ಢಾಕಾ : ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ ಮುಂದುವರಿದಿದೆ. ಇದೀಗ ಮುಂದಿನ ತಿಂಗಳು ನಡೆಯಲಿರುವ ಸಾರ್ವತ್ರಿಕ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಹಿಂದೂ ವ್ಯಕ್ತಿ ಗೋವಿಂದ್‌ದೇಬ್ ಪ್ರಮಾಣಿಕ್ ಅವರ ನಾಮಪತ್ರವನ್ನು ಬಾಂಗ್ಲಾದೇಶ ನ್ಯಾಷನಲ್ ಪಕ್ಷದ ಒತ್ತಡದಿಂದ ಚುನಾವಣಾಧಿಕಾರಿ ತಿರಸ್ಕರಿಸಿದ್ದಾರೆ.
ಶೇ.೫೦ರಷ್ಟು ಹಿಂದೂಗಳೇ ನೆಲೆಸಿರುವ ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರ ಕ್ಷೇತ್ರ ಗೋಪಾಲ್ ಗಂಜ್-೩ರಿAದ ಗೋವಿಂದ್‌ದೇಬ್ ಅವರು ಕಣಕ್ಕಿಳಿದಿದ್ದರು. ಬಾಂಗ್ಲಾದೇಶದಲ್ಲಿ ಚುನಾವಣಾ ಆಯೋಗದ ನಿಯಮದ ಪ್ರಕಾರ, ಸ್ವತಂತ್ರ ಅಭ್ಯರ್ಥಿಗಳು ತಾವು ಸ್ಪರ್ಧಿಸುವ ಕ್ಷೇತ್ರದಿಂದ ಶೇ.೧ರಷ್ಟು ಮತದಾರರ ಸಹಿಯನ್ನು ನಾಮಪತ್ರದ ಜತೆ ಸಲ್ಲಿಸಬೇಕು ಎಂಬುದು ನಿಯಮವಾಗಿದೆ. ಆಯೋಗದ ಎಲ್ಲ ನಿಯಮಗಳ ಪಾಲಿಸಿದಾಗ್ಯೂ ಸಹಿ ಅಮಾನ್ಯ ಎಂಬ ಕಾರಣ ನೀಡಿ ನಾಮಪತ್ರ ತಿರಸ್ಕರಿಸಿದ್ದಾರೆ ಎಂದು ಆರೋಪಿಸಿದ್ದಾರೆ


