Friday, March 13, 2026
Flats for sale
Homeವಿದೇಶಜೆರೆಸಲೇಂ : ಇಸ್ರೇಲ್ ಮೇಲೆ ರಾಕೆಟ್ ದಾಳಿ 500 ಸಾವು.

ಜೆರೆಸಲೇಂ : ಇಸ್ರೇಲ್ ಮೇಲೆ ರಾಕೆಟ್ ದಾಳಿ 500 ಸಾವು.

ಜೆರೆಸಲೇಂ : ಇಸ್ರೇಲ್- ಪ್ಯಾಲೆಸ್ಟೆನ್ ಸಂಘರ್ಷದ ಪರಿಣಾಮ ಇಸ್ರೇಲ್‌ನಲ್ಲಿ ನಡೆದ ರಾಕೆಟ್ ದಾಳಿಯಲ್ಲಿ ೫೦೦ ಮಂದಿಗೂ ಅಧಿಕ ಮಂದಿ ಸಾವನ್ನಪ್ಪಿರುವ ಘಟನೆ ನಡೆದಿದೆ.

“೨೦ ನಿಮಿಷಗಳ ದಾಳಿಯಲ್ಲಿ ಸುಮಾರು” ೫,೦೦೦ ರಾಕೆಟ್ ಹಾರಿಸಲಾಗಿದೆ. ಗಾಜಾದಲ್ಲಿ ೨೩೨ ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ, ಆದರೆ ಇಸ್ರೇಲ್‌ನಲ್ಲಿ ೩೦೦ ಜನರು ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ.

ಉಗ್ರಗಾಮಿ ಗುಂಪು ಹಮಾಸ್ ಹಠಾತ್ ದಾಳಿಯಲ್ಲಿ ೫,೦೦೦ ರಾಕೆಟ್‌ಗಳನ್ನು ಹಾರಿಸಿದ್ದರಿಂದ.
ಇಸ್ರೇಲ್, ಹಮಾಸ್ ವಿರುದ್ಧ ಯುದ್ಧ ಘೋಷಿಸಿದೆ ಪರಿಣಾಮ ಸಾವು ನೋವಿಗೆ ಕಾರಣವಾಗಿದೆ.

ಇಸ್ರೇಲ್ ಸರ್ಕಾರ ಉಗ್ರ ದಾಳಿಗೆ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಪ್ರತಿಜ್ಞೆ ಮಾಡಿದ್ದು ಇದರ ಬೆನ್ನಲ್ಲೇ ವೈಮಾನಿಕ ದಾಳಿ ಪ್ರಾರಂಭಿಸಿದೆ. ಇಸ್ರೇಲ್ ಪ್ರಧಾನಿ ಬೆಂಜಮಿನ್ನೆತನ್ಯಾಹು ಅವರು ತಮ್ಮ ದೇಶ ಯುದ್ಧದಲ್ಲಿದೆ ಮತ್ತು ಹಮಾಸ್ ದಾಳಿಕೋರರಿಗೆ ತಕ್ಕ ಪಾಠ ಕಲಿಸುವುದಾಗಿ ಗುಡುಗಿದ್ದಾರೆ. “ಇಸ್ರೇಲ್ನಾ ಗರಿಕರೇ, ಯುದ್ಧದಲ್ಲಿದ್ದೇವೆ. ಯುದ್ಧವನ್ನು ನಾವು ಗೆಲ್ಲುತ್ತೇವೆ ನೀವು ಭಯ ಹತಾಶರಾಗಬೇಡಿ. ದಾಳಿ ಮಾಡಿರುವ ದಾಳಿಕೋರರಿಗೆ ತಕ್ಕ ಪಾಠ ಕಲಿಸಲಾಗುವುದು ಎಂದು ತಿಳಿಸಿದ್ದಾರೆ.

ಹಬ್ಬದ ರಜೆಯಲ್ಲಿ ಇಸ್ರೇಲ್ , ನಗರದ ಜನರಿಗೆ ಬೆಳಿಗ್ಗೆ ದೇಶದಾದ್ಯಂತ ಜೋರಾಗಿ ಸೈರನ್ ಮೊಳಗುತ್ತಿದ್ದಂತೆ ೫,೦೦೦ ಕ್ಕೂ ಹೆಚ್ಚು ರಾಕೆಟ್‌ಗಳು ಇಸ್ರೇಲ್ ಕಡೆಗೆ ಆಕಾಶಕ್ಕೆ ಚುಮ್ಮಿ ಅದರಿಂದ ಅನಾಹುತ ಸಂಭವಿಸಿದೆ.

ದೇಶದ ರಕ್ಷಣಾ ಪಡೆಗಳು ಹಮಾಸ್ ಉಗ್ರಗಾಮಿಗಳ ಒಳನುಸುಳುವಿಕೆಯೇ ಈ ದುರಂತಕ್ಕೆ ಕಾರಣ ಎಂದು ಭದ್ರತಾ ಪಡೆಗಳು ಆರೋಪಿಸಿವೆ. ದಾಳಿಯಲ್ಲಿ ಪ್ಯಾರಾಗ್ಲೆöÊರ‍್ಗಳನ್ನು ಬಳಸಲಾಗಿದೆ. ಮತ್ತು ರಸ್ತೆಗಳಲ್ಲಿ ಹಾದುಹೋಗುವ ಕಾರುಗಳ ಮೇಲೆ ಗುಂಡು ಹಾರಿಸಲಾಗಿದ್ದು ಈ ದೃಶ್ಯಗಳನ್ನು ಇಸ್ರೇಲ್ ಬಿಡುಗಡೆ ಮಾಡಿದೆ.

ಇಸ್ರೇಲ್ ವಿರುದ್ಧ ಯುದ್ಧ ಪ್ರಾರಂಭಿಸುವ ಹಮಾಸ್ “ಗಂಭೀರ ತಪ್ಪು ” ಮಾಡಿದೆ ಎಂದು ರಕ್ಷಣಾ
ಸಚಿವ ಯೋವ್ ಗ್ಯಾಲಂಟ್ ಹೇಳಿದ್ದಾರೆ.”ಹಮಾಸ್ ಘೋರ ತಪುö್ಪ ಮಾಡಿದೆ ಮತ್ತು ಇಸ್ರೇಲ್ ರಾಜ್ಯದ ವಿರುದ್ಧ ಯುದ್ಧ ಪ್ರಾರಂಭಿಸಿದೆ. ರಕ್ಷಣಾ ಪಡೆಗಳು ಪ್ರತಿ ಸ್ಥಳದಲ್ಲಿ ಶತ್ರುಗಳ ವಿರುದ್ಧ ಹೋರಾಡುತ್ತಿವೆ”

RELATED ARTICLES

LEAVE A REPLY

Please enter your comment!
Please enter your name here

Most Popular