Thursday, May 28, 2026
Flats for sale
Homeಕ್ರೀಡೆಧರ್ಮಶಾಲಾ : ಐಪಿಎಲ್ ಫೈನಲ್‌ಗೆ 5ನೇ ಬಾರಿ ಆರ್‌ಸಿಬಿ ಎಂಟ್ರಿ.

ಧರ್ಮಶಾಲಾ : ಐಪಿಎಲ್ ಫೈನಲ್‌ಗೆ 5ನೇ ಬಾರಿ ಆರ್‌ಸಿಬಿ ಎಂಟ್ರಿ.

ಧರ್ಮಶಾಲಾ : ರಾಯಲ್ ಚಾಲೆಂಜ್ರ್ಸ್ ಬೆಂಗಳೂರು ತಂಡ ಐಪಿಎಲ್ ಇತಿಹಾಸದಲ್ಲಿ 5ನೇ ಬಾರಿ ಫೈನಲ್ ಪ್ರವೇಶಿಸಿದೆ. ಕ್ವಾಲಿಫೈಯರ್-1 ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ಆರ್‌ಸಿಬಿ 92 ರನ್‌ಗಳ ಭರ್ಜರಿ ಜಯ ಸಾಧಿಸಿ ಪ್ರಶಸ್ತಿ ಸುತ್ತಿಗೆ ಲಗ್ಗೆ ಇಟ್ಟಿತು.

ಮೊದಲು ಬ್ಯಾಟಿಂಗ್ ನಡೆಸಿದ ಆರ್‌ಸಿಬಿ 5 ವಿಕೆಟ್ ನಷ್ಟಕ್ಕೆ 254 ರನ್‌ಗಳ ಬೃಹತ್ ಮೊತ್ತ ಪೇರಿಸಿತು. ನಾಯಕ ರಜತ್ ಪಾಟೀದಾರ್ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿ ಕೇವಲ 33 ಎಸೆತಗಳಲ್ಲಿ ಅಜೇಯ 93 ರನ್ ಸಿಡಿಸಿದರು. ಅವರ ಇನ್ನಿಂಗ್ಸ್‌ನಲ್ಲಿ 5 ಬೌಂಡರಿ ಹಾಗೂ 9 ಭರ್ಜರಿ ಸಿಕ್ಸರ್‌ಗಳು ಸೇರಿದ್ದವು.

ಆರಂಭದಲ್ಲಿ ವಿರಾಟ್ ಕೊಹ್ಲಿ 43 ರನ್ ಹಾಗೂ ದೇವಧೂತ್ತ್ ಪಡಿಕ್ಕಲ್ 30 ರನ್‌ಗಳ ಕೊಡುಗೆ ನೀಡಿದರು. ಬಳಿಕ ಕೃಣಾಲ್ ಪಾಂಡ್ಯ 43 ರನ್ ಬಾರಿಸಿ ಪಾಟೀದಾರ್ ಜೊತೆ 95 ರನ್‌ಗಳ ಮಹತ್ವದ ಜೊತೆಯಾಟ ಕಟ್ಟಿದರು.

255 ರನ್‌ಗಳ ಗುರಿ ಬೆನ್ನತ್ತಿದ ಗುಜರಾತ್ ಟೈಟನ್ಸ್ ಬ್ಯಾಟಿಂಗ್ ವೈಫಲ್ಯಕ್ಕೆ ತುತ್ತಾಗಿ 19.3 ಓವರ್‌ಗಳಲ್ಲಿ 162 ರನ್‌ಗಳಿಗೆ ಆಲೌಟ್ ಆಯಿತು. ರಾಹುಲ್ ತೆವತಿಯ ಅರ್ಧಶತಕ ಸಿಡಿಸಿ ತಂಡದ ಮಾನ ಉಳಿಸಲು ಪ್ರಯತ್ನಿಸಿದರು.

ಆರ್‌ಸಿಬಿ ಪರ ಬೌಲಿಂಗ್‌ನಲ್ಲಿ ಜಾಕೋಬ್ ಡುಫ್ಯ್ 3 ವಿಕೆಟ್ ಪಡೆದು ಮಿಂಚಿದರು. ಗುಜರಾತ್ ಪರ ಕಗಿಸೊ ರಾಬಾದ ಮತ್ತು ಜಾಸನ್ ಹೋಲ್ಡರ್ ತಲಾ 2 ವಿಕೆಟ್ ಪಡೆದರೂ ತಂಡವನ್ನು ಸೋಲಿನಿಂದ ಪಾರು ಮಾಡಲಾಗಲಿಲ್ಲ.

RELATED ARTICLES

LEAVE A REPLY

Please enter your comment!
Please enter your name here

Most Popular