ಜೆರುಸಲೆಂ : ಲೆಬೆನಾನ್ ನಡೆಸಿದ ಕ್ಷಿಪಣಿ ದಾಳಿಯಲ್ಲಿ ಭಾರತೀಯ ಪ್ರಜೆ ಸಾವನ್ನಪ್ಪಿ, ಇನ್ನಿಬ್ಬರು ಗಾಯಗೊಂಡಿದ್ದಾರೆ. ಈ ಘಟನೆ ಇಸ್ರೇಲ್‌ನ ಉತ್ತರ ಗಡಿ ಸಮೀಪ ಮಾರ್ಗಲಿಯೋಟ್‌ನಲ್ಲಿ ಸೋಮವಾರ ಸಂಭವಿಸಿದೆ ಎಂದು ಸುದ್ದಿಸಂಸ್ಥೆಗಳು ವರದಿ ಮಾಡಿವೆ.
ಮೃತಪಟ್ಟ ವ್ಯಕ್ತಿ ಹಾಗೂ ಗಾಯಗೊಂಡ ಇಬ್ಬರು ಕೇರಳ ಮೂಲದವರಾಗಿದ್ದಾರೆ ಎಂದು
ವರದಿಗಳು ತಿಳಿಸಿವೆ. ಮೃತ ವ್ಯಕ್ತಿಯನ್ನು ಕೇರಳದ ಕೊಲ್ಲಂ ಜಿಲ್ಲೆಯ ನಿಬಿನ್ ಮ್ಯಾಕ್ಸ್ವೆಲ್ ಎಂದು ಗುರುತಿಸಲಾಗಿದೆ. ಎರಡು ತಿಂಗಳ ಹಿಂದೆ ಇಸ್ರೇಲ್‌ಗೆ ತೆರಳಿ ತೋಟದಲ್ಲಿ ಕೆಲಸಮಾಡುವ ವೇಳೆ ಲೆಬೆನಾನ್ ನಡೆಸಿದ ಕ್ರಿಪಣಿ ದಾಳಿಯಲ್ಲಿ ಈತ ಮೃತಪಟ್ಟಿದ್ದಾನೆ. ಮ್ಯಾಕ್ಸ್ವೆಲ್ ೫ ವರ್ಷದ ಪುತ್ರಿ ಹಾಗೂ
ಪತ್ನಿಯನ್ನು ಅಗಲಿದ್ದಾನೆ.
ಘಟನೆಯಲ್ಲಿ ಗಾಯಗೊಂಡಿರುವ ಇನ್ನಿಬ್ಬರನ್ನು ಬುಷ್‌ಜೋಸೆಫ್ ಜಾರ್ಜ್ ಮತ್ತು ಪಾಲ್‌ಮೆಲ್ವಿನ್ಎಂ ದು ಗುರುತಿಸಲಾಗಿದೆ. ಲೆಬೆನಾನ್ ನಡೆಸಿದ ಕ್ಷಿಪಣಿ ದಾಳಿ ಕೃಷಿ ಭೂಮಿಯಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಅಪ್ಪಳಿಸಿದೆ ಎಂದು ಸುದ್ದಿಸಂಸ್ಥೆ ವರದಿ ಮಾಡಿವೆ. ಲೆಬೆನಾನಿನ ಹಿಜ್ಬುಲ್ಲ ಉಗ್ರಗಾಮಿಗಳು ಈ ಕ್ಷಿಪಣಿ ದಾಳಿ ನಡೆಸಿದ್ದಾರೆ ಎಂದು ಹೇಳಲಾಗಿದೆ.
ಇಸ್ರೇಲ್, ಗಾಜಾಪಟ್ಟಿ ಮತ್ತು ಹಮಾಸ್ ಉಗ್ರರರನ್ನು ಗುರಿಯಾಗಿಸಿಕೊಂಡು ಅ. ೮ ರಂದು ದಾಳಿ ನಡೆಸಿತ್ತು. ಇದಕ್ಕೆ ಪ್ರತಿಯಾಗಿ ಹಿಜ್ಬುಲ್ಲ ಉಗ್ರಗಾಮಿಗಳು ರಾಕೇಟ್ ಮತ್ತು ಕ್ಷಿಪಣಿ ದಾಳಿಯನ್ನು ನಡೆಸಿದೆ ಎಂದು ಹೇಳಲಾಗಿದೆ.


