Saturday, July 4, 2026
Homeಜಿಲ್ಲೆಚಿಕ್ಕಮಗಳೂರು : ಬಾತುಕೋಳಿ ಹಿಡಿಯಲು ಕೆರೆಗೆ ಇಳಿದ 4 ಮಕ್ಕಳು ನೀರುಪಾಲು.

ಚಿಕ್ಕಮಗಳೂರು : ಬಾತುಕೋಳಿ ಹಿಡಿಯಲು ಕೆರೆಗೆ ಇಳಿದ 4 ಮಕ್ಕಳು ನೀರುಪಾಲು.

ಚಿಕ್ಕಮಗಳೂರು : ಬಾತುಕೋಳಿಯನ್ನು ಹಿಡಿಯಲು ಕೆರೆಗೆ ಇಳಿದ ನಾಲ್ವರು ಮಕ್ಕಳು ನೀರುಪಾಲಾದ ಹೃದಯವಿದ್ರಾವಕ ಘಟನೆ ಚಿಕ್ಕಮಗಳೂರು ತಾಲೂಕಿನ ಅರಳಗುಪ್ಪೆ ಗ್ರಾಮದಲ್ಲಿ ಸೋಮವಾರ ನಡೆದಿದೆ.

ಗ್ರಾಮದ ಕಾರಂಜಿ ಕೆರೆಯಲ್ಲಿ ನಡೆದ ಈ ದುರ್ಘಟನೆಯಲ್ಲಿ ಮಹಾದಿಯಾ, ಅರುನುಸ್, ನಾಯುಸ್ ಹಾಗೂ ಅಬ್ದುಲ್ ರೆಹಮಾನ್ ಮೃತಪಟ್ಟ ಮಕ್ಕಳಾಗಿದ್ದಾರೆ. ಎಲ್ಲರೂ 5ರಿಂದ 14 ವರ್ಷದೊಳಗಿನವರಾಗಿದ್ದು, ಸಂಬಂಧಿಕರ ಮನೆಗೆ ಬಂದಿದ್ದ ವೇಳೆ ಈ ಅವಘಡ ಸಂಭವಿಸಿದೆ.

ಮಾಹಿತಿಯ ಪ್ರಕಾರ, ಬಾತುಕೋಳಿ ಕೆರೆಯೊಳಗೆ ಹೋಗಿದ್ದರಿಂದ ಅದನ್ನು ಹಿಡಿಯಲು ಮಕ್ಕಳು ನೀರಿಗೆ ಇಳಿದಿದ್ದಾರೆ. ಈ ವೇಳೆ ಆಳವಾದ ನೀರಿನಲ್ಲಿ ಸಿಲುಕಿ ನಾಲ್ವರು ಮಕ್ಕಳು ಮುಳುಗಿ ಸಾವನ್ನಪ್ಪಿದ್ದಾರೆ.

ಇನ್ನೊಬ್ಬ ನಾಲ್ಕು ವರ್ಷದ ಅರ್ಮಾನ್ ಪ್ರಾಣಾಪಾಯದಿಂದ ಪಾರಾಗಿದ್ದು, ಅವನ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.

ಈ ಘಟನೆ ಗ್ರಾಮದಲ್ಲಿ ಶೋಕಸಂತಪ್ತ ವಾತಾವರಣ ಸೃಷ್ಟಿಸಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular