Saturday, July 18, 2026
Homeಗ್ಯಾಜೆಟ್ / ಟೆಕ್ನವದೆಹಲಿ : ಏ.1 ರಿಂದ ಚೀನಾ ಇಂಟರ್ನೆಟ್ ಆಧಾರಿತ ಸಿಟಿವಿ ಕ್ಯಾಮೆರಾಗಳು ಸಂಪೂರ್ಣ ನಿಷೇಧ.

ನವದೆಹಲಿ : ಏ.1 ರಿಂದ ಚೀನಾ ಇಂಟರ್ನೆಟ್ ಆಧಾರಿತ ಸಿಟಿವಿ ಕ್ಯಾಮೆರಾಗಳು ಸಂಪೂರ್ಣ ನಿಷೇಧ.

ನವದೆಹಲಿ: ಭಾರತೀಯ ಸರ್ಕಾರ ಏ.1 ರಿಂದ ಜಾರಿಗೆ ಬರುವಂತೆ ಚೀನಾ ಉತ್ಪಾದಕರು ತಯಾರಿಸಿದ ಪ್ರಮಾಣಿಕರಿಸದ ಇಂಟರ್ನೆಟ್ ಆಧಾರಿತ ಸಿಸಿಟಿವಿ ಕ್ಯಾಮೆರಾಗಳಿಗೆ ಸಂಪೂರ್ಣ ನಿಷೇಧ ಹೇರಿದೆ.

ಚೀನಾ ನಿರ್ಮಿತ ಸಿಸಿಟಿವಿಗಳು ಭಾರತದ ರಾಷ್ಟಿçÃಯ ಭದ್ರತೆಗೆ ಅಪಾಯ ತರಬಲ್ಲದು ಎಂಬ ನೆಲೆಯಲ್ಲಿ ಕೇಂದ್ರ ಸರ್ಕಾರ ಈ ಕ್ರಮ ಕೈಗೊಂಡಿದೆ ಎನ್ನಲಾಗಿದೆ. ಸಿಸಿಟಿವಿ ಕ್ಯಾಮೆರಾ ಬಿಡಿಭಾಗ ಉತ್ಪಾದನೆ ಮತ್ತು ಪೂರೈಕೆಯಲ್ಲಿ ಚೀನಾ ಪ್ರಮುಖ ದೇಶವಾಗಿದೆ, ಕ್ಯಾಮೆರಾ ಮಾರುಕಟ್ಟೆಯಲ್ಲಿ
ಚೀನಾ ಹೊಸ ಬದಲಾವಣೆ ಉಂಟು ಮಾಡುತ್ತಿರುವುದರಿಂದ ಭಾರತದ ಕಂಪನಿಗಳಿಗೆ ಅದರಿಂದ ಅನುಕೂಲವಾಗಲಿದೆ.

ಕೇಂದ್ರದ ನಿರ್ಧಾರದಿಂದ ಚೀನಾದ ಕಣ್ಗಾವಲು ಉಪಕರಣಗಳ ಉತ್ಪಾದಕ ಕಂಪನಿಗಳಾದ ಹಿಕ್ವಿಷನ್,ದಹುವಾ ಮತ್ತು ಟಿಪಿ ಲಿಂಕ್ ಕಂಪನಿಗಳಿಗೆ ಭಾರಿ ಹೊಡೆತ ಬೀಳಲಿದೆ.ಇತ್ತೀಚೆಗೆ ಅಮೆರಿಕ ಇರಾನ್ ಮೇಲೆ ದಾಳಿಗಾಗಿ ಅಲ್ಲಿನ ಸಿಸಿಟಿವಿ ಹ್ಯಾಕ್ ಮಾಡಿ ರಹಸ್ಯ ಮಾಹಿತಿ ಸಂಗ್ರಹ ಮಾಡಿತ್ತು. ಇದೇ ರೀತಿ ಚೀನಾ ಚಿಪ್ ನಿರ್ಮಿತ ಸಿಸಿಟಿವಿ ಭಾರತದ ಭದ್ರತೆಗೆ ಮಾರಕವಾಗಬಹುದು.

RELATED ARTICLES

LEAVE A REPLY

Please enter your comment!
Please enter your name here

Most Popular