Thursday, May 28, 2026
Flats for sale
Homeದೇಶನವದೆಹಲಿ : ‘ಕಾಕ್ರೋಚ್ ಜನತಾ ಪಾರ್ಟಿ’ಗೆ ಮಾಲೀಕತ್ವ ಕದನ : ಚುನಾವಣಾ ಆಯೋಗಕ್ಕೆ ವಕೀಲರ ಅರ್ಜಿ.

ನವದೆಹಲಿ : ‘ಕಾಕ್ರೋಚ್ ಜನತಾ ಪಾರ್ಟಿ’ಗೆ ಮಾಲೀಕತ್ವ ಕದನ : ಚುನಾವಣಾ ಆಯೋಗಕ್ಕೆ ವಕೀಲರ ಅರ್ಜಿ.

ನವದೆಹಲಿ : ‘ಕಾಕ್ರೋಚ್ ಜನತಾ ಪಾರ್ಟಿ’ (ಸಿಜೆಪಿ) ಮಾಲೀಕತ್ವದ ಕುರಿತಾಗಿ ಇದೀಗ ಹೊಸ ವಿವಾದ ಭುಗಿಲೆದ್ದಿದೆ. ಪಕ್ಷವನ್ನು ಮೂಲತಃ ತಾವೇ ಸ್ಥಾಪಿಸಿದ್ದಾಗಿ ಹೇಳಿಕೊಂಡಿರುವ ಹರಿಯಾಣದ ಪಾಣಿಪತ್ ಮೂಲದ ವಕೀಲ ಸುಧೀರ್ ಜಖಾರ್, ಪಕ್ಷದ ನೋಂದಣಿಯನ್ನು ತಮ್ಮ ಹೆಸರಿಗೆ ವರ್ಗಾಯಿಸುವಂತೆ ಚುನಾವಣಾ ಆಯೋಗಕ್ಕೆ ಅರ್ಜಿ ಸಲ್ಲಿಸಿದ್ದಾರೆ.

ಪಕ್ಷದ ರಾಷ್ಟ್ರೀಯ ಸಂಚಾಲಕ ಎಂದು ಹೇಳಿಕೊಂಡಿರುವ ಸುಧೀರ್ ಜಖಾರ್, ಅಮೆರಿಕ ಮೂಲದ ಅಭಿಜಿತ್ ದೀಪ್ಕೆ ಸಿಜೆಪಿಯ ಸ್ಥಾಪಕರಲ್ಲ ಎಂದು ಆರೋಪಿಸಿದ್ದಾರೆ. ಜನತಾ ಪ್ರಾತಿನಿಧ್ಯ ಕಾಯ್ದೆಯ ಸೆಕ್ಷನ್ 29A ಅನ್ವಯ ಪಕ್ಷವನ್ನು ಅಧಿಕೃತವಾಗಿ ತಮ್ಮ ಹೆಸರಲ್ಲಿ ನೋಂದಾಯಿಸಬೇಕು ಎಂದು ಅವರು ಚುನಾವಣಾ ಆಯೋಗದ ಕಾರ್ಯದರ್ಶಿಗೆ ಮನವಿ ಮಾಡಿದ್ದಾರೆ.

ಈ ಬೆಳವಣಿಗೆ ಸಿಜೆಪಿ ಪಕ್ಷದ ಒಳಗಿನ ಮಾಲೀಕತ್ವ ಹಾಗೂ ಸ್ಥಾಪನಾ ಹಕ್ಕಿನ ಕುರಿತ ರಾಜಕೀಯ ಮತ್ತು ಕಾನೂನು ವಿವಾದಕ್ಕೆ ಕಾರಣವಾಗಿದೆ. ಚುನಾವಣಾ ಆಯೋಗದ ಮುಂದಿನ ಕ್ರಮದತ್ತ ಇದೀಗ ರಾಜಕೀಯ ವಲಯದ ಗಮನ ಸೆಳೆದಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular