕ ಮುಕ್ತ ವ್ಯಾಪಾರಕ್ಕೆ ಒಪ್ಪಂದ.

ನವದೆಹಲಿ : ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಬೇಕಾಬಿಟ್ಟಿ ಸುಂಕ ನೀತಿಗಳಿಗೆ ಸಡ್ಡು ಹೊಡೆಯುವ ರೀತಿಯಲ್ಲಿ ಭಾರತ-ಐರೋಪ್ಯ ಒಕ್ಕೂಟವು ಈಗ ಐತಿಹಾಸಿಕ ಮುಕ್ತ ವ್ಯಾಪಾರ ಒಪ್ಪಂದ ಮಾಡಿಕೊಂಡಿದೆ.

ಮದರ್ ಆಫ್ ಆಲ್ ಡೀಲ್ ಎಂದು ಬಣ್ಣಿಸಲ್ಪಡುತ್ತಿರುವ ಭಾರತ-ಐರೋಪ್ಯ ಒಕ್ಕೂಟ ನಡುವಣ ಈ ಒಪ್ಪಂದಕ್ಕೆ ಕೊನೆಗೂ 18 ವರ್ಷಗಳ ಬಳಿಕ ಸಹಿಬಿದ್ದಿದೆ. ಇದು ಭಾರತ ಮತ್ತು 27 ದೇಶಗಳ ಐರೋಪ್ಯ ಒಕ್ಕೂಟದ ಆರ್ಥಿಕತೆಗಳಿಗೆ ಉತ್ತೇಜನಕಾರಿಯಾಗಿದೆ. ಐರೋಪ್ಯ ಒಕ್ಕೂಟದ ಉನ್ನತ ನಾಯಕರಾದ ಉರ್ಸುಲಾ ವಾನ್ ಡೆರ್ ಲೇಯೆನ್ ಮತ್ತು ಆಂಟೋನಿಯೊ ಕೋಸ್ಟಾ ಅವರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಶೃಂಗಸಭೆ ಮುಗಿಸಿದ ನಂತರ ಈ ಐತಿಹಾಸಿಕ ಅತಿದೊಡ್ಡ ಮುಕ್ತ ವ್ಯಾಪಾರ ಒಪ್ಪಂದ ಅಂತಿಮಗೊಳಿಸಿರುವುದನ್ನು ಘೋಷಿಸಿದರು. ಆ ಬಳಿಕ ಎರಡೂ ಕಡೆಯವರು ಕಾರ್ಯ ತಂತ್ರದ ರಕ್ಷಣಾ ಪಾಲುದಾರಿಕೆ ಒಪ್ಪಂದ ಮತ್ತು ಚಲನ ಶೀಲತೆ ಒಪ್ಪಂದಕ್ಕೂ ಸಹಿ ಹಾಕಿದರು.

ಜಗತ್ತಿಗೆ ಸಹಾಯವಾಗುವ ಪಾಲುದಾರಿಕೆ: ಭಾರತಯುರೋಪ್ ಒಕ್ಕೂಟದ ಪಾಲುದಾರಿಕೆಯು ಜಗತ್ತಿಗೆ ಸಹಾಯ ಮಾಡುತ್ತದೆ ಎಂದು ಪ್ರಧಾನಿ ಮೋದಿ ಅಭಿಪ್ರಾಯ ಪಟ್ಟಿದ್ದಾರೆ. ಇದೇ ವೇಳೆ ವ್ಯಾಪಾರ, ಭದ್ರತೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಭಾರತ ಮತ್ತು ಐರೋಪ್ಯ ಒಕ್ಕೂಟದ ಸಂಬAಧಗಳಲ್ಲಿ ಹೊಸ ಅಧ್ಯಾಯವಾಗಿದೆ ಎಂದು ಐರೋಪ್ಯ ಒಕ್ಕೂಟದ ಅಧ್ಯಕ್ಷ ಕೋಸ್ಟಾ ಬಣ್ಣಿಸಿದರು. ಕಳೆದ ಏಳು ತಿಂಗಳುಗಳಲ್ಲಿ s ಭಾರತವು ಬ್ರಿಟನ್,ಓಮನ್ ಮತ್ತು ನ್ಯೂಜಿಲೆಂಡ್‌ನೊAದಿಗೆ ಪ್ರಮುಖ ವ್ಯಾಪಾರ ಒಪ್ಪಂದಗಳಿಗೆ ಸಹಿ ಹಾಕಿದೆ.

ಸ್ವಿಜರ್‌ಲ್ಯಾಂಡ್, ನಾರ್ವೆ, ಐಸ್ಲ್ಯಾಂಡ್ ಮತ್ತು ಲಿಚ್ಟೆನ್‌ಸ್ಟೈನ್‌ನ ನಾಲ್ಕು ರಾಷ್ಟ್ರಗಳ ಯುರೋಪಿಯನ್ ಮುಕ್ತ ವ್ಯಾಪಾರ ಸಂಘದ ಬಣದೊಂದಿಗೆ ೨೦೨೪ರಲ್ಲಿ ಸಹಿ ಹಾಕಿದ್ದ ಒಪ್ಪಂದ ಕಳೆದ ವರ್ಷ ಜಾರಿಗೆ ಬಂದಿತು. ಇದಕ್ಕೂ ಮುನ್ನ ೨೦೨೨ರಲ್ಲಿ ಆಸ್ಟ್ರೇಲಿಯಾದೊಂದಿಗೆ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿತು. ಭಾರತ-ಐರೋಪ್ಯ ಒಕ್ಕೂಟ ಅಂತ್ಯಗೊಳಿಸುವುದರಿಂದ ಟ್ರಂಪ್ ಅವರ ದಂಡನಾತ್ಮಕ ಸುAಕಗಳು ಹಿಮ್ಮುಖ ಶಕ್ತಿಯಾಗಿವೆ ಎಂದು ಐರೋಪ್ಯ ಒಕ್ಕೂಟದ ರಾಜತಾಂತ್ರಿಕರೊಬ್ಬರು ಅಭಿಪ್ರಾಯ ಪಟ್ಟಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular