Friday, January 16, 2026
Flats for sale
Homeವಿದೇಶಢಾಕಾ :ಬಾಂಗ್ಲಾ ಯುವ ನಾಯಕನ ಹತ್ಯೆ ಬೆನ್ನಲ್ಲೇ ಹಿಂದೂ ಯುವಕನನ್ನು ಕೊಂದು ಬೆಂಕಿ ಹಚ್ಚಿದ ದುಷ್ಕರ್ಮಿಗಳು.

ಢಾಕಾ :ಬಾಂಗ್ಲಾ ಯುವ ನಾಯಕನ ಹತ್ಯೆ ಬೆನ್ನಲ್ಲೇ ಹಿಂದೂ ಯುವಕನನ್ನು ಕೊಂದು ಬೆಂಕಿ ಹಚ್ಚಿದ ದುಷ್ಕರ್ಮಿಗಳು.

ಢಾಕಾ : ಕಳೆದ ವರ್ಷ ಬಾಂಗ್ಲಾದೇಶದಲ್ಲಿ ನಡೆದಿದ್ದ ವಿದ್ಯಾರ್ಥಿ ಚಳವಳಿಯ ನಾಯಕರಲ್ಲಿ ಒಬ್ಬನಾಗಿದ್ದ ಷರೀಫ್ ಒಸ್ಮಾನ್ ಹಾದಿ ಮೃತಪಟ್ಟಿದ್ದು, ಇದರಿಂದ ಹಿAಸಾಚಾರ ಭುಗಿಲೆದ್ದಿದೆ. ಇಂಕ್ವಿಲಾಬ್ ಮೊಂಚೊದ ವಕ್ತಾರನಾಗಿದ್ದ 32 ವರ್ಷದ ಷರೀಫ್ ಮುಂದಿನ ವರ್ಷ ನಡೆಯಲಿರುವ ಚುನಾವಣೆಯಲ್ಲಿ ಅಭ್ಯರ್ಥಿಯಾಗಿದ್ದು, ಅದಕ್ಕಾಗಿ ತಯಾರಿ ನಡೆಸಿದ್ದ. ಕಳೆದ ಶುಕ್ರವಾರ ಅವನ ಮೇಲೆ ಅಪರಿಚಿತರು ಗುಂಡು ಹಾರಿಸಿದ್ದರು. ತೀವ್ರವಾಗಿ ಗಾಯಗೊಂಡಿದ್ದ ಅವನನ್ನು ಚಿಕಿತ್ಸೆಗಾಗಿ ಸಿಂಗಾಪೂರ್‌ಗೆ ಸಾಗಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ಮೃತಪಟ್ಟಿದ್ದಾನೆ. ಷರೀಫ್ ಸಾವಿನ ಸುದ್ದಿ ಬರುತ್ತಿದ್ದಂತೆ ಗುರುವಾರ ತಡರಾತ್ರಿ ಢಾಕಾದಲ್ಲಿ ಹಿಂಸಾಚಾರ ಆರಂಭವಾಗಿದೆ.

ಬಾAಗ್ಲಾದೇಶದ ಪ್ರಮುಖ ಪತ್ರಿಕೆಗಳಾದ ಡೈಲಿ ಸ್ಟಾರ್, ಪ್ರೊಥಮ್ ಆಲೋ ಮುಂತಾದ ಪತ್ರಿಕೆಗಳಿಗೆ ಪ್ರತಿಭಟನಾಕಾರರು ನುಗ್ಗಿ ದಾಂಧಲೆ ಮಾಡಿದ್ದಲ್ಲದೆ, ಬೆಂಕಿ ಹಚ್ಚಿದ್ದಾರೆ. ಪತ್ರಿಕಾ ಕಚೇರಿಯ ಕೆಳ ಮಹಡಿಯಲ್ಲಿ ಬೆಂಕಿ ಹಚ್ಚಿದ್ದರೆ, ಸಿಬ್ಬಂದಿ ಜೀವಭಯದಿಂದ ಮೇಲಿನ ಮಹಡಿಗೆ ಹೋಗಿ ಪ್ರಾಣ ಉಳಿಸಿಕೊಂಡಿದ್ದಾರೆ. ಒಂದು ಹAತದಲ್ಲಿ ಅವರಿಗೆ ಉಸಿರಾಟದ ಸಮಸ್ಯೆ ಉಂಟಾದರೂ, ಹೇಗೋ ಬಚಾವಾಗಿ ಮನೆ ಸೇರಿಕೊಂಡಿದ್ದಾರೆ.

ಕಳೆದ ವರ್ಷ ಹಸೀನಾ ಸರ್ಕಾರವನ್ನು ಉರುಳಿಸಲು ನಡೆದ ಬಾಂಗ್ಲಾದೇಶದಲ್ಲಿ ನಡೆದ ಭಾರೀ ಚಳವಳಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಹಾದಿ. ಇಕ್ವಿಲಾಬ್ ಮೊಂಚೋದ ಹಿರಿಯ ನಾಯಕನಾಗಿದ್ದ ಹಾದಿ. ಈ ಸಂಘಟನೆ ಕಳೆದ ವರ್ಷದ ಚಳವಳಿಯಲ್ಲಿ ಭಾಗಿಯಾಗಿದ್ದರೂ, ಚುನಾವಣೆಯಲ್ಲಿ ಸ್ಪರ್ಧಿಸದಂತೆ ನಿಷೇಧ ಹೇರಿದ್ದರು. ಹೀಗಾಗಿ ಢಾಕಾ-8 ಕ್ಷೇತ್ರದಿಂದ ಹಾದಿ ಸ್ವತಂತ್ರವಾಗಿಯೇ ಕಣಕ್ಕಿಳಿಯಲು ತಯಾರಿನಡೆಸಿದ್ದ. ಭಾರತದ ಭೂಭಾಗಗಳನ್ನೂ ಸೇರಿಸಿಕೊಂಡು ಗ್ರೇಟರ್ ಬಾಂಗ್ಲಾದ ನಕ್ಷೆ ಹಂಚಿದ್ದ.

ಹಿಂದೂ ಯುವಕನನ್ನುಕೊಂದ ದುಷ್ಕರ್ಮಿಗಳು ಅಲ್ಪಸಂಖ್ಯಾತರ ಮೇಲೆ ದಾಳಿ ನಡೆಯುತ್ತಿದ್ದು ಹಿಂದೂ ಯುವಕನನ್ನು ಹೊಡೆದು ಕೊಲೆ ಮಾಡಲಾಗಿದೆ. ಮತೃಪಟ್ಟ ಯುವಕನನ್ನು 25 ವರ್ಷದ ದೀಪು ಚಂದ್ರ ದಾಸ್ ಎಂದು ಗುರುತಿಸಲಾಗಿದೆ. ಮೈಮೆನ್‌ಸಿಂಗ್ ಸಿಟಿಯಲ್ಲಿ ಈ ಘಟನೆ ಜರುಗಿದೆ. ಸರ್ಕಾರ ಈ ಸುದ್ದಿಯನ್ನು ಖಚಿತಪಡಿಸಿದ್ದು, ಬಾಂಗ್ಲಾದೇಶದಲ್ಲಿ ಹಿಂಸಾಚಾರಕ್ಕೆ ಆಸ್ಪದ ಇಲ್ಲ. ಘಟನೆಗೆ ಕಾರಣರಾದವರನ್ನು ಬಿಡುವುದಿಲ್ಲ ಎಂದು ಹೇಳಿಕೆ ಬಿಡುಗಡೆ ಮಾಡಿದೆ.

ದೀಪು ದಾಸ್‌ನನ್ನು ಕೊಂದ ನಂತರ ಪಾರ್ಥಿವ ಶರೀರಕ್ಕೆ ದುಷ್ಕರ್ಮಿಗಳ ಗುಂಪು ರಸ್ತೆಯಲ್ಲಿಯೇ ಬೆಂಕಿ ಹಚ್ಚಿದೆ. ಈ ಘಟನೆ ಆ ಪ್ರದೇಶದಲ್ಲಿ ಉದ್ವಿಗ್ನ ಪರಿಸ್ಥಿತಿಗೆ ಕಾರಣವಾಗಿದೆ. ಪೊಲೀಸರು ಶವವನ್ನು ವಶಕ್ಕೆ ಪಡೆದುಕೊಂಡಿದ್ದು, ಆಸ್ಪತ್ರೆಗೆ ಸಾಗಿಸಿದ್ದಾರೆ. ಪರಿಸ್ಥಿತಿಯನ್ನು ನಿಭಾಯಿಸಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ. ಶೇಖ್ ಹಸೀನಾ ಅವರನ್ನು ಅಧಿಕಾರದಿಂದ ಕೆಳಗಿಳಿಸಿದ ನಂತರ ಹಿಂದೂಗಳ ಮೇಲೆ ಹಲ್ಲೆ ಮತ್ತು ಹಿಂಸಾಚಾರ ಪ್ರಕರಣಗಳು ಹೆಚ್ಚಾಗಿದ್ದು, ಅದರ ಸಾಲಿಗೆ ಈ ಪ್ರಕರಣ ಸೇರಿಕೊಂಡಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular