ಥಾಯ್ಲೆಂಡ್ : ಆಗ್ನೇಯ ಏಷ್ಯಾದಲ್ಲಿ ಥಾಯ್ಲೆಂಡ್ ಮತ್ತು ಕಾಂಬೋಡಿಯಾ ನಡುವಣ ಘರ್ಷಣೆ ಕಳೆದೆರಡು ದಿನಗಳಿಂದ ತೀವ್ರಗೊಂಡಿದ್ದು, ಕನಿಷ್ಠ 14 ಮಂದಿ ಸಾವನ್ನಪ್ಪಿದ್ದು, 1 ಲಕ್ಷಕ್ಕೂ ಹೆಚ್ಚು ನಾಗರಿಕರು ನಿರಾಶ್ರಿತರಾಗಿದ್ದಾರೆ.
ಶಸ್ತಾçಸ್ತçಗಳು, ಫಿರಂಗಿಗಳು, ಮತ್ತು ಕ್ಷಿಪಣಿಗಳನ್ನೂ ಬಳಸಲಾಗಿರುವ ಈ ಘರ್ಷಣೆಯು, ಕಳೆದೊಂದು ದಶಕದಲ್ಲೇ ಅತ್ಯಂತ ಗಂಭೀರ ಸ್ವರೂಪ ಪಡೆಯುತ್ತಿದೆ. ಥಾಯ್ ಗಡಿಯಲ್ಲಿರುವ ತಾ ಮುಯೆನ್ ಥಾಮ್ ಶಿವ ದೇವಾಲಯ ಬಳಿ ಕಾಂಬೋಡಿಯಾ ಸೇನೆ ಗುಂಡುಹಾರಿಸಿದ ನಂತರ ಉಭಯ ದೇಶಗಳ ಮಧ್ಯೆ ಗುಂಡಿನ ಚಕಮಕಿ ನಡೆದಿದೆ.
ಯುದ್ಧಕ್ಕೆ ತತ್‌ಕ್ಷಣದ ಕಾರಣವೇನು?
ಮೇ 27೭ರಂದು ಕಾಂಬೋಡಿಯನ್ ಮತ್ತು ಥಾಯ್ ಪಡೆಗಳು 10 ನಿಮಿಷಗಳ ಕಾಲ ಗುಂಡಿನ ಚಕಮಕಿ ನಡೆಸಿದ್ದಾಗ ಕಾಂಬೋಡಿಯಾದ ಸೈನಿಕನೊಬ್ಬ ಸಾವನ್ನಪ್ಪಿದ್ದ. ಆನಂತರ ಜುಲೈ 16 ರಂದು ವಿವಾದಿತ ಗಡಿಯಲ್ಲಿ ಗಸ್ತು ತಿರುಗುತ್ತಿದ್ದ ಥಾಯ್ ಸೈನಿಕರು ನೆಲಬಾಂಬ್‌ಗಳಿಂದ ಗಾಯಗೊಂಡರು. ಆ ಬಳಿಕ ಜುಲೈ ೨೩ರಂದು ಮತ್ತೆ ನೆಲಬಾಂಬ್‌ಗಳ ಮೇಲೆ ಹೆಜ್ಜೆ ಹಾಕಿದ ಐದು ಥಾಯ್ ಸೈನಿಕರು ಗಾಯಗೊಂಡಿದ್ದು ಅವರಲ್ಲೊಬ್ಬರು ಕಾಲು ಕಳೆದುಕೊಂಡರು.ಈ ಹಿನ್ನೆಲೆ ಯುದ್ಧಕ್ಕೆ ಕಾರಣವೆಂಬುದು ಮಾಹಿತಿ.