Thursday, July 23, 2026
Homeಜಿಲ್ಲೆಚಿಕ್ಕಮಗಳೂರು : ಚಾರ್ಮಾಡಿ ಘಾಟಿಯಲ್ಲಿ KSRTC ಬಸ್ ಬ್ರೇಕ್‌ಫೇಲ್,ತಡೆಗೋಡೆಗೆ ಡಿಕ್ಕಿ ಹೊಡೆಸಿ 70ಕ್ಕೂ ಅಧಿಕ ಪ್ರಯಾಣಿಕರ...

ಚಿಕ್ಕಮಗಳೂರು : ಚಾರ್ಮಾಡಿ ಘಾಟಿಯಲ್ಲಿ KSRTC ಬಸ್ ಬ್ರೇಕ್‌ಫೇಲ್,ತಡೆಗೋಡೆಗೆ ಡಿಕ್ಕಿ ಹೊಡೆಸಿ 70ಕ್ಕೂ ಅಧಿಕ ಪ್ರಯಾಣಿಕರ ಜೀವ ಉಳಿಸಿದ ‌ಚಾಲಕ.

ಚಿಕ್ಕಮಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಉಜಿರೆಯಿಂದ ಚಿಕ್ಕಮಗಳೂರು ತೆರಳುವ ರಸ್ತೆಯಲ್ಲಿ ಸಿಗುವ ಸುಂದರವಾದ ನೈಸರ್ಗಿಕ ನೋಟವಿರುವ ಚಾರ್ಮಾಡಿ ಘಾಟಿ ಎಂದರೆ ಎಲ್ಲರೂ ನೋಡಿದಂತಹ ಸ್ಥಳ.ಆದರೆ ಚಾರ್ಮಾಡಿ ಘಾಟಿನಲ್ಲಿ ಸುಮಾರು 11 ಭಯಾನಕ ತಿರುವುಗಳಿವೆ. ಚಾರಣ ಪ್ರಿಯರಿಗಂತೂ ನೆಚ್ಚಿನ ತಾಣ.ಎತ್ತರಕ್ಕೆ ಹೋದಂತೆ ಮಂಜು ಕವಿದ ವಾತಾವರಣ ಇರುವುದು ಸಹಜ ಇಲ್ಲಿ ಚಲಿಸುವ ವಾಹನಗಳು ಕಂಡೀಶನ್ ನಲ್ಲಿಇರಲೇಬೇಕು ಇಲ್ಲದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ.

ಕೆಎಸ್ಸಾರ್ಟಿಸಿ ಬಸ್ಸೊಂದು ಬ್ರೇಕ್‌ ಫೇಲ್ ಆಗಿದ್ದು, ಚಾಲಕನ ಸಮಯ ಪ್ರಜ್ಞೆಯಿಂದ ಭಾರಿ ಅನಾಹುತ ತಪ್ಪಿದೆ.ತನ್ನ ನೈಪುಣ್ಯತೆಯನ್ನು ಮೆರೆದು ಪ್ರಯಾಣಿಕರ ಜೀವ ಉಳಿಸಿದ ಘಟನೆ ವರದಿಯಾಗಿದೆ.

ಕಡಿದಾದ ತಿರುವಿನಲ್ಲಿ ಬಸ್ಸು ಇಳಿಜಾರಿನಲ್ಲಿ ಇಳಿದು ಅರ್ಧ ದಾರಿ ಕ್ರಮಿಸುತ್ತಿದ್ದಂತೆಯೇ ಒಮ್ಮಿಂದೊಮ್ಮೆಗೇ ಬ್ರೇಕ್‌ ಫೇಲ್‌ ಆಗಿದೆ ಬಸ್ಸಿನ ಬ್ರೇಕ್ ಕಂಟ್ರೋಲ್ ತಪ್ಪುತ್ತಿದ್ದಂತೆ ಮೋರಿಯ ತಡೆಗೋಡೆಗೆ ಡಿಕ್ಕಿ ಹೊಡೆಸಿ ಚಾಲಕ ಸಂತೋಷ್ ಅವರು ಬಸ್ ನಿಲ್ಲಿಸಿದ್ದಾರೆ.ಬಸ್ ಕಡೂರಿನಿಂದ ಮಂಗಳೂರಿಗೆ ತೆರಳುತ್ತಿತ್ತು. ಇಳಿಜಾರಿನಲ್ಲಿ ಬ್ರೇಕ್‌ಫೇಲ್ ಆದ ಹಿನ್ನೆಲೆ ಹರಸಾಹಸ ಪಟ್ಟ ಚಾಲಕ ಬಸ್ಸನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಚಾಲಕನ ಸಮಯ ಪ್ರಜ್ಞೆಯಿಂದ 70ಕ್ಕೂ ಅಧಿಕ ಪ್ರಯಾಣಿಕರ ಜೀವ ಉಳಿಸಿದ್ದಾರೆ ಚಾಲಕನ ಸಮಯ ಪ್ರಜ್ಞೆಗೆ ಪ್ರಯಾಣಿಕರು ಭೇಷ್ ಅಂದಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular