Friday, March 13, 2026
Flats for sale
Homeವಿದೇಶಟೆಲ್ ಅವೀವ್ : ರಾಕೆಟ್ ದಾಳಿ ನಿಲ್ಲಿಸದ ಹಮಾಸ್ ,1500 ದಾಟಿದ ಸಾವು.

ಟೆಲ್ ಅವೀವ್ : ರಾಕೆಟ್ ದಾಳಿ ನಿಲ್ಲಿಸದ ಹಮಾಸ್ ,1500 ದಾಟಿದ ಸಾವು.

ಟೆಲ್ ಅವೀವ್: ಅಪ್ರಚೋದಿತವಾಗಿ ವಿನಾಶಕಾರಿ ದಾಳಿ ನಡೆಸಿದ ಪ್ಯಾಲೆಸ್ತೀನಿನ ಹಮಾಸ್ ಉಗ್ರಗಾಮಿಗಳ ವಿರುದ್ಧ ಇಸ್ರೇಲ್ ಸೇನೆ ನಿರ್ಣಾಯಕ ಯುದ್ಧ ತೀಕ್ಷ÷್ಣಗೊಳಿಸಿದೆ.

ಅಮೆರಿಕ, ಬ್ರಿಟನ್, ಭಾರತ ಸೇರಿದಂತೆ ಜಾಗತಿಕ ರಾಷ್ಟçಗಳ ಶಾಂತಿ ಮನವಿಗೆ ಓಗೊಡದ ಇಸ್ರೇಲ್ ಸೇನೆ ಮತ್ತು ಹಮಾಸ್ ಉಗ್ರರು ದಾಳಿ-ಪ್ರತಿದಾಳಿ ತೀವ್ರಗೊಳಿಸಿದ್ದಾರೆ.

ಇದರ ಪರಿಣಾಮ ಕಳೆದ ಮೂರು ದಿನಗಳ ಭೀಕರ ಕಾಳಗದಲ್ಲಿ ಇಸ್ರೇಲ್‌ನ ೭೦೦ ಜನರು ಬಲಿಯಾಗಿದ್ದರೆ,ಪ್ಯಾಲೆಸ್ತೀನ್‌ನಲ್ಲಿ ಅಷ್ಟೇ ಸಂಖ್ಯೆಯಲ್ಲಿ ಉಗ್ರರು ಮತ್ತು ನಾಗರಿಕರು ಬಲಿಯಾಗಿದ್ದಾರೆ. ಸಹಸ್ರಾರು ಜನರು ಗಾಯಗೊಂಡಿದ್ದು, ಎಲ್ಲೆಡೆ ನಗರ-ಪಟ್ಟಣಗಳು ನಾಶವಾಗಿ ಪರಿಸ್ಥಿತಿ ಮತ್ತಷ್ಟು ಭೀಕರವಾಗಿದೆ.

ಹಮಾಸ್ ನೆಲೆಗಳ ಮೇಲೆ ದಾಳಿ: ಶನಿವಾರ ಬೆಳಗ್ಗೆ ಉಗ್ರರು ನಡೆಸಿದ ದಾಳಿಗೆ ಪೂರ್ಣಪ್ರಮಾಣದ ಸಮರವನ್ನೇ ನಡೆಸಿರುವ ಇಸ್ರೇಲ್, ಈಗಾಗಲೇ ಹಮಾಸ್ ಕೇಂದ್ರ ಕಚೇರಿ ಸೇರಿದಂತೆ ನಾಲ್ಕು ಪ್ರಮುಖ ನೆಲೆಗಳನ್ನು ಕ್ಷಿಪಣಿ ದಾಳಿಯಿಂದ ಧ್ವಂಸಗೊಳಿಸಿದೆ. ಇದಕ್ಕಾಗಿ ನಾಲ್ಕು ಬಾರಿ ವ್ಯಾಪಕ ಪ್ರಮಾಣದ ವಾಯು ಕಾರ್ಯಾಚರಣೆ ನಡೆಸಲಾಗಿದೆ.

ಇದರಲ್ಲಿ ೨೦ ಕ್ಕೂ ಹೆಚ್ಚು ಜೆಟ್‌ಗಳು ಪಾಲ್ಗೊಂಡಿವೆ. ಈಗ ಇಸ್ರೇಲ್ ಜಾಗದಲ್ಲಿ ಕೆಲ ಉಗ್ರರು ಇರಬಹುದು. ಆದರೆ ಎಲ್ಲ ಉಗ್ರ ಪಡೆಗಳನ್ನು ನಾಶಗೊಳಿಸಲಾಗಿದೆ. ನಮ್ಮ ಪ್ರದೇಶಗಳನ್ನು ಮರಳಿ ವಶಪಡಿಸಿಕೊಂಡಿದ್ದೇವೆ. ಇಡೀ ಗಾಜಾ ಪ್ರದೇಶದಲ್ಲಿ ಹಮಾಸ್‌ನ ಮೂಲೋತ್ಪಾಟನೆ ಮಾಡುವುದೇ ನಮ್ಮ ಗುರಿ ಇಸ್ರೇಲ್ ರಕ್ಷಣಾ ಸಚಿವ ಯೋವ್ ಗ್ಯಾಲಂಟ್ ಎಚ್ಚರಿಕೆ ಕೊಟ್ಟಿದ್ದಾರೆ.

ವಿದೇಶಿಗಳ ಒತ್ತೆ: ಈ ಮಧ್ಯೆ, ಹಮಾಸ್ ಉಗ್ರರು ದಾಳಿ ವೇಳೆ ಇಸ್ರೇಲ್ ಯೋಧರು, ವಿದೇಶಿ ಪ್ರವಾಸಿಗರು ಸೇರಿದಂತೆ ನೂರಕ್ಕೂ ಹೆಚ್ಚು ಜನರನ್ನು ಒತ್ತೆಯಾಗಿರಿಸಿಕೊಂಡಿದ್ದಾರೆ. ಅವರ ಬಿಡುಗಡೆಗೆ ಭೂಪ್ರದೇಶದಲ್ಲಿ ಭೀಕರ ಕಾಳಗ ನಡೆಸಲಾಗುತ್ತಿದೆ ಎಂದು ಗ್ಯಾಲಂಟ್ ಹೇಳಿದ್ದಾರೆ.

ಪ್ಯಾಲೆಸ್ತೀನಿಯರಿಗೆ ಆಹಾರ, ನೀರು ಬಂದ್: ಯುದ್ಧ ನಡೆಸಿರುವಂತೆಯೇ ಪ್ಯಾಲೆಸ್ತೀನ್‌ಗೆ ಆಹಾರ, ನೀರು, ಅನಿಲ ಮತ್ತು ವಿದ್ಯುತ್ ಸರಬರಾಜಿಗೆ ಇಸ್ರೇಲ್ ಸೇನೆ ತಡೆಯೊಡ್ಡಿದೆ. ಇದರಿಂದ ಗಾಜಾಪ್ರದೇಶದಲ್ಲಿ ಮೂರು ದಿನಗಳಿಂದ ಜನರು ಆಹಾರ, ನೀರಿಲ್ಲದೆ ಪರದಾಡುತ್ತಿದ್ದಾರೆ.

೯ ಅಮೆರಿಕನ್ನರ ಬಲಿ: ಇದೇ ವೇಳೆ. ಸಂಘರ್ಷದಲ್ಲಿ ತನ್ನ ೯ ನಾಗರಿಕರು ಬಲಿಯಾಗಿದ್ದಾರೆ ಎಂದು ಅಮೆರಿಕ ಸರ್ಕಾರ ಸ್ಪಷ್ಟಪಡಿಸಿದೆ. ಉಳಿದವರನ್ನು ಸುರಕ್ಷಿಗತವಾಗಿ ಕರೆತರಲು ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಬೈಡೆನ್ ಆಡಳಿತ ಹೇಳಿದೆ. ಅಲ್ಲದೆ, ಯಾವುದೇ ಸಮಯದಲ್ಲಿ ಇಸ್ರೇಲ್‌ಗೆ ನೆರವಾಗಲು ಕರಾವಳಿಯಲ್ಲಿ ಪ್ರಬಲ ನೌಕಾಹಡಗನ್ನು ಸಜ್ಜುಗೊಳಿಸಲಾಗಿದೆ ಎಂದು ಅಮೆರಿಕ ಹೇಳಿದೆ.

ಭಾರತೀಯರು ಸುರಕ್ಷಿತ: ಸಮರ ಸಂತ್ರಸ್ತ ಇಸ್ರೇಲಿನಲ್ಲಿ ೧೮ ಸಾವಿರ ಭಾರತೀಯರು ಸುರಕ್ಷಿತರಾಗಿದ್ದಾರೆ. ಅನೇಕ ವಿದ್ಯಾರ್ಥಿಗಳನ್ನು ಈಜಿಪ್ಟ್ ಮಾರ್ಗವಾಗಿ ಸ್ಥಳಾಂತರಿಸಲಾಗಿದೆ ಎಂದು ಟೆಲ್ ಅವೀವ್‌ನಲ್ಲಿರುವ ಭಾರತೀಯ ರಾಜತಾಂತ್ರಿಕ ಕಚೇರಿ ತಿಳಿಸಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular