Monday, October 12, 2026
Homeವಿದೇಶನವದೆಹಲಿ : ಅಟ್ಲಾಂಟಿಕ್ ಅಥವಾ ಪೆಸಿಫಿಕ್ ಸಾಗರಕ್ಕೆ ‘ಟ್ರಂಪ್ ಸಾಗರ’ ಎಂದು ನೊಬೆಲ್ ಶಾಂತಿ ಪ್ರಶಸ್ತಿ...

ನವದೆಹಲಿ : ಅಟ್ಲಾಂಟಿಕ್ ಅಥವಾ ಪೆಸಿಫಿಕ್ ಸಾಗರಕ್ಕೆ ‘ಟ್ರಂಪ್ ಸಾಗರ’ ಎಂದು ನೊಬೆಲ್ ಶಾಂತಿ ಪ್ರಶಸ್ತಿ ಕೈತಪ್ಪಿದ ಬೆನ್ನಲ್ಲೇ ನಾಮಕರಣಕ್ಕೆ ಟ್ರಂಪ್ ಹೊಸ ಚಿಂತನೆ.!

ನವದೆಹಲಿ : ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಅಟ್ಲಾಂಟಿಕ್ ಅಥವಾ ಪೆಸಿಫಿಕ್ ಸಾಗರಕ್ಕೆ ‘ಟ್ರಂಪ್ ಸಾಗರ’ ಅಥವಾ ‘ಅಮೆರಿಕ ಸಾಗರ’ ಎಂದು ಮರುನಾಮಕರಣ ಮಾಡುವ ಕುರಿತು ಚಿಂತನೆ ನಡೆಸುತ್ತಿದ್ದಾರೆ ಎನ್ನಲಾಗಿದೆ. ಭೌಗೋಳಿಕ ಸ್ಥಳಗಳ ಹೆಸರಿನ ಮೇಲೆ ಅಮೆರಿಕದ ಪ್ರಾಬಲ್ಯವನ್ನು ವಿಸ್ತರಿಸುವ ಪ್ರಯತ್ನದ ಭಾಗವಾಗಿ ಈ ಚರ್ಚೆ ಮುನ್ನೆಲೆಗೆ ಬಂದಿದೆ.

ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಟ್ರಂಪ್, “ನಮಗೆ ನಮ್ಮದೇ ಆದ ಒಂದು ನದಿ ಅಥವಾ ಸಾಗರ ಬೇಕಿದೆ” ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ವರದಿಯಾಗಿದೆ.

ಈ ಹಿಂದೆ ಮೆಕ್ಸಿಕೋ ಕೊಲ್ಲಿಯನ್ನು ‘ಅಮೆರಿಕ ಕೊಲ್ಲಿ’ ಎಂದು ಮರುನಾಮಕರಣ ಮಾಡುವ ಕ್ರಮ ಕೈಗೊಂಡಿದ್ದ ಟ್ರಂಪ್, ಒಂಟಾರಿಯೊ ಸರೋವರವನ್ನು ‘ಅಮೆರಿಕ ಸರೋವರ’ ಎಂದು ಮರುನಾಮಕರಣ ಮಾಡುವ ಬಗ್ಗೆಯೂ ಪ್ರಸ್ತಾಪಿಸಿದ್ದಾರೆ ಎನ್ನಲಾಗಿದೆ.

ನೊಬೆಲ್ ಶಾಂತಿ ಪ್ರಶಸ್ತಿ ದೊರೆಯದ ಹಿನ್ನೆಲೆಯಲ್ಲಿ ಟ್ರಂಪ್ ಇಂತಹ ಚಿಂತನೆ ನಡೆಸುತ್ತಿದ್ದಾರೆ ಎಂಬ ಚರ್ಚೆಯೂ ನಡೆಯುತ್ತಿದೆ. ಆದರೆ ಪ್ರಶಸ್ತಿ ಕೈತಪ್ಪಿರುವುದೇ ಈ ಪ್ರಸ್ತಾಪಕ್ಕೆ ಕಾರಣ ಎಂಬುದಕ್ಕೆ ಸ್ವತಂತ್ರ ದೃಢೀಕರಣ ಅಗತ್ಯವಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular