Thursday, July 23, 2026
Homeವಿದೇಶಟೆಲ್ ಅವೀವಾ ; ಇಸ್ರೇಲ್ ದಾಳಿಗೆ 10 ಪ್ಯಾಲೆಸ್ತೀನಿಯರು ಸಾವು…!!

ಟೆಲ್ ಅವೀವಾ ; ಇಸ್ರೇಲ್ ದಾಳಿಗೆ 10 ಪ್ಯಾಲೆಸ್ತೀನಿಯರು ಸಾವು…!!

ಟೆಲ್ ಅವೀವಾ ; ಆಕ್ರಮಿತಪಶ್ಚಿಮ ದಂಡೆಯ ಉತ್ತರ ಭಾಗದಲ್ಲಿ ಇಸ್ರೇಲ್ ಸೇನಾ ಪಡೆಗಳು ನಡೆಸಿದ ಪ್ರಮುಖ ಕಾರ್ಯಾಚರಣೆಯಲ್ಲಿ ಕನಿಷ್ಠ ೧೦ ಪ್ಯಾಲೆಸ್ತೀನಿಯನ್ನರು ಸಾವನ್ನಪ್ಪಿದ್ದಾರೆ ಎಂದು ಆರೋಗ್ಯ
ಸಚಿವಾಲಯ ಹೇಳಿದೆ.

ಈ ನಡುವೆ ಜೆನಿನ್‌ನಲ್ಲಿರುವ ಎರಡು ಆಸ್ಪತ್ರೆಗಳನ್ನು ಇಸ್ರೇಲಿ ಪಡೆಗಳು ಸುತ್ತುವರಿದಿವೆ ಇಸ್ರೇಲಿ ಭದ್ರತಾ ಪಡೆಗಳು ಅವರು ಜೆನಿನ್ ಮತ್ತು ತುಲ್ಕರ್ಮ್ನಲ್ಲಿ ರಾತ್ರಿಯಿಡೀ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆ
ಪ್ರಾರಂಭಿಸಿದ್ದಾರೆ ಎಂದು ತಿಳಿಸಿದೆ.

ಇಲ್ಲಿಯವರೆಗೆ “ಐದು ಶಸ್ತçಸಜ್ಜಿತ ಭಯೋತ್ಪಾದಕರನ್ನು ಹತ್ಯೆ ಮಾಡಿದ್ದಾರೆ. ಟುಬಾಸ್ ಬಳಿಯ ಅಲ್-ಫರಾ ನಿರಾಶ್ರಿತರ ಶಿಬಿರದಲ್ಲಿ ಏಕಕಾಲದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಇನ್ನೂ ನಾಲ್ವರು ವೈಮಾನಿಕ ದಾಳಿಯಲ್ಲಿ
ಸಾವನ್ನಪ್ಪಿದ್ದಾರೆ ಎಂದು ಅದು ಹೇಳಿದೆ.

ಎರಡು ದಶಕಗಳ ಹಿಂದೆ ಎರಡನೇ ಪ್ಯಾಲೇಸ್ತೀನಿಯನ್ ಇಂಟಿಫಾಡಾ ಅಥವಾ ದಂಗೆಯ ದಿನಗಳ ನಂತರ ಪಶ್ಚಿಮ ದಂಡೆಯಲ್ಲಿ ದಾಳಿ ನಡೆಯುತ್ತಿದೆ. ಕಳೆದ ವರ್ಷ ಅಕ್ಟೋಬರ್ 7 ರಂದು ಇಸ್ರೇಲ್ ಮೇಲೆ ಹಮಾಸ್ ಮಾರಣಾಂತಿಕ ದಾಳಿ ಮತ್ತು ಗಾಜಾದಲ್ಲಿ ನಂತರದ ಯುದ್ಧದ ನಂತರ ಪಶ್ಚಿಮ ದಂಡೆಯಲ್ಲಿ ಹಿಂಸಾಚಾರ ರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.

ಪಶ್ಚಿಮ ದಂಡೆ ಮತ್ತು ಇಸ್ರೇಲಿನಲ್ಲಿ ಇಸ್ರೇಲಿಗಳ ಮೇಲೆ ಮಾರಣಾಂತಿಕ ಪ್ಯಾಲೆಸ್ತೀನ್ ದಾಳಿಯನ್ನು ತಡೆಯಲು ಪ್ರಯತ್ನಿಸುತ್ತಿದ್ದಾರೆ ಎಂದು ಇಸ್ರೇಲಿ ಪಡೆಗಳು ತಮ್ಮ ದಾಳಿ ತೀವ್ರಗೊಳಿಸಿದ್ದರಿಂದ ನೂರಾರು ಪ್ಯಾಲೆಸ್ತೀನಿಯನ್ನರು ಹರ ಸಾಹಸ ನಡೆಸಿದ್ದಾರೆ ಎನ್ನಲಾಗಿದೆ.

ಇಸ್ರೇಲಿ ಮಾಧ್ಯಮಗಳು ನೂರಾರು ಇಸ್ರೇಲಿ ಪಡೆಗಳು ಪಶ್ಚಿಮ ದಂಡೆಯ ಉತ್ತರದ ನಾಲ್ಕು ವಿಭಿನ್ನ ನಗರಗಳಲ್ಲಿ ಸಕ್ರಿಯವಾಗಿವೆ ಎಂದು ವರದಿ ಮಾಡಿದೆ – ಜೆನಿನ್, ತುಲ್ಕರ್ಮ್, ಟುಬಾಸ್ ಮತ್ತು ನಬ್ಲಸ್.ವೆಸ್ಟ್ ಬ್ಯಾಂಕ್‌ನಲ್ಲಿರುವ ಪ್ಯಾಲೇಸ್ಟಿನಿಯನ್ ಆರೋಗ್ಯ ಸಚಿವಾಲಯ ಏಳು ಜನರ ಶವಗಳನ್ನು ಟುಬಾಸ್ಸ ರ್ಕಾರಿ ಆಸ್ಪತ್ರೆಗೆ ತರಲಾಗಿದೆ ಮತ್ತು ಇಬ್ಬರು ಜೆನಿನ್ ಸರ್ಕಾರಿ ಆಸ್ಪತ್ರೆಗೆ ಸಾಗಿಸಿದೆ ಎನ್ನಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular