Tuesday, October 21, 2025
Flats for sale
Homeವಿದೇಶನವದೆಹಲಿ : ಆಪರೇಷನ್ ಸಿಂದೂರ್ ಕಾರ್ಯಾಚರಣೆಯಲ್ಲಿ ಧ್ವಂಸಗೊಂಡು ಇನ್ನೂ ರಿಪೇರಿಯೇ ಆಗದ ಪಾಕ್‌ನ ರಹೀಂ ಖಾನ್...

ನವದೆಹಲಿ : ಆಪರೇಷನ್ ಸಿಂದೂರ್ ಕಾರ್ಯಾಚರಣೆಯಲ್ಲಿ ಧ್ವಂಸಗೊಂಡು ಇನ್ನೂ ರಿಪೇರಿಯೇ ಆಗದ ಪಾಕ್‌ನ ರಹೀಂ ಖಾನ್ ವಾಯುನೆಲೆ..!

ನವದೆಹಲಿ : ಆಪರೇಷನ್ ಸಿಂದೂರ್ ಕಾರ್ಯಾಚರಣೆ ನಡೆದು 2 ತಿಂಗಳು ಕಳೆದರೂ ಭಾರತೀಯ ಸೇನೆಯ ಕ್ಷಿಪಣಿ ದಾಳಿಗೆ ಧ್ವಂಸವಾಗಿದ್ದ ಪಾಕಿಸ್ತಾನದ
ರಹೀಂ ಯಾರ್ ಖಾನ್ ವಾಯುನೆಲೆ ಇನ್ನೂ ರಿಪೇರಿಯಾಗಿಲ್ಲ. ಈ ಬಗ್ಗೆ ನೋಟಮ್ ಜಾರಿ ಮಾಡಿರುವ ಪಾಕಿಸ್ತಾನದ ನಾಗರಿಕ ವಿಮಾನಯಾನ ಪ್ರಾಧಿಕಾರವು ವಿಮಾನ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗುವುದೆಂದು ತಿಳಿಸಿದೆ.

ಬಂದ್ ವಿಸ್ತರಣೆಗೆ ಕಾರಣ ತಿಳಿಸಿಲ್ಲ. ಸಿಂದೂರ್ ದಾಳಿಯ ಮರುದಿನ ಮೇ 1೦ರಂದು ಮೊದಲ ಬಾರಿಗೆ ರನ್‌ವೇ ಬಂದ್ ಮಾಡಿ ಪಾಕಿಸ್ತಾನ ಆದೇಶ ಹೊರಡಿಸಿತ್ತು. ಅದಾದ ಬಳಿಕ ಜೂನ್ ೪ರಂದು ಮತ್ತೆ ನೋಟಮ್ ಜಾರಿ ಮಾಡಿ ಜುಲೈ೪ರವರೆಗೆ ಅದನ್ನು ವಿಸ್ತರಿಸಲಾಗಿತ್ತು. ಇದೀಗ ಮೂರನೇ ಬಾರಿಗೆ ಮತ್ತೊಮ್ಮೆ ಬಂದ್ ವಿಸ್ತರಿಸಿರುವುದಕ್ಕೆ ರನ್‌ವೇ ರಿಪೇರಿ ಕಾರ್ಯ ಪ್ರಗತಿಯಲ್ಲಿರುವುದೇ ಕಾರಣ ಎಂದು ಮೂಲಗಳು ತಿಳಿಸಿವೆ. ಇದಕ್ಕೆ ಸಂಬAಧಿಸಿದAತೆ ಸ್ಯಾಟಲೈಟ್ ಚಿತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ರನ್‌ವೇ ಮಧ್ಯದಲ್ಲಿ ಸುಮಾರು 19 ಅಡಿ ಅಗಲದ ಆಳವಾದ ಗುಂಡಿ ಬಿದ್ದಿರುವುದು ಕಂಡುಬAದಿದೆ.

ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತಿಕಾರವಾಗಿ ಭಾರತೀಯ ಸೇನೆ ಆಪ್‌ರೇಷನ್ ಸಿಂದೂರ್ ಹೆಸರಿನಲ್ಲಿ ಪಾಕಿಸ್ತಾನದ 11 ವಾಯುನೆಲೆಗಳ ಮೇಲೆ ಕ್ಷಿಪಣಿ ದಾಳಿ ನಡೆಸಿತ್ತು. ಭಾರತದ ದಾಳಿಗೆ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿರುವ ರಹೀಂಖಾನ್ ವಾಯು ನೆಲೆ ಇನ್ನೂ ಚೇತರಿಸಿಲ್ಲ ಐಸಿಯುನಲ್ಲಿಯೇ ಇದೆ ಎಂದು ಪಿಎಂ ಮೋದಿ ಟೀಕಿಸಿದ್ದರು.

ಭಾರತದ ಕ್ಷಿಪಣಿ ದಾಳಿಗೆ ಹಾನಿಗೀಡಾಗಿದ್ದ ರಹೀಂ ಯಾರ್ ಖಾನ್ ಏರ್‌ಬೇಸ್‌ನ ರಿಪೇರಿ ಇನ್ನೂ ಮುಗಿದಿಲ್ಲವಾದ್ದರಿಂದ ಮೂರನೇ ಬಾರಿಗೆ ರನ್‌ವೇ ಬಂದ್ ಅನನು ಪಾಕಿಸ್ತಾನ ವಿಸ್ತರಿಸಿದೆ. ಈ ಬಗ್ಗೆ ನೋಟಮ್ ಜಾರಿ ಮಾಡಿ ಅಗಸ್ಟ್ 6 ರವರೆಗೆ ವಿಮಾನ ಕಾರ್ಯಾಚರಣೆ ವಿಸ್ತರಿಸಲಾಗಿದೆ ಎಂದು ಸೂಚನೆ ನೀಡಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular