Monday, February 3, 2025
Flats for sale
Homeವಿದೇಶಟೆಲ್ ಅವೀವಾ : ಇಸ್ರೇಲ್ ದಾಳಿ: ಗಾಜಾದಲ್ಲಿ 80 ಮಂದಿ ಸಾವು..!

ಟೆಲ್ ಅವೀವಾ : ಇಸ್ರೇಲ್ ದಾಳಿ: ಗಾಜಾದಲ್ಲಿ 80 ಮಂದಿ ಸಾವು..!

ಟೆಲ್ ಅವೀವಾ : ಇಸ್ರೇಲ್ ಮತ್ತು ಗಾಜಾ ನಡುವೆ ಕದನ ವಿರಾಮ ಒಪ್ಪಂದ ಅಂತಿಮವಾಗಲು ವಿಳಂಬವಾಗುತ್ತಿರುವ ನಡುವೆ ಗಾಜಾ ಮೇಲೆ ಇಸ್ರೇಲ್ ನಡೆಸಿದ ದಾಳಿಯಲ್ಲಿ ಕನಿಷ್ಠ 80 ಮಂದಿ
ಸಾವನ್ನಪ್ಪಿದ್ದಾರೆ.

ಕಳೆದ ಒಂದು ವರ್ಷಕ್ಕೂ ಅಧಿಕ ಸಮಯದಿಂದ ನಡೆಯುತ್ತಿರುವ ಸಂಘರ್ಷದಲ್ಲಿ ಇದುವರೆಗೂ ಸಾವಿರಾರು ಮಂದಿ ಸಾವನ್ನಪ್ಪಿದ್ದು ಲಕ್ಷಾಂತರ ಮAದಿ ನಿರಾಶ್ರಿತರಾಗಿದ್ದಾರೆ. ಜೊತೆಗೆ ಸಾವಿರಾರು ಮಂದಿ ಮನೆ ಮಠ ತೊರೆದು ಬೇರೆ ಕಡೆ ವಲಸೆ ಹೋಗುವಂತಾಗಿದೆ.

ಕದನ ವಿರಾಮದ ಮಾತುಕತೆಗಳು ಇಸ್ರೇಲ್ ಮತ್ತು ಗಾಜಾ ನಡುವೆ ನಡೆದ ಸಂಘರ್ಷದಲ್ಲಿ 80 ಮಂದಿ ಸಾವನ್ನಪ್ಪಿದ್ದಾರೆ ಎಂದು ಹಮಾಸ್ ನಡೆಸುತ್ತಿರುವ ಆರೋಗ್ಯ ಸಚಿವಾಲಯ ತಿಳಿಸಿದೆ. ಪ್ರಧಾನಿ ಬೆಂಜಮಿನ್ ನೇತಾನ್ಯಾಹು ಸರ್ಕಾರದ ಸಂಪುಟ ಸಭೆ ನಡೆಯುವುದಕ್ಕೂ ಮುನ್ನ ಇಸ್ರೇಲ್ ಸೇನೆ ಹಮಾಸ್ ಮೇಲೆ ನಡೆಸಿದ ದಾಳಿಯಲ್ಲಿ ಈ ಸಾವು ನೋವು ಸಂಭವಿಸಿದೆ.

ಕದನ ವಿರಾಮ ಒಪ್ಪಂದ ಘೋಷಿಸಿದ ನಂತರ ಇಸ್ರೇಲಿ ವೈಮಾನಿಕ ದಾಳಿಗಳು ಮುಂದುವರಿದಿದೆ. ಗಾಜಾ ನಗರದಲ್ಲಿ ಕನಿಷ್ಠ 12 ಜನರು ಸಾವನ್ನಪ್ಪಿದ್ದಾರೆ. ಅಲ್ಲಿ ವೈದ್ಯರು ಮತ್ತು ಸಿಬ್ಬಂದಿಗೆ “ರಕ್ತಸಿಕ್ತ ರಾತ್ರಿ” ಸಮಯದಲ್ಲಿ “ಒಂದು ನಿಮಿಷ ವಿಶ್ರಾಂತಿ ಪಡೆಯಲು ಸಾದ್ಯವಾಗದ ಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಲಾಗಿದೆ.

ಒಪ್ಪಂದದ ಘೋಷಣೆಯ ಪ್ರಕಟಣೆ ಬಂದ ನಂತರವೂ ಗಾಜಾದಲ್ಲಿ 5೦ ಗುರಿಗಳ ಮೇಲೆ ದಾಳಿನಡೆಸಲಾಗಿದೆ. ಎಂದು ಇಸ್ರೇಲ್ ರಕ್ಷಣಾ ಪಡೆಗಳು ಮತ್ತು ಇಸ್ರೇಲಿ ಭದ್ರತಾ ಸಂಸ್ಥೆ ಹೇಳಿಕೆಯಲ್ಲಿ ತಿಳಿಸಿದೆ. ಕತರ‍್ನ ಪ್ರಧಾನ ಮಂತ್ರಿ ಅವರ ಮಾತುಕತೆಗಳ ಮಧ್ಯಸ್ಥಿಕೆ ಮೊದಲ ಆರು ವಾರಗಳ ಕದನ ವಿರಾಮ ಒಪ್ಪಂದದ ಪ್ರಾರಂಭದ ಮೊದಲು ಎರಡೂ ಕಡೆಗಳಲ್ಲಿ “ಶಾಂತ” ಗಾಗಿ ಕರೆ ನೀಡಲಾಗಿದೆ.

2023ರ ಅಕ್ಟೋಬರ್ 7 ರಂದು ಇಸ್ರೇಲ್ ಮೇಲೆ ಅಭೂತಪೂರ್ವ ಗಡಿಯಾಚೆಗಿನ ದಾಳಿಗೆ ಪ್ರತಿಕ್ರಿಯೆಯಾಗಿ ಹಮಾಸ್ ಅನ್ನು ನಾಶಮಾಡಲು ಇಸ್ರೇಲ್ ಅಭಿಯಾನ ಪ್ರಾರಂಭಿಸಿತು,ಇಸ್ರೇಲ್, ಅಮೇರಿಕಾ ಇತರರಿಂದ ಭಯೋತ್ಪಾದಕ ಸಂಘಟನೆ ಎಂದು ನಿಷೇಧಿಸಲಾಗಿದೆ.

ಇಲ್ಲಿಯವರೆಗೆ ಸುಮಾರು 1,2೦೦ ಜನರು ಸಾವನ್ನಪ್ಪಿದ್ದಾರೆ. ಮತ್ತು 251 ಮಂದಿಯನ್ನು ಒತ್ತೆಯಾಳುಗಳನ್ನಾಗಿ ಇರಿಸಿಕೊಳ್ಳಲಾಗಿದೆ. ಗಾಜಾದಲ್ಲಿ 46,788ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಗಾಜಾದ 2.3 ದಶಲಕ್ಷ ಜನಸಂಖ್ಯೆಯಲ್ಲಿ ಹೆಚ್ಚಿನವರು ಸ್ಥಳಾಂತರಗೊAಡಿದ್ದಾರೆ, ವ್ಯಾಪಕ ವಿನಾಶವಿದೆ ಮತ್ತು ಆಹಾರ, ಇಂಧನ, ಔಷಧ ಮತ್ತು ಆಶ್ರಯದ ತೀವ್ರ ಕೊರತೆಯಿದೆ, ಆದರೆ ಸಹಾಯ ಸಂಸ್ಥೆಗಳು ಅಗತ್ಯವಿರುವವರಿಗೆ ಸಹಾಯ
ಪಡೆಯಲು ಹೆಣಗಾಡುತ್ತಿವೆ. 94 ಒತ್ತೆಯಾಳುಗಳನ್ನು ಇನ್ನೂ ಹಮಾಸ್ ಹಿಡಿದಿಟ್ಟುಕೊಂಡಿದೆ ಎಂದು ಇಸ್ರೇಲ್ ಹೇಳುತ್ತದೆ.

RELATED ARTICLES

LEAVE A REPLY

Please enter your comment!
Please enter your name here

Most Popular