Monday, March 23, 2026
Flats for sale
Homeವಿದೇಶನವದೆಹಲಿ : 12 ಸಾವಿರ ಕಿ.ಮೀ. ಗೂ ಮೀರಿ ಹಾರಬಲ್ಲ ಕ್ಷಿಪಣಿಯನ್ನು ಭಾರತ ಅಭಿವೃದ್ಧಿಪಡಿಸಿರುವುದಕ್ಕೆ ಪಾಕಿಸ್ತಾನ...

ನವದೆಹಲಿ : 12 ಸಾವಿರ ಕಿ.ಮೀ. ಗೂ ಮೀರಿ ಹಾರಬಲ್ಲ ಕ್ಷಿಪಣಿಯನ್ನು ಭಾರತ ಅಭಿವೃದ್ಧಿಪಡಿಸಿರುವುದಕ್ಕೆ ಪಾಕಿಸ್ತಾನ ಅಧಿಕಾರಿ ಕಳವಳ.

ನವದೆಹಲಿ : ಭಾರತ 12 ಸಾವಿರ ಕಿ.ಮೀ. ಗೂ ಮೀರಿ ಹಾರಬಲ್ಲ ಕ್ಷಿಪಣಿ ಅಭಿವೃದ್ಧಿಪಡಿಸಿರುವುದಕ್ಕೆ ಪಾಕಿಸ್ತಾನ ಅಧಿಕಾರಿ ಯೊಬ್ಬರು ಕಳವಳ ವ್ಯಕ್ತ ಪಡಿಸುವ ಮೂಲಕ ಭಾರತದ ಕ್ಷಿಪಣಿಯನ್ನು ಪರೋಕ್ಷವಾಗಿ ಹೊಗಳಿದ್ದಾರೆ. ಅಮೆರಿಕ ಗುಪ್ತಚರ ಮುಖ್ಯಸ್ಥೆ ತುಳಸಿ ಗಬ್ಬಾರ್ಡ್ ಹೇಳಿಕೆಗೆ ಪ್ರತಿಕ್ರಿಯಿಸಿದ್ದಾರೆ.

ಪಾಕಿಸ್ತಾನದ ಅಣ್ವಸ್ತç ಕೋಠಿ ಹಾಗೂ ಕ್ಷಿಪಣಿ ಸಾಮರ್ಥ್ಯ ಅಮೆರಿಕಕ್ಕೆ ಅಪಾಯವನ್ನುಂಟು ಮಾಡುತ್ತದೆ ಎಂದು ತುಳಸಿ ಗಬ್ಬಾರ್ಡ್ ನೀಡಿದ್ದ ಹೇಳಿಕೆಯನ್ನು ತಿರಸ್ಕರಿಸುವ ಸಂದರ್ಭದಲ್ಲಿ ನೆರೆಯ ಭಾರತದ ಭಾರೀ ಪ್ರಮಾಣದ ಸಾಮರ್ಥ್ಯ ಇರುವ ಅಣ್ವಸ್ತçಗಳನ್ನು ಪರಿಗಣಿಸಿ ಪಾಕಿಸ್ತಾನ ಅಣ್ವಸ್ತ್ರ ಪ್ರತಿರೋಧಕ ಸಾಮರ್ಥ್ಯ ಬಲಪಡಿಸುವುದರ ಮೇಲೆ ಕೇಂದ್ರೀಕರಿಸಿದೆ ಎಂದು ಪಾಕಿಸ್ತಾನದ ವಿದೇಶಾಂಗ ಸಚಿವಾಲಯದ ಅಧಿಕಾರಿ ತಾಹಿರ್ ಹುಸೇನ್ ಅಂದ್ರಾಬಿ ಹೇಳಿಕೊಂಡಿದ್ದಾರೆ.

ಇದೇ ವೇಳೆ ಪಾಕಿಸ್ತಾನವನ್ನು ರೌಡಿ ದೇಶವೆಂದು ಟೀಕಿಸಿದ ಭಾರತದಲ್ಲಿರುವ ಇಸ್ರೇಲ್ ರಾಯಭಾರಿ ರುವೆನ್ ಅಜರ್ ಹೇಳಿಕೆಯನ್ನೂ ಅಂದ್ರಾಬಿ ತಿರಸ್ಕರಿಸಿದ್ದಾರೆ. ಪಾಕಿಸ್ತಾನವು ತನ್ನ ರಾಷ್ಟ್ರೀಯ ಸಾರ್ವಭೌಮತ್ವವನ್ನು ಕಾಪಾಡುವ ಮತ್ತು ದಕ್ಷಿಣ ಏಷ್ಯಾದಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ಕಾಪಾಡಿಕೊಳ್ಳುವ ಗುರಿಯೊಂದಿಗೆ ಸಂಪೂರ್ಣವಾಗಿ ರಕ್ಷಣಾತ್ಮಕ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದವರು ವಿವರಿಸಿದ್ದಾರೆ. ಪಾಕಿಸ್ತಾನ ಖಂಡಾAತರ ವ್ಯಾಪ್ತಿಗಿAತಲೂ ಬಹಳ ಕಡಿಮೆ ವ್ಯಾಪ್ತಿಯ ಕ್ಷಿಪಣಿಗಳನ್ನು ಅಭಿವೃದ್ಧಿಪಡಿಸುತ್ತಿದೆ. ಕ್ಷಿಪಣಿ ಅಭಿವೃದ್ಧಿಯಲ್ಲಿ ಬಹಳಷ್ಟು ಮುಂದುವರಿದಿರುವ ಭಾರತಕ್ಕೆ ಹೋಲಿಸಿದರೆ, ಕನಿಷ್ಠ ಕ್ಷಿಪಣಿ ತಡೆಗಟ್ಟುವ ಸಾಮರ್ಥ್ಯ ಮೇಲೆ ಗಮನ ಕೇಂದ್ರೀಕರಿಸಿದೆ ಎAದರು. ಅಮೆರಿಕಕ್ಕೆ ಅಣ್ವಸ್ತç ಬೆದರಿಕೆ ಒಡ್ಡುತ್ತಿರುವ ಇರಾನ್, ಚೀನಾ, ರಷ್ಯಾ ಹಾಗೂ ಉತ್ತರ ಕೊರಿಯಾ ದೇಶಗಳ ಸಾಲಿನಲ್ಲಿ ಪಾಕಿಸ್ತಾನವನ್ನೂ ಗಬ್ಬಾರ್ಡ್ ಹೆಸರಿಸಿರುವ ಹಿನ್ನೆಲೆಯಲ್ಲಿ ಅಂದ್ರಾಬಿ ಮೇಲಿನ ಸ್ಪಷ್ಟನೆ ನೀಡಿದ್ದಾರೆ. ಪಾಕಿಸ್ತಾನ ಅಣ್ವಸ್ತç ದೂರವ್ಯಾಪ್ತಿ ಕ್ಷಿಪಣಿ ಇದೆ. ಅದು ಅಮೆರಿಕಕ್ಕೆ ಕಳವಳಕಾರಿ ಎಂದು ಅಮೆರಿಕದ ಗುಪ್ತಚರ ಮುಖ್ಯಸ್ಥೆ ಹೇಳಿದ್ದರು ಇದನ್ನು ಪಾಕ್ ಅಧಿಕಾರಿಯೊಬ್ಬರು, ಭಾರತದ ಬಳಿ ಹೆಚ್ಚಿನ ಸಾಮರ್ಥ್ಯದಕ್ಷಿಪಣಿಯಿದ್ದು, ಆತಂಕಕಾರಿ ಎಂದಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular